ಬೆಂಗಳೂರು: ಈ ಹಿಂದೆ ಎಐ ಸೀರೆ ಸೃಷ್ಟಿಸಿ ಗಮನ ಸೆಳೆದಿದ್ದ ನ್ಯಾನೊ ಬನಾನದ ಅಪ್ಡೇಟ್ ವರ್ಶನ್ ಈಗ ಆತಂಕಕ್ಕೆ ಕಾರಣವಾಗಿದೆ.

ಗೂಗಲ್, ನ್ಯಾನೊ ಜೆಮಿನಿ ಎಐ ಅಪ್ಲಿಕೇಶನ್ಗಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ನ್ಯಾನೊ ಬನಾನ ಪ್ರೊ ಅನ್ನು ಕಳೆದ ವಾರ ಬಿಡುಗಡೆ ಮಾಡಿದೆ.

ಹಳೆಯ ಅಪ್ಡೇಟ್ಗಳನ್ನು ಬಳಸಿದಂತೆ ಹೊಸದನ್ನು ಜನ ಬಳಸುತ್ತಿದ್ದಾರೆ. ಆದರೆ ನಕಲಿ ದಾಖಲೆಗಳನ್ನು, ಗುರುತಿನ ಚೀಟಿಗಳನ್ನು ರೂಪಿಸುವ ಆತಂಕ ಎದುರಾಗಿದೆ.
.Nano Banana AI Saree: ಏನಿದು ‘ನ್ಯಾನೊ ಬನಾನ ಎಐ ಸ್ಯಾರಿ’ ಟ್ರೆಂಡ್? .
ಹರ್ವೀನ್ ಸಿಂಗ್ ಚಡ್ಡಾ ಎನ್ನುವ ಎಕ್ಸ್ ಬಳಕೆದಾರರೊಬ್ಬರು ನ್ಯಾನೊ ಬನಾನ ಹೇಗೆ ನಕಲಿ ದಾಖಲೆಗಳನ್ನು ರೂಪಿಸುತ್ತದೆ ಎನ್ನುವ ಉದಾಹರಣೆಯನ್ನು ಹಂಚಿಕೊಂಡಿದ್ದಾರೆ.

ಎಐನಲ್ಲಿ ರೂಪಿಸಿದ ನಕಲಿ ಅಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾದರಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನೈಜ ಭಾವಚಿತ್ರವನ್ನೇ ಹೋಲುವಂತಹ ಎಐ ರೂಪಿತ ವ್ಯಕ್ತಿಯ ಭಾವಚಿತ್ರವೂ ಇದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಜೆಮಿನಿ ಆ್ಯಪ್ನ ಲೋಗೊ ಕಾಣಿಸುತ್ತದೆ.

ತಂತ್ರಜ್ಞಾನವನ್ನು ದುರಪಯೋಗಪಡಿಸಿಕೊಳ್ಳುವವರು ಇನ್ಯಾವುದೋ ಎಡಿಟಿಂಗ್ ಆ್ಯಪ್ ಮೂಲಕ ಜೆಮಿನಿ ಲೋಗೊವನ್ನೂ ತೆಗೆಯುವ ಪ್ರಯತ್ನ ಮಾಡಬಹುದು. ಆದರೆ ಫೋಟೊದೊಂದಿಗೆ ಸಂಯೋಜನೆಗೊಂಡ ಸಿಂಥ್ಐಡಿಯನ್ನು ತೆಗೆದುಹಾಕುವುದು ಕಷ್ಟ. ಅದರೂ, ಒಮ್ಮೆ ಕ್ರಿಯೆಟ್ ಮಾಡಿದ ನಕಲಿ ದಾಖಲೆಗಳನ್ನು ಕಾರ್ಡ್ ಫಾರ್ಮ್ ಫ್ಯಾಕ್ಟರ್ನಲ್ಲಿ ಪ್ರತಿಯಾಗಿ ಪರಿವರ್ತಿಸಿದ ನಂತರ, ಸಾಮಾನ್ಯ ವ್ಯಕ್ತಿಗೆ ದಾಖಲೆ ಅಸಲಿಯೋ, ನಕಲಿಯೋ ಎನ್ನುವುದನ್ನು ಪತ್ತೆ ಮಾಡುವುದು ಕಷ್ಟಕರವಾಗಿರುತ್ತದೆ.

ಹೋಟೆಲ್ಗಳಲ್ಲಿ ಗುರುತಿನ ಚೀಟಿ ನೀಡಿದಾಗ ಅಥವಾ ವಿಮಾನ ನಿಲ್ದಾಣದಲ್ಲಿ ಡಿಜಿ–ಯಾತ್ರಾ ಹೊರತಾಗಿ ಪ್ರವೇಶ ಪಡೆಯುವಾಗಲೂ ಆ ದಾಖಲೆಗಳು ನಕಲಿ ಎಂದು ಗೊತ್ತಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.