ಮುಂಬೈ: ಸ್ಮಾರ್ಟ್ಫೋನ್ ತಯಾರಿಸುವ ಒನ್ಪ್ಲಸ್ ಕಂಪನಿಯು ಪ್ಯಾಡ್ 3 ಎಂಬ ಟ್ಯಾಬ್ಲೆಟ್ ಅನ್ನು ಸೆ. 5ರಂದು ಬಿಡುಗಡೆ ಮಾಡುತ್ತಿದ್ದು, ಸ್ನಾಪ್ಡ್ರಾಗನ್ 8 ಎಲೈಟ್ ಪ್ಲಾಟ್ಫಾರ್ಮ್ ಅನ್ನು ಇದು ಹೊಂದಿದೆ. ಜತೆಗೆ ವೇಗದ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

13.2 ಇಂಚಿನ 3.4ಕೆ ಡಿಸ್ಪ್ಲೇ ಹೊಂದಿರುವ ಪ್ಯಾಡ್ 3, 12 ಬಿಟ್ ಕಲರ್ ಡೆಪ್ತ್ ಹೊಂದಿದೆ. 315 ಪಿಪಿಐ ಮತ್ತು 7:5 ಆಸ್ಪೆಕ್ಟ್ ರೇಷಿಯೊ ಇದ್ದು, ಏಕಕಾಲಕ್ಕೆ ಹಲವು ಕೆಲಸಗಳು, ಗೇಮಿಂಗ್ ಮತ್ತು ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಈ ಟ್ಯಾಬ್ಲೆಟ್ ಅನ್ನು ಕಂಪನಿ ಅಭಿವೃದ್ಧಿಪಡಿಸಿದೆ.

16 ಜಿ.ಬಿ. ರ್ಯಾಮ್ ಹೊಂದಿರುವ ಈ ಟ್ಯಾಬ್ಲೆಟ್ 12,140 ಎಂಎಎಚ್ ಬ್ಯಾಟರಿ ಮತ್ತು 80 ವಾಟ್ನ ಸೂಪರ್ವೂಕ್ ಚಾರ್ಜಿಂಗ್ ಸೌಕರ್ಯವನ್ನು ಹೊಂದಿದೆ. ಸ್ಟಾರ್ಮ್ ಬ್ಲೂ ಮತ್ತು ಫ್ರೊಸ್ಟೆಡ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರುವ ಒನ್ಪ್ಲಸ್ನ ಪ್ಯಾಡ್ 3 ಅನ್ನು ಸೆ. 5ರಿಂದ 7ರೊಳಗೆ ಖರೀದಿಸಿದರೆ ಅವರಿಗೆ ₹7,198 ಮೌಲ್ಯದ ‘ಸ್ಟೈಲೊ 2’ ಎಂಬ ಸ್ಟೈಲೆಸ್ ಅನ್ನು ಉಚಿತವಾಗಿ ನೀಡುವುದಾಗಿ ಕಂಪನಿ ಹೇಳಿದೆ.

12ಜಿಬಿ ಮತ್ತು 256ಜಿಬಿ ಮಾದರಿಯ ಪ್ಯಾಡ್ 3ಕ್ಕೆ ₹42,999 ಹಾಗೂ 16ಜಿಬಿ ಮತ್ತು 512ಜಿಬಿ ಮಾದರಿಗೆ ₹47,999 ದರವನ್ನು ಕಂಪನಿ ನಿಗದಿಪಡಿಸಿದೆ. ಆಯ್ದ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಖರೀದಿಸಿದರೆ ₹5ಸಾವಿರ ಬ್ಯಾಂಕ್ ರಿಯಾಯಿತಿ ಸಿಗಲಿದೆ. ಜತೆಗೆ 12 ತಿಂಗಳು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಇಎಂಐ ಆಯ್ಕೆಯೂ ಲಭ್ಯ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒನ್ಪ್ಲಸ್ ಮಳಿಗೆ, OnePlus.in, ಅಮೆಜಾನ್, ಫ್ಲಿಪ್ಕಾರ್ಟ್, ಕ್ರೊಮಾ, ರಿಲಯನ್ಸ್, ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ನಲ್ಲಿ ಲಭ್ಯ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.