ಭಾನುವಾರ, ಮೇ 16, 2021
24 °C

Poco X3 Pro: ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Credit: Poco India

ಬೆಂಗಳೂರು: ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪ್ರಮುಖ ಕಂಪನಿ ಪೋಕೋ, ಹೊಸ ಎಕ್ಸ್ ಸರಣಿಯಲ್ಲಿ X3 Pro ಫೋನ್ ಬಿಡುಗಡೆ ಮಾಡಿದೆ.

ನೂತನ ಪೋಕೋ X3 Pro ಸ್ಮಾರ್ಟ್‌ಫೋನ್, 6.67 ಇಂಚಿನ ಫುಲ್ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 860 ಒಕ್ಟಾ ಕೋರ್ ಪ್ರೊಸೆಸರ್ ಜತೆಗೆ, ಅಡ್ರೆನೊ 640 ಬೆಂಬಲ ಹೊಂದಿದೆ.

ಆಂಡ್ರಾಯ್ಡ್ 11 ಆಧಾರಿತ MIUI 12 ಕಾರ್ಯಾಚರಣೆ ವ್ಯವಸ್ಥೆ, 6 GB ಮತ್ತು 8 GB LPDDR4X RAM ಜತೆಗೆ 128 GB ಸ್ಟೋರೇಜ್ ಹೊಂದಿದೆ. 5,160mAh ಬ್ಯಾಟರಿ ಹಾಗೂ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದರ ವಿಶೇಷತೆಯಾಗಿದೆ.

ಕ್ಯಾಮರಾ ಎಷ್ಟಿದೆ?

ಹೊಸ ಪೋಕೋ X3 Pro ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ನಾಲ್ಕು ಕ್ಯಾಮರಾ ಲೆನ್ಸ್ ವ್ಯವಸ್ಥೆ ಹೊಂದಿದೆ. 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್, 2+2 ಮೆಗಾಪಿಕ್ಸೆಲ್ ಹಾಗೂ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದರಲ್ಲಿದೆ.

ಬೆಲೆ ಮತ್ತು ಲಭ್ಯತೆ

ಪೋಕೋ X3 Pro ಫೋನ್, ಗೋಲ್ಡನ್, ಗ್ರಾಫೈಟ್ ಬ್ಲ್ಯಾಕ್ ಮತ್ತು ಸ್ಟೀಲ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಮೂಲಕ ಏಪ್ರಿಲ್ 6 ರಿಂದ ದೊರೆಯಲಿದೆ. 

6GB RAM + 128GB ಮಾದರಿಗೆ ₹18,999 ಮತ್ತು 8GB RAM + 128GB ಆವೃತ್ತಿಗೆ ₹20,999 ದರವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು