ಮಾನವನಿರ್ಮಿತವಾದರೂ ಮನುಷ್ಯರನ್ನೇ ಮೀರಿಸುವಂತೆ ಕೆಲಸ ಮಾಡಬಲ್ಲ ರೋಬೋಗಳು ತಮ್ಮ ಕಾರ್ಯಕ್ಷಮತೆ ಹಾಗೂ ಅತ್ಯುನ್ನತ ಸಾಮರ್ಥ್ಯಗಳಿಂದಾಗಿ ಅನೇಕ ವಲಯಗಳ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇಂದಿನ ವೇಗದ ಬದುಕಿಗೆ ಅವು ಅನಿವಾರ್ಯವೂ ಹೌದು. ಆದರೆ ನಮ್ಮ ಆರಾಮದಾಯಕ ಹಾಗೂ ಆಧುನಿಕ ಬದುಕಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನು ಒದಗಿಸಬಲ್ಲ ಈ ರೋಬೋಟುಗಳು, ವಿಶ್ವಸಂಸ್ಥೆಯು ಎಲ್ಲ ದೇಶಗಳಿಗೂ ನೀಡಿರುವ ಸುಸ್ಥಿರ ಅಭಿವೃದ್ದಿಯ ಗುರಿಗಳಿಗೆ ತೊಡಕುಂಟುಮಾಡುತ್ತಿವೆ.

ಮನುಷ್ಯನಿಗೆ ಮೀರಿದ ಸಾಮರ್ಥ್ಯವಿದ್ದರೂ ಅವು ಯಂತ್ರಗಳಷ್ಟೇ. ಜೀವಿಗಳು ಸತ್ತರೆ ಮಣ್ಣಲ್ಲಿ ಕರಗಿ ಹೋಗುತ್ತವೆ. ಆದರೆ ರೋಬೋಟುಗಳು? ಅರ್ಥಾತ್, ಅವು ತಮ್ಮ ಜೀವನದುದ್ದಕ್ಕೂ ಸಾಕಷ್ಟು ತ್ಯಾಜ್ಯಗಳನ್ನು ಉತ್ಪಾದಿಸುವುದಲ್ಲದೆ ಮಣ್ಣಿನಲ್ಲಿ ಕರಗುವುದೂ ಇಲ್ಲ. ಒಮ್ಮೆ ರೋಬೋಟಿನ ಆಯುಸ್ಸು ಮುಗಿದರೆ ಎಲೆಕ್ಟ್ರಾನಿಕ್ ಸಾಧನಗಳು, ವಾಹನಗಳು, ಪ್ಲಾಸ್ಟಿಕ್ಕುಗಳು, ಮುಂತಾದವುಗಳಂತೆ ಇವೂ ಕೆಲಸಕ್ಕೆ ಬಾರದ ತ್ಯಾಜ್ಯವಾಗಿಬಿಡುತ್ತವೆ. ಜೈವಿಕವಾಗಿಯೂ ವಿಘಟನೆಯಾಗದು. ಇವು ಸೇರುತ್ತ ಸೇರುತ್ತ ರಾಶಿಯಾಗಿ ಬೆಳೆದುಬಿಡುತ್ತವೆ. ಇ-ತ್ಯಾಜ್ಯಗಳ ಗುಂಪಿಗೆ ಹೊಸ ಸದಸ್ಯನ ಸೇರ್ಪಡೆಯಾಗಿ ಅಭಿವೃದ್ದಿಶೀಲದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಕಂಟಕವಾಗಿ ಪರಿಣಮಿಸುತ್ತದೆ. ಇಂತಹ ಗಂಭೀರ ಸಮಸ್ಯೆಗೆ ಚೀನಾದ ವಿಜ್ಞಾನಿಗಳು ಪರಿಹಾರವನ್ನು ಪತ್ತೆ ಮಾಡಿದ್ದಾರಂತೆ. ಅದುವೇ ರೋಬೋಟು ತಯಾರಿಕೆಗಾಗಿ ಜೈವಿಕ ವಿಘಟನೆಯಾಗಬಲ್ಲಂತಹ ನವೀನ ಮಾದರಿಯ ವಸ್ತು. ಈ ವಸ್ತುವಿನಿಂದ ರೋಬೋಟುಗಳನ್ನು ಅಭಿವೃದ್ದಿಪಡಿಸಿದರೆ ಆಗ ರೋಬೋ–ತ್ಯಾಜ್ಯ ಶೂನ್ಯವಾಗುತ್ತದೆಯಂತೆ.

ಹೌದು. ಈ ನವೀನ ವಸ್ತುವನ್ನು ಸೆಲ್ಯುಲೋಸ್, ಸೋಡಿಯಂ ಕ್ಲೋರೈಡ್ ಮತ್ತು ಜೆಲಾಟಿನ್ಗಳನ್ನು ಬಳಸಿಕೊಂಡು ಸಿದ್ದಪಡಿದ್ದಾರೆ. ಈ ಆರ್ಗಾನಿಕ್ ವಸ್ತುಗಳಿಂದ ತಯಾರಾದ ಆರ್ಗನೋಜೆಲ್ಗಳನ್ನು ಇಂತಹ ವಸ್ತುಗಳನ್ನು ಬಳಸಿಕೊಂಡು ವಿಶೇಷ ವಸ್ತುವೊಂದನ್ನು ಚೀನೀಯರು ತಯಾರಿಸಿದ್ದಾರೆ. ಇದು ಪ್ಲಾಸ್ಟಿಕ್ಕು, ಉಕ್ಕು, ಕಬ್ಬಿಣ ಇವುಗಳಂತೆ ರೋಬೋಟುಗಳನ್ನು ತಯಾರಿಸಲೆಂದೇ ರೂಪಿಸಿರುವ ಒಂದು ವಿಶೇಷ ವಸ್ತು. ಇದು ಮುಟ್ಟಲು ಯಂತ್ರಗಳಂತಿರದೆ, ನಮ್ಯವಾಗಿರುತ್ತವೆ. ಜೊತೆಗೆ ಸದೃಢವಾಗಿಯೂ ಇರುತ್ತವೆ. ಇವುಗಳಿಗಿರುವ ನಮ್ಯತೆ (Flexibility)ಯಿಂದಾಗಿ ಸಾಫ್ಟ್ ರೋಬೋಟಿಕ್ ವ್ಯವಸ್ಥೆಯಲ್ಲಿ ಬಳಸಿಕೊಳ್ಳಬಹುದು. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಇವುಗಳ ಉಪಯೋಗವನ್ನು ಹೆಚ್ಛಾಗಿ ನಿರೀಕ್ಷಿಸಬಹುದಾಗಿದೆ. ಕೊನೆಯಲ್ಲಿ ಅವುಗಳ ಕೆಲಸದ ಕ್ಷಮತೆ ಮುಗಿದ ಮೇಲೆ ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ವಿಸರ್ಜನೆ ಮಾಡಿಯೂಬಿಡಬಹುದು. ಅಥವಾ ಅವನ್ನೆಲ್ಲಾ ಸಂಗ್ರಹಿಸಿ, ಸಂಸ್ಕರಿಸಿ, ಅಂತಹುದೇ ರೋಬೋಟುಗಳ ಮರುಉತ್ಪಾದನೆಗೂ ಮರುಬಳಕೆಯನ್ನು ಮಾಡಬಹುದು. ಇದನ್ನು ‘ಕ್ಲೋಸ್ಡ್ ಲೂಪ್ ಸಸ್ಟೈನಬಲ್ ರೋಬಾಟಿಕ್’ ಎನ್ನುತ್ತೇವೆ. ಇವುಗಳ ಬಳಕೆ ಸುಗಮವಾಗಿದ್ದು ಮನುಷ್ಯ-ರೋಬೋಟುಗಳ ನಡುವೆ ಪರಸ್ಪರ ಸಂಘರ್ಷ ಉಂಟಾಗುವುದಿಲ್ಲ. ಜೊತೆಗೆ ಸುಸ್ಥಿರ ಭವಿಷ್ಯಕ್ಕೆ ಹೊಸ ಹಾದಿಯನ್ನೂ ತೆರೆಯುತ್ತದೆ.

ಈ ಮಾದರಿಯನ್ನು ಸಿದ್ದಪಡಿಸಲು ಸೆಲ್ಯುಲೋಸನ್ನು ಸೋಡಿಯಂ ಹೈಡ್ರಾಕ್ಸೈಡಿನ ಜಲೀಯ ದ್ರಾವಕ ಅಥವಾ ಯೂರಿಯಾ ದ್ರಾವಕದಲ್ಲಿ ಕರಗಿಸಿ ಪಾರದರ್ಶಕ ದ್ರಾವಣವನ್ನು ತಯಾರಿಸಿಕೊಂಡಿದ್ದಾರೆ. ನಂತರ ಅದನ್ನು ‘ನಿರಯಾನೀಕರಿಸಿದ’ (De–ionised) ನೀರಿನಲ್ಲಿ ಮುಳುಗಿಸಲಾಗಿದೆ. ಈ ಹಂತದಲ್ಲಿ ಒಂದಿಷ್ಟು ಸೆಲ್ಯುಲೋಸ್ಕಣಗಳು ಕೂಡಿಕೊಂಡು ನ್ಯಾನೋಫೈಬರುಗಳಾಗಿ ಮಾರ್ಪಾಡಾಗುತ್ತವೆ; ಒಂದಿಷ್ಟು ಸೆಲ್ಯುಲೋಸ್ ಕ್ರಿಸ್ಟಲೈಟ್ ಹೈಡ್ರೇಟ್ಗಳಾಗಿ ರೂಪುಗಳ್ಳುತ್ತವೆ. ‘ರೀಜನರೇಷನ್ ಪ್ರೊಸೆಸ್’ ಎನ್ನುವ ಈ ಹಂತದಲ್ಲಿ ಹೈಡ್ರೋಜನ್ ಬಾಂಡುಗಳ ರಚನೆಯಿಂದಾಗಿ ಸೆಲ್ಯುಲೋಸುಗಳ ಅಡ್ಡಸಂಯೋಜನೆಯಾಗಿ ಹೈಡ್ರೋಜೆಲ್ ಉತ್ಪಾದನೆಯಾಗುತ್ತದೆ. ಸೆಲ್ಯುಲೋಸು ಸರಪಳಿಗಳ ‘ಅರೆ-ಅನಮ್ಯ ಗುಣ (Semi Rigid) ಮತ್ತು ಹೈಡ್ರೋಜನ್ ಬಂಧಗಳಿಂದಾಗಿ ಸದೃಢವಾದ ಸೆಲ್ಯುಲೋಸ್ಹಾಳೆಗಳು ತಯಾರಾಗುತ್ತವೆ. ಆದರೆ ಹೈಡ್ರೋಜನ್ ಬಂಧಗಳ ನಡುವಿನ ಪರಸ್ಪರ ರಾಸಾಯನಿಕ ಸಂಬಂಧಿಂದಾಗಿ ಇವುಗಳ ಸರಪಳಿ ವಿಸ್ತರಣೆಯಲ್ಲಿ ತೊಡಕುಂಟಾಗುತ್ತದೆ. ಇದನ್ನು ತಪ್ಪಿಸಲು ಗ್ಲಿಸರಾಲನ್ನು ಸೇರಿಸುತ್ತಾರೆ. ಆಗ ದೊರೆತ ಪಾರದರ್ಶಕವಾದ ಸೆಲ್ಯುಲೋಸು ಹಾಳೆಯನ್ನು ಒಣಗಿಸಿ, ನಂತರ ಉಪ್ಪಿನ (Sodium Chloride) ಅಣುಗಳನ್ನು ಸೇರಿಸಿದ ಜೆಲಾಟಿನ್ ಬಳಸಿ ಆರ್ಗನೋಜೆಲ್ ತಯಾರಿಸಿಕೊಂಡು ಸೆಲ್ಯುಲೋಸು ಹಾಳೆಗಳ ಮೇಲೆ ಸಂವೇದನಾ ಪದರವಾಗಿ ಲೇಪಿಸಲಾಗುತ್ತದೆ. ಆಗ ಗಟ್ಟಿಯಾದ ಸೆಲ್ಯುಲೋಸ್ಹಾಳೆಗಳು ಸಿದ್ದ! ಸೆಲ್ಯುಲೋಸು, ರೋಬೋಟುಗಳಿಗೆ ಅವಶ್ಯವಾಗಿರಬೇಕಾದ ಸದೃಢ ರಚನೆಯನ್ನು ಒದಗಿಸಿದರೆ, ಸ್ಥಿತಿಸ್ಥಾಪಕ ಗುಣವುಳ್ಳ (Elasticity) ಜೆಲಾಟಿನ್ ಆಧಾರಿತ ಆರ್ಗನೋಜೆಲ್ ನಮ್ಯ ಲಕ್ಷಣಗಳನ್ನು ಹೊಂದಿದ್ದು ಇವೆರಡರ ಸಂಯೋಜನೆ ಸಾಫ್ಟ್ ರೋಬೋಟಿಕ್ಸ್ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯಾಗಿದೆ. ಜೊತೆಗೆ ಇವುಗಳ ಸದೃಢತೆಯನ್ನು ಪರೀಕ್ಷಿಸಿದಾಗ ಗಮನಾರ್ಹ ಫಲಿತಾಂಶವೂ ಸಿಕ್ಕಿದೆಯಂತೆ. ಮುಂದೆ ಸೆಲ್ಯುಲೋಸು ಹಾಳೆಗಳು ಮಣ್ಣಿನಲ್ಲಿ ಹೇಗೆ ಕರಗುತ್ತದೆ ಎಂದು ಪರೀಕ್ಷಿಸಿದ್ದಾರೆ. ಇದನ್ನು ಖಚಿತಪಡಿಸಿಕೊಳ್ಳಲು ಕಾಗದ ಮತ್ತು ಒರಿಗ್ಯಾಮಿ ಮಾದರಿಗಳಲ್ಲಿ ಸಾಮಾನ್ಯವಾಗಿ ಬಳಸುವ ಪಾಲಿಇಥಿಲೀನ್ ಟೆರೆಪ್ತಲೇಟ್(ಪಿಇಟಿ)ಗಳ ವಿಘಟನೆಯೊಂದಿಗೆ ಹೋಲಿಸಿ ನೋಡಿದ್ದಾರೆ. ಸೆಲ್ಯುಲೋಸ್ ಹಾಗೂ ಕಾಗದ ಮಣ್ಣಿನಲ್ಲಿ ಕರಗಿ, ‘ಪಿಇಟಿ’ಯು ಹಾಗೇ ಉಳಿದುಕೊಂಡಿತಂತೆ.

ಈಗಾಗಲೇ ಒರಿಗ್ಯಾಮಿ ರೋಬೋಟುಗಳನ್ನು ತಯಾರಿಸಿಯೂ ನೋಡಿದ್ದಾರೆ, ಚೀನೀ ವಿಜ್ಞಾನಿಗಳು. ಇವು ಹಿಗ್ಗುವ, ಕುಗ್ಗುವ ಮತ್ತು ಎಲ್ಲಾ ದಿಕ್ಕುಗಳಲ್ಲಿಯೂ ಬಾಗಬಲ್ಲಂತಹ ಸಾಮರ್ಥ್ಯವುಳ್ಳವಂತೆ. ಅಂತೂ ತ್ಯಾಜ್ಯವನ್ನು ತಗ್ಗಿಸುವ ಪರಿಸರಸ್ನೇಹಿ ರೋಬೋಟುಗಳನ್ನು ತಯಾರಿಸಲು ಪರ್ಯಾಯವೊಂದು ರೂಪುಗೊಂಡಿದೆ. ಆದರೆ ಇವುಗಳ ಹೆಚ್ಚಿನ ಪ್ರಮಾಣದ ಉತ್ಪಾನೆಯಾಗಬೇಕಿರುವುದು ಬಾಕಿಯಿದೆ. ಮುಂದೆ ಈ ವಸ್ತುವನ್ನು ಬಳಸಿಕೊಂಡು ಕಠಿಣವಾದ ಕೆಲಸಗಳನ್ನು ಮಾಡಬಲ್ಲಂತಹ ಬಿರುಸಾದ, ವಿದ್ಯುತ್ವಾಹಕವಾದ, ಸುಸ್ಥಿರ ಹಾಗೂ ಸ್ವಯಂ ಸಂವೇದಿ ರೋಬೋಟುಗಳನ್ನು ಅಭಿವೃದ್ದಿಪಡಿಸಬೇಕಿದೆ. ಹಾಗೂ ಇವುಗಳಿಂದಾದ ರೋಬೋಟುಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಬೇಕಿದೆ ಎನ್ನುತ್ತಾರೆ, ವಿಜ್ಞಾನಿಗಳು.

ದೃಢವಾದ ಸೆಲ್ಯುಲೋಸ್ಹಾಳೆಗಳು ಮತ್ತು ಜೆಲಾಟಿನ್-ಉಪ್ಪಿನ ಆರ್ಗನೋಜೆಲ್ ಇವುಗಳಿಂದ ಮಾಡಿದ ಈ ವಿಶೇಷ ವಸ್ತುವು, ಜೈವಿಕವಾದರೂ ಬಹಳ ಸದೃಢವಾಗಿದ್ದು ರೋಬೋಟಿನಂತೆ ಕೆಲಸ ಮಾಡುವ ಬಾಹುಬಲವನ್ನೂ ಹೊಂದಿದೆ. ಮನುಷ್ಯ-ರೋಬೋಟಿನ ನಡುವೆ ಸಂವಹನ ನಡೆಸಬಲ್ಲಂತಹ ಬಹುಆಯಾಮದ ಸಾಮರ್ಥ್ಯವುಳ್ಳ ಸಾಧನವೂ ಆಗಿದೆ. ಅಷ್ಟೇ ಅಲ್ಲದೆ, ರೋಬೋಟು ಹಾಗೂ ಕಂಪ್ಯೂಟರುಗಳ ನಡುವಿನ ಸಂಪರ್ಕವೂ ಸುಲಭಸಾಧ್ಯವಿದೆಯಂತೆ. ಇವು ಸ್ವಯಂ ಸಂವೇದಿಗಳಾಗಿದ್ದು ತಮ್ಮ ಒತ್ತಡ ಹಾಗೂ ಕುಂದುಕೊರತೆಗಳನ್ನು ಯಾವುದೇ ಹೆಚ್ಚುವರಿ ಸೆನ್ಸಾರುಗಳ ಸಹಾಯವಿಲ್ಲದೆ ತಾವೇ ಗುರುತಿಸಿಕೊಂಡು ನಿರ್ವಹಿಸಿಕೊಳ್ಳಬಲ್ಲವಂತೆ. ಹಾಗಾಗಿ ಈ ಒರಿಗ್ಯಾಮಿ (ಸೆಲ್ಯುಲೋಸ್ ಆಧಾರಿತ) ಮಾದರಿಯು, ಸಾಫ್ಟ್ ರೋಬೋಟಿಕ್ಸ್ ನಲ್ಲಿ ಬಳಸುತ್ತಿರುವ ಪ್ಲಾಸ್ಟಿಕ್ಕು ಸಾಧನಗಳು ಹಾಗೂ ಸೆನ್ಸಾರು ವಸ್ತುಗಳಿಗೆ ಉತ್ತಮ ಪರ್ಯಾಯವಾಗುವುದನ್ನು ಎದುರು ನೋಡೋಣ..! .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.