TECNO POVA 3: 7000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ ಬಿಡುಗಡೆ

ಬೆಂಗಳೂರು: ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್ ಟೆಕ್ನೋ, ದೇಶದಲ್ಲಿ ನೂತನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ಪೋವಾ ಸರಣಿಯಲ್ಲಿ ಹೊಸ ಟೆಕ್ನೋ ಪೋವಾ 3 ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 7000mAh ಬ್ಯಾಟರಿ ಹಾಗೂ 33W ಫಾಸ್ಟ್ ಚಾರ್ಜಿಂಗ್ ವಿಶೇಷತೆ ಹೊಂದಿದೆ.
ತನ್ನ ಸರಣಿಯಲ್ಲೇ ಅತಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್ಫೋನ್ ಇದು ಎಂದಿರುವ ಟೆಕ್ನೋ ಕಂಪನಿ, ಹೊಸ ಫೋನ್ ಜೂನ್ 27ರಿಂದ ಅಮೆಜಾನ್ ಮೂಲಕ ದೊರೆಯಲಿದೆ ಎಂದು ಹೇಳಿದೆ.
ಹೊಸ ಮ್ಯಾಕ್ಬುಕ್ ಏರ್ ಮತ್ತು ಪ್ರೊ ಬಿಡುಗಡೆ ಮಾಡಿದ ಆ್ಯಪಲ್
ಟೆಕ್ನೋ ಪೋವಾ 3
6.9 ಇಂಚಿನ ಫುಲ್ ಎಚ್ಡಿ+ ಡಿಸ್ಪ್ಲೇ, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಜತೆಗೆ 2+2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಹೊಂದಿದೆ. ಅಲ್ಲದೆ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಪೋವಾ 3 ಸ್ಮಾರ್ಟ್ಫೋನ್ನಲ್ಲಿದೆ.
ಹಿಲಿಯೊ ಜಿ88 ಪ್ರೊಸೆಸರ್ ಬೆಂಬಲ ಇದ್ದು, 4GB+ 64GB ಮತ್ತು 6GB+ 128GB ಆವೃತ್ತಿಯಲ್ಲಿ ವಿಸ್ತರಿಸಬಹುದಾದ RAM ಮತ್ತು ಮೆಮೊರಿ ಸೌಲಭ್ಯದೊಂದಿಗೆ ದೊರೆಯಲಿದೆ.
ಗ್ಯಾಜೆಟ್ ಮಾರುಕಟ್ಟೆಗೆ ಬಂತು ಹೊಸ ಐಕ್ಯೂ ಸ್ಮಾರ್ಟ್ಫೋನ್
ಬೆಲೆ ವಿವರ
ಆರಂಭಿಕ ವಿಶೇಷ ಕೊಡುಗೆಯಾಗಿ ಟೆಕ್ನೋ ಪೋವಾ 3 ಸ್ಮಾರ್ಟ್ಫೋನ್ 4GB+ 64GB ಮಾದರಿಗೆ ₹11499 ಮತ್ತು 6GB+ 128GB ಆವೃತ್ತಿಗೆ ₹12999 ದರ ಹೊಂದಿದೆ. ಟೆಕ್ ಸಿಲ್ವರ್, ಇಕೋ ಬ್ಲ್ಯಾಕ್ ಮತ್ತು ಎಲೆಕ್ಟ್ರಿಕ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಹೊಸ ಟೆಕ್ನೋ ಪೋವಾ 3 ಲಭ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.