ಶುಕ್ರವಾರ, ಜನವರಿ 21, 2022
30 °C

ವಿವೊ Y33s ಸ್ಮಾರ್ಟ್‌ಫೋನ್ ದರ ₹1,000 ಹೆಚ್ಚಳ: ಇಲ್ಲಿದೆ ವಿವರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

VIVO India

ಬೆಂಗಳೂರು: ವಿವೊ, ದೇಶದ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಿದ್ದ ಸ್ಮಾರ್ಟ್‌ಫೋನ್ ಒಂದರ ಬೆಲೆಯಲ್ಲಿ ₹1,000 ಹೆಚ್ಚಳ ಮಾಡಿದೆ.

ವಿವೊ Y ಸರಣಿಯಲ್ಲಿ ನೂತನ Y33s ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು.

6.58 ಇಂಚಿನ ಫುಲ್ ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ, ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಪರಿಷ್ಕೃತ ದರ

ವಿವೊ Y33s ಸ್ಮಾರ್ಟ್‌ಫೋನ್ ದರ ಆರಂಭಿಕ ಆವೃತ್ತಿ 8 GB + 128 GB ಮಾದರಿಗೆ ₹1,000 ಏರಿಕೆ ಬಳಿಕ ₹18,990 ಆಗಿದೆ.

ಮಿಡ್ಡೇ ಡ್ರೀಮ್ ಮತ್ತು ಮಿರರ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ವಿವೊ Y33s ಸ್ಮಾರ್ಟ್‌ಫೋನ್ ಲಭ್ಯವಿದೆ.

ಪರಿಷ್ಕೃತ ದರ ವಿವೊ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇಂಡಿಯಾ ಇ-ಕಾಮರ್ಸ್ ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು