ಕೃತಕ ಬುದ್ಧಿಮತ್ತೆ(ಎಐ)ಯ ವ್ಯಾಪ್ತಿ ವಿಶಾಲವಾಗುತ್ತಿದೆ. ಈಗ ಕೃಷಿ, ಪಶುಸಂಗೋಪನೆ ಮುಂತಾದ ಕ್ಷೇತ್ರಗಳಲ್ಲಿಯೂ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ವಿಜ್ಞಾನಿಗಳು ನಡೆಸಿದ್ದಾರೆ. ರೋಬೋಟ್ ತಂತ್ರಜ್ಞಾನವು ಈಗಾಗಲೇ ಸಾಕಷ್ಟು ಬೆಳವಣಿಗೆ ಕಂಡಿದೆ. ಕೃತಕ ಬುದ್ಧಿಮತ್ತೆಯ ಜೊತೆಗೆ ರೋಬೋಟ್ ತಂತ್ರಜ್ಞಾನವನ್ನೂ ಬಳಸಿಕೊಂಡು ಸಂಗೋಪನಾ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸುವತ್ತ ವಿಜ್ಞಾನಿಗಳು ಗಮನಹರಿಸುತ್ತಿದ್ದಾರೆ. ಇಂಗ್ಲೆಂಡಿನ ಬ್ರಿಸ್ಟಲ್ ಎಂಬ ಪ್ರದೇಶದಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯ ಹಾಗೂ ಸ್ಕಾಟ್ಲೆಂಡಿನ ರೂರಲ್ ಕಾಲೇಜಿನ ಸಂಶೋಧಕರು ಈಗ ಇಂಥದೊಂದು ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರು ತಮ್ಮ ಪ್ರಯೋಗಗಳಿಗೆ ಆಯ್ಕೆ ಮಾಡಿಕೊಂಡಿರುವುದು – ಹಂದಿಗಳ ಸಾಕಣೆ.
.ದುಷ್ಕೃತ್ಯಗಳಿಗೆ ಉಗ್ರ ಸಂಘಟನೆಗಳಿಂದ ಎಐ ತಂತ್ರಜ್ಞಾನ ಬಳಕೆ .
ಪ್ರಪಂಚದ ಅನೇಕ ಕಡೆಗಳಲ್ಲಿ ಅಧಿಕ ಕೊಬ್ಬುಯುಕ್ತ ಮಾಂಸಕ್ಕಾಗಿ ಹಂದಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತದೆ. ಬಹುತೇಕ ದೇಶಗಳಲ್ಲಿ ಯಾರೂ ಒಂದೆರಡು ಹಂದಿಗಳನ್ನು ಮಾತ್ರ ಸಾಕುವುದಿಲ್ಲ. ನೂರಾರು ಅಥವಾ ಸಾವಿರಾರು ಹಂದಿಗಳನ್ನು ಒಟ್ಟಿಗೆ ಉದ್ದಿಮೆಯ ರೀತಿಯಲ್ಲಿ ಸಾಕಲಾಗುತ್ತದೆ. ಅವುಗಳ ಆರೈಕೆಯನ್ನು ಸಾಮೂಹಿಕವಾಗಿಯೇ ಮಾಡಲಾಗುತ್ತದೆ. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಿನ ಸಂಶೋಧಕರು ಇಂಗ್ಲೆಂಡಿನ ಆಗ್ನೇಯ ಗ್ರಾಮಾಂತರ ಭಾಗದಲ್ಲಿರುವ ಹಂದಿಸಾಕಣೆಯ ಕೇಂದ್ರವೊಂದನ್ನು ತಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆ ಕೇಂದ್ರದಲ್ಲಿ ಸಾಕುತ್ತಿರುವ ಹಂದಿಗಳ ಆರೈಕೆ/ಪೋಷಣೆಗಳಿಗೆ ಎಐ ಕ್ಯಾಮೆರಾ ಹಾಗೂ ಎಐ ಚಾಲಿತ ರೋಬೋಟ್ಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಇವೆರಡೂ ತಂತ್ರಗಳನ್ನು ಜೋಡಿಸಿ ಹಂದಿಗಳ ಆರೈಕೆ ಮಾಡಿದಾಗ ಆರೋಗ್ಯವಂತ ಹಂದಿಗಳನ್ನೂ, ಅವುಗಳ ಉತ್ಕೃಷ್ಟ ಮಾಂಸವನ್ನೂ ಪಡೆಯಲು ಸಾಧ್ಯವಾಯಿತು ಎನ್ನುತ್ತವೆ, ಅವರ ಸಂಶೋಧನೆಗಳು.

ಈ ವಿಜ್ಞಾನಿಗಳು ಅನುಸರಿಸಿದ ಪ್ರಾಯೋಗಿಕ ವಿಧಾನವು ವಿಶಿಷ್ಟವಾದುದು. ಅವರು ಆಯ್ಕೆ ಮಾಡಿದ ಹಂದಿಸಾಕಣೆ ಕೇಂದ್ರದವರು, ಗ್ರಾಮಾಂತರ ಭಾಗದ ವಿಶಾಲವಾದ ಬಯಲು ಪ್ರದೇಶದಲ್ಲಿ ತಮ್ಮ ಹಂದಿಸಾಕಣೆಯ ಕೇಂದ್ರವನ್ನು ಸ್ಥಾಪಿಸಿಕೊಂಡಿದ್ದರು. ರಾತ್ರಿಯಲ್ಲಿ ಆ ಬಯಲಿನಲ್ಲಿ ಹಂದಿಗಳನ್ನು ಸ್ವತಂತ್ರವಾಗಿ ಬಿಡಲಾಗುತ್ತಿತ್ತು. ರಾತ್ರಿ ‘ಪಿಗರಿ’ಯಲ್ಲಿ (ಹಂದಿಕೊಟ್ಟಿಗೆ) ಮಲಗಿ ವಿಶ್ರಾಂತಿ ಪಡೆಯುತ್ತಿರುವ ನೂರಾರು ಹಂದಿಗಳನ್ನು ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆ ಅವುಗಳ ಆಹಾರ ಸೇವನೆಯ ಕಂಪಾರ್ಟ್ಮೆಂಟ್ಗಳಿಗೆ ಬಿಡತೊಡಗಿದರು. ಪ್ರತಿಯೊಂದು ಹಂದಿಯೂ ನಿಗದಿತ ಮಾರ್ಗದಲ್ಲಿ ಚಲಿಸಿ ಅದಕ್ಕೆಂದೇ ಮೀಸಲಾದ ಆಹಾರದ ಡಬರಿಗಳನ್ನು ಸಮೀಪಿಸುವ ವ್ಯವಸ್ಥೆ ಮಾಡಲಾಗಿತ್ತು.
.ತಂತ್ರಜ್ಞಾನ ಪಾರ್ಕ್: ₹1,000 ಕೋಟಿ ಹೂಡಿಕೆಗೆ ತೈವಾನ್ ಒಡಂಬಡಿಕೆ.
ಸಂಶೋಧನಾ ತಂಡವು ಪ್ರತಿಯೊಂದು ಹಂದಿಯು ಆಹಾರ ಡಬರಿಯ ಕಡೆಗೆ ಸಾಗುತ್ತಿದ್ದಾಗ ಮಾರ್ಗದಲ್ಲಿ ಅಳವಡಿಸಿದ ಎಐ ಕ್ಯಾಮೆರಾ ಅದರ ಮುಖದ ಚಿತ್ರವನ್ನು ತೆಗೆದು ಕ್ಷಣಾರ್ಧದಲ್ಲಿ ಅದರ ಆಧಾರದ ಮೇಲೆ ಆಯಾ ಹಂದಿಯ ಕುರಿತ ಮಾಹಿತಿಯೆಲ್ಲವನ್ನೂ ಪರಿಶೀಲಿಸುವ ವ್ಯವಸ್ಥೆ ಮಾಡಿತು. ಮಾಹಿತಿಯನ್ನು ಸಂಗ್ರಹಿಸುವಾಗ ಎಐ ವ್ಯವಸ್ಥೆಯು ಅದರ ಮೂತಿ, ಕಿವಿಗಳು, ಕಣ್ಣುಗಳು ಮತ್ತು ಮುಖದ ಇತರ ವೈಶಿಷ್ಟ್ಯಗಳನ್ನು ಗುರುತಿಸಿ ಪ್ರತಿಯೊಂದು ಹಂದಿಯ ವಯಸ್ಸು, ದೇಹಸ್ಥಿತಿ, ಆರೋಗ್ಯ ಸ್ಥಿತಿ, ಮಾನಸಿಕ ಸ್ಥಿತಿ, ಹಸಿವು ಬಾಯಾರಿಕೆಗಳ ಕುರಿತ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಯಿತು. ಪ್ರತಿಯೊಂದು ಹಂದಿಯೂ ಎಷ್ಟು ಹಸಿದಿದೆ, ಅದಕ್ಕೆ ಎಷ್ಟು ಆಹಾರದ ಅವಶ್ಯಕತೆ ಇದೆ, ಅದು ಯಾವ ಬಗೆಯ ಆಹಾರವನ್ನು ಇಷ್ಟಪಡುತ್ತದೆ ಎಂದೆಲ್ಲ ಎಐ ಲೆಕ್ಕ ಹಾಕುತ್ತದೆ. ಆ ಹಂದಿಯು ಆಹಾರದ ಡಬರಿಯನ್ನು ತಲುಪುವ ಹೊತ್ತಿಗೆ ಇಂಥ ಎಲ್ಲ ಲೆಕ್ಕಾಚಾರಗಳನ್ನು ಹಾಕಿದ ಎಐ, ಡಬರಿಯ ಎದುರು ಸಜ್ಜುಗೊಳಿಸಿದ ರೋಬೋಟ್ಗೆ ಈ ಮಾಹಿತಿಯನ್ನು ರವಾನಿಸುತ್ತದೆ. ರೋಬೋಟ್ ಎಐಯ ಆದೇಶಕ್ಕೆ ತಕ್ಕಂತೆ ಆಹಾರದ ವಿವಿಧ ಘಟಕಗಳನ್ನು ಕೂಡಿಸಿ ಡಬರಿಗೆ ಸುರಿಯುತ್ತದೆ. ಹೀಗೆ ಪ್ರತಿಯೊಂದು ಹಂದಿಗೂ ಅದರ ಅಗತ್ಯಕ್ಕೆ ತಕ್ಕಂತೆ ಪೌಷ್ಟಿಕ ಆಹಾರ ದೊರೆಯುತ್ತದೆ. ಅಲ್ಲದೆ ಆಹಾರ ಸಾಮಗ್ರಿಯೂ ಪೋಲಾಗದಂತೆ ನೋಡಿಕೊಳ್ಳುತ್ತದೆ.
.ಬೆಂಗಳೂರು: ನೀರಿನ ಸೋರಿಕೆ ತಡೆಗೆ ರೋಬೋಟಿಕ್ ತಂತ್ರಜ್ಞಾನ .
ಒಂದು ಹಂದಿ ವಿಟಮಿನ್ ಕೊರತೆಯಿಂದ ಬಳಲುತ್ತಿದೆ ಎಂದು ಭಾವಿಸೋಣ. ಅದಕ್ಕೆ ಎಷ್ಟು ವಿಟಮಿನ್ ಅಗತ್ಯವಿದೆ ಎಂದು ಕೃತಕ ಬುದ್ಧಿಮತ್ತೆ ಲೆಕ್ಕ ಹಾಕುತ್ತದೆ. ಅಷ್ಟೇ ಪ್ರಮಾಣದ ವಿಟಮಿನ್ಅನ್ನು ರೋಬೋಟ್ ಆಹಾರದ ಜೊತೆಗೆ ಸೇರಿಸುತ್ತದೆ. ಯಾವುದೋ ಪೋಷಕಾಂಶದ ಕೊರತೆ ಇದ್ದರೆ ರೋಬೋಟ್ ಅದನ್ನು ನೀಡುತ್ತದೆ. ಒಂದು ಹಂದಿಗೂ ಪಕ್ಕದ ಇನ್ನೊಂದು ಹಂದಿಗೂ ಭಿನ್ನ ಪ್ರಮಾಣದ ಆಹಾರದ ಅಗತ್ಯವಿರುತ್ತದೆ. ಅದಕ್ಕೆ ಅನುಗುಣವಾಗಿ ರೋಬೋಟ್ ಅದಕ್ಕೆ ಬೇಕಾದಷ್ಟು ಆಹಾರವನ್ನು ಮಾತ್ರ ನೀಡುತ್ತದೆ. ಹೀಗೆ ಪ್ರತಿಯೊಂದು ಹಂದಿಗೂ ಅದಕ್ಕೆ ಅಗತ್ಯವಿದ್ದಷ್ಟೇ ಪೋಷಕಾಂಶವುಳ್ಳ ಆಹಾರ ನೀಡುವುದರಿಂದ ಅವು ಪುಷ್ಟಿಕರವಾಗಿ ಆರೋಗ್ಯವಾಗಿ ಬೆಳೆಯುತ್ತವೆ. ಮಾಂಸಕ್ಕಾಗಿ ಸಾಕಲಾಗುವ ಈ ಹಂದಿಗಳಿಂದ ಒಳ್ಳೆಯ ಮಾಂಸ ದೊರಕುತ್ತದೆ. ಹಂದಿ ಅನಾರೋಗ್ಯ ಪೀಡಿತವಾಗಿದ್ದರೆ ಕೂಡಲೇ ಅದರ ಮಾಲೀಕನಿಗೆ ಮಾಹಿತಿ ನೀಡಿ ಆ ಕುರಿತು ಆತ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆಯೂ ಸಲಹೆ ನೀಡುವುದಂತೆ! ಹಂದಿ ಸಾಕಣೆದಾರ ಕಂಪ್ಯೂಟರ್ ಪರದೆಯ ಮೇಲೆ ಅಥವಾ ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತ ಇದ್ದರೆ ಆಯಿತು ಅಷ್ಟೆ, ಹಂದಿಸಾಕಣೆಯ ಕೆಲಸವನ್ನು ಆತ ಸುಸೂತ್ರವಾಗಿ ನಿರ್ವಹಿಸಬಹುದು.

ಎಐ ತಂತ್ರಜ್ಞಾನವನ್ನು ಬಳಸಿ ಹಸು, ಎಮ್ಮೆ, ಕುರಿ ಮುಂತಾದ ಪ್ರಾಣಿಗಳ ಸಾಕಣೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಎಐ ತಂತ್ರಜ್ಞಾನವನ್ನು ಅಳವಡಿಸಿ ಆಹಾರದ ಅಪವ್ಯಯವನ್ನು ತಪ್ಪಿಸಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಅಧಿಕ ಹಾಲು, ಮಾಂಸ ನೀಡುವ ರಾಸುಗಳನ್ನು ಪಡೆಯಬಹುದು. ಈಗಾಗಲೇ ತಳಿ ಅಭಿವೃದ್ಧಿಯ ತಂತ್ರಗಳ ಮೂಲಕ ಅಧಿಕ ಇಳುವರಿ ನೀಡುವ ಅನೇಕ ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎಐ ತಂತ್ರಜ್ಞಾನವನ್ನು ಬಳಸಿ ಈ ತಳಿಗಳನ್ನು ಸಾಕುವುದರಿಂದ ಇನ್ನೂ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಾಗಬಹುದು.
.ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೆ ಕಾಯ್ದೆ | ತ್ವರಿತ ನ್ಯಾಯಕ್ಕೆ ‘ಎಐ’ ತಂತ್ರಜ್ಞಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.