ಶನಿವಾರ, ಸೆಪ್ಟೆಂಬರ್ 19, 2020
21 °C

ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದ ಚಿಲಿ, ಅರ್ಜೆಂಟೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾಂಟಿಯಾಗೊ(ಚಿಲಿ):  ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣ ಮಂಗಳವಾರ ಸಂಭವಿಸಿತು. ಚಿಲಿ ಮತ್ತು ಅರ್ಜೆಂಟೀನಾ ದೇಶಗಳಲ್ಲಷ್ಟೇ ಈ ಅಪರೂಪದ ಖಗೋಳ ವಿದ್ಯಮಾನ ಗೋಚರಿಸಿದೆ.

ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸರಿಯಾಗಿ ಆರಂಭವಾದ ಗ್ರಹಣ 4.33 ನಿಮಿಷಗಳ ಕಾಲ ನಡೆಯಿತು. ನ್ಯೂಜಿಲೆಂಡ್ ಕರಾವಳಿಯಲ್ಲಿ ಆರಂಭವಾದ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣವು ಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರಿಸಿತು.

ಈ  ದೇಶಗಳಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಜನ ಭಾರಿ ಉತ್ಸಾಹ ತೋರಿದರು. ಛಾಯಾಗ್ರಹಕರು ಈ ವಿದ್ಯಮಾನವನ್ನು ಸೆರೆಹಿಡಿಯಲು ಸಕಲ ತಯಾರಿಗಳನ್ನೂ ಮಾಡಿಕೊಂಡಿದ್ದರು.

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಗೋಚರ ಬಿಂಬ ಚಂದ್ರನಿಂದ ಆವರಿಸಲ್ಪಡುತ್ತದೆ. ಈ ವೇಳೆ ಸೂರ್ಯಗ್ರಹಣ ಸಂಭವಿಸುತ್ತದೆ.

ಈ ದಶಕದಲ್ಲಿ ಈಗಾಗಲೇ ಎರಡು ಸಂಪೂರ್ಣ ಸೂರ್ಯಗ್ರಹಣಗಳನ್ನು ಕಂಡಿರುವ ಚಿಲಿ 2020ರಲ್ಲಿ ಮತ್ತೊಂದು ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. 2010ರಲ್ಲಿ ದಶಕದ ಮೊದಲ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತ್ತು. ಮಂಗಳವಾರ ಮತ್ತೊಂದು ಸಂಭವಿಸಿದೆ. 2020ರ ಡಿ.14ರಂದು ಇನ್ನೊಂದು ಸಂಪೂರ್ಣ ಸೂರ್ಯಗ್ರಹಣ ಅಲ್ಲಿ ಗೋಚರಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು