ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಲಿ–ಮನುಷ್ಯನ ನಡುವೆ ಕೊರೊನಾವೈರಸ್‌ ಕೊಂಡಿ 'ಪ್ಯಾಂಗೋಲಿನ್‌'!

Last Updated 7 ಫೆಬ್ರುವರಿ 2020, 12:36 IST
ಅಕ್ಷರ ಗಾತ್ರ
ADVERTISEMENT
""
""

ಬೀಜಿಂಗ್‌: ಮಾರಾಣಾಂತಿಕ ಕೊರೊನಾವೈರಸ್‌ ಚೀನಾದಿಂದ ಆಚೆಗೂ ಹರಡಿರುವುದು ದೃಢಪಟ್ಟಿದೆ. ಇದರ ನಿಯಂತ್ರಣ ಮತ್ತು ಚಿಕಿತ್ಸೆಗೆ ವಿಜ್ಞಾನಿಗಳು, ವೈದ್ಯರು ಶ್ರಮಿಸುತ್ತಿದ್ದಾರೆ. ಮತ್ತೊಂದು ಕಡೆ ಈ ವೈರಸ್ ವ್ಯಾಪಿಸಲು ಕಾರಣವಾಗಿರುವ ಜೀವಿಯ ಹುಡುಕಾಟದಲ್ಲಿರುವ ಸಂಶೋಧಕರಿಗೆ 'ಪ್ಯಾಂಗೋಲಿನ್‌' ಸುಳಿವು ನೀಡಿದೆ.

ಏಷ್ಯಾದಲ್ಲಿ ಆಹಾರ ಮತ್ತು ಔಷಧಿಗಾಗಿ ಕೀಟಭಕ್ಷಕ ಸ್ತನಿ ಪ್ಯಾಂಗೋಲಿನ್‌ಗೆ ಬೇಡಿಕೆ ಇದೆ. ಕಳ್ಳಸಾಗಣೆಯಾಗುತ್ತಿರುವ ಪ್ಯಾಂಗೋಲಿನ್‌ಗಳ ಮೂಲಕವೇ ಬಾವಲಿಯಿಂದ ಮನುಷ್ಯರಿಗೆ ಕೊರೊನಾ ವೈರಸ್‌ ಹರಡುತ್ತಿರಬಹುದು ಎಂದು ಚೀನಾ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಪ್ಯಾಂಗೋಲಿನ್‌ ಮಾಂಸವನ್ನು ರಸಭಕ್ಷವಾಗಿ ಪರಿಗಣಿಸಲಾಗಿದೆ ಹಾಗೂ ಅದರ ಮೈಮೇಲಿನ ಚಿಪ್ಪುಗಳನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಇದೇ ಕಾರಣಗಳಿಂದಾಗಿ ಪ್ಯಾಂಗೋಲಿನ್‌ ಅತಿ ಹೆಚ್ಚು ಕಳ್ಳಸಾಗಣೆಯಾಗುವ ಏಷ್ಯಾದ ಸ್ತನಿ ಎಂದು ವಿಶ್ವ ವನ್ಯಜೀವಿ ನಿಧಿ (wwf) ಹೇಳಿದೆ.

ವೈರಸ್‌ ಉತ್ಪತ್ತಿ ತಡೆ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಈ ಸಂಶೋಧನೆಯ ಅಂಶಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಸಂಶೋಧನೆ ನೇತೃತ್ವ ವಹಿಸಿರುವ ಸೌತ್‌ ಚೀನಾ ಅಗ್ರಿಕಲ್ಚರ್‌ ಯೂನಿವರ್ಸಿಟಿ ಹೇಳಿದೆ.

ವುಹಾನ್‌ನ ಜೀವಂತ ಪ್ರಾಣಿಗಳ ಮಾರಾಟ ಮಾಡುವ ಮಾರುಕಟ್ಟೆ ಪ್ರದೇಶದಿಂದ ಕೊರೊನಾವೈರಸ್‌ ಪರಿಣಾಮ ವ್ಯಾಪಿಸಿದೆ. ಚೀನಾದಲ್ಲಿ ಕೊರೊನಾವೈರಸ್‌ ಸೋಂಕಿನಿಂದ 636 ಜನರು ಸಾವಿಗೀಡಾಗಿದ್ದಾರೆ.

ವೈರಸ್‌ ಕುರಿತ ಅಧ್ಯಯ: ಕೊರೊನಾವೈರಸ್‌ ಬಾವಲಿಗಳಲ್ಲಿ ಸೃಷ್ಟಿಯಾಗಿ ಮನುಷ್ಯರಿಗೆ ಹರಡುತ್ತಿದೆ, ಆದರೆ ಬಾವಲಿಗಳಿಂದ ಮನುಷ್ಯರಿಗೆ ತಲುಪುತ್ತಿರುವುದು ಮತ್ತೊಂದು ಪ್ರಾಣಿಯಿಂದ ಎಂದು ಸಂಶೋಧಕರು ಕಂಡುಕೊಂಡರು. ಪ್ಯಾಂಗೋಲಿನ್‌ಗಳಿಂದ ಸಂಗ್ರಹಿಸಲಾದ ಕೊರೊನಾವೈರಸ್‌ ಗುಣಲಕ್ಷಗಳಿಗೂ ವೈರಸ್‌ ಸೋಂಕಿಗೆ ಒಳಗಗಾಗಿರುವ ವ್ಯಕ್ತಿಯ ಜೀನೋಮ್‌ ಸೀಕ್ವೆನ್ಸ್‌ ಶೇ 99ರಷ್ಟು ಹೊಂದಾಣಿಕೆಯಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಪ್ಯಾಂಗೋಲಿನ್‌ಗಳಿಂದಲೇ ಮನುಷ್ಯರಿಗೆ ವೈರಸ್‌ ಹರಡಿದೆ ಎಂಬುದು ದೃಢಪಡಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ ಎಂದು ಹಾಂಕಾಂಗ್‌ನ ಸಿಟಿ ಯೂನಿವರ್ಸಿಟಿ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT