ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಕ್ಕಿ ಜ್ವರದಿಂದ ಕೋಳಿಗಳ ರಕ್ಷಿಸಲು ವಂಶವಾಹಿಗೆ ಬದಲಾವಣೆ ತಂದ ವಿಜ್ಞಾನಿಗಳು

Published 11 ಅಕ್ಟೋಬರ್ 2023, 8:40 IST
Last Updated 11 ಅಕ್ಟೋಬರ್ 2023, 8:40 IST
ಅಕ್ಷರ ಗಾತ್ರ

ಷಿಕಾಗೊ: ಕುಕ್ಕುಟೋದ್ಯಮಕ್ಕೆ ಮಾರಕವಾದ ಹಕ್ಕಿ ಜ್ವರ ನಿಯಂತ್ರಿಸುವ ನಿಟ್ಟಿನಲ್ಲಿ ಕೋಳಿಗಳ ವಂಶವಾಹಿಯಲ್ಲೇ ಬದಲಾವಣೆ ತರುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾರ್ಗವನ್ನು ಬ್ರಿಟನ್‌ ವಿಜ್ಞಾನಿಗಳು ಶೋಧಿಸಿದ್ದಾರೆ.

ಕೋಳಿ ಸಹಿತ ಹಕ್ಕಿಗಳ ಜೀವಕ್ಕೇ ಮಾರಕವಾದ ಅವಿಯನ್ ಇನ್‌ಫ್ಲುಯೆಂಜಾ (ಹಕ್ಕಿ ಜ್ವರ) 2022ರಿಂದ ಇಡೀ ಜಗತ್ತನ್ನೇ ವ್ಯಾಪಿಸಿದೆ. ಈ ರೋಗದಿಂದಾಗಿ ಲಕ್ಷಗಟ್ಟಲೆ ಕೋಳಿಗಳು ಮೃತಪಟ್ಟಿವೆ. ಇದರಿಂದ ಕುಕ್ಕುಟೋದ್ಯಮಕ್ಕೂ ನಷ್ಟದ ಬಿಸಿ ತಟ್ಟಿದೆ. ಹಕ್ಕಿ ಜ್ವರ ತರಿಸುವ ವೈರಾಣುಗಳ ರೂಪಾಂತರಗಳು ಭವಿಷ್ಯದಲ್ಲಿ ಮನುಷ್ಯರಲ್ಲೂ ಸಾಂಕ್ರಾಮಿಕದ ಪರಿಸ್ಥಿತಿ ತರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 

ವಂಶವಾಹಿಯಲ್ಲಿ ಮಾರ್ಪಾಡು ಮಾಡುವ ಆಣ್ವಿಕ ಕತ್ತರಿಯನ್ನು ಬಳಸುವ ಸಿಆರ್‌ಐಎಸ್‌ಪಿಆರ್ ತಂಬ ತಂತ್ರಜ್ಞಾನ ಬಳಸಿ, ನಿರ್ದಿಷ್ಟವಾದ ವಂಶವಾಹಿ ಎಎನ್‌ಪಿ32 ನಲ್ಲಿ ಅಗತ್ಯ ಬದಲಾವಣೆ ತಂದು, ಹಕ್ಕಿ ಜ್ವರದಿಂದ ಕೋಳಿಗಳನ್ನು ರಕ್ಷಿಸುವ ಮಾರ್ಗವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. 

ಈ ತಂತ್ರಜ್ಞಾನದಿಂದ ಕೋಳಿ ಜ್ವರ ತರುವ ವೈರಾಣು ‘ಎಎನ್‌ಪಿ32’ನಂತ ಪ್ರೊಟೀನ್‌ ಅನ್ನು ಅಪಹರಿಸುತ್ತದೆ. ನಂತರ ಅದರ ವೇಷವನ್ನೇ ಧರಿಸಿ ಕೋಳಿಗಳಲ್ಲಿ ಹಕ್ಕಿ ಜ್ವರದ ಬೆಳವಣಿಗೆಯನ್ನು ತಡೆಯಲಿದೆ. ಪ್ರಯೋಗ ಸಂದರ್ಭದಲ್ಲಿ ಹಕ್ಕಿ ಜ್ವರದ ವಂಶವಾಹಿ ಬದಲಾವಣೆಗೊಂಡ ಕೋಳಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದನ್ನು ವಿಜ್ಞಾನಿಗಳು ಪತ್ತೆ ದೃಢಪಡಿಸಿದ್ದಾರೆ. ಈ ಕುರಿತ ಸಂಶೋಧನಾ ಲೇಖನ ನೇಚರ್‌ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.

‘ಎಲ್ಲಾ ಕೋಳಿಗಳನ್ನೂ ಹಕ್ಕಿ ಜ್ವರದಿಂದ ರಕ್ಷಿಸಲು ಇನ್ನಷ್ಟು ಪ್ರಯೋಗಗಳು ಅಗತ್ಯ. ಕೋಳಿಗಳಲ್ಲಿ ಮೂರು ಪ್ರಮುಖ ವಂಶವಾಹಿಗಳ ಬದಲಾವಣೆಯಿಂದ, ಕೋಳಿಗಳ ಜೀವಕೋಶಗಳು ಹೆಚ್ಚು ರಕ್ಷಣೆ ಪಡೆಯಲಿವೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT