ನವದೆಹಲಿ: ‘ಆಕ್ಸಿಯಮ್ -4’ ಮಿಷನ್ ಭಾಗವಾಗಿ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿ ಜೂನ್ 8ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಆರಂಭಿಸಲಿದ್ದಾರೆ.

ಈ ಹಿಂದೆ ಮೇ 29ರಂದು ಪ್ರಯಾಣಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕ ಮೂಲದ ವಾಣಿಜ್ಯ ಮಾನವ ಬಾಹ್ಯಾಕಾಶ ಹಾರಾಟ ಸಂಸ್ಥೆ ಮತ್ತು ನಾಸಾ, ‘ಗಗನಯಾನಿಗಳ ಹಾರಾಟದ ವೇಳಾಪಟ್ಟಿಯನ್ನು ಪರಿಶೀಲಿಸಿದ ನಂತರ, ಜೂನ್ 8ರಂದು ಸ್ಪೇಸ್ಎಕ್ಸ್ನ ಡ್ರಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಪ್ರಯಾಣ ಬೆಳೆಸಲಿದ್ದಾರೆ’ ಎಂದು ಬರೆದುಕೊಂಡಿದೆ.

ಶುಕ್ಲಾ ಅವರೊಂದಿಗೆ ಪೊಲಾಂಡ್, ಹಂಗೇರಿ ದೇಶಗಳ ಸದಸ್ಯರೂ ಈ ಮಿಷನ್ನಲ್ಲಿ ಭಾಗಿಯಾಗಿದ್ದಾರೆ. ಇದು 40 ವರ್ಷಗಳಲ್ಲಿ ಎರಡನೇ ಸರ್ಕಾರಿ ಪ್ರಾಯೋಜಿತ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಾಗಿದೆ.

ಶುಕ್ಲಾ, ಬಾಹ್ಯಾಕಾಶದಲ್ಲಿ ಏಳು ಪ್ರಯೋಗಗಳನ್ನು ನಡೆಸಲಿದ್ದು, ಇವು ಭಾರತದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯ ಸಂಶೋಧನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. 2035 ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಮತ್ತು 2047 ರ ವೇಳೆಗೆ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸಲು ಭಾರತ ಆಶಿಸಿದೆ.

ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಲ್ಲಿ ಮೆಂತ್ಯ ಮತ್ತು ಹೆಸರುಕಾಳು ಮೊಳಕೆಯೊಡೆಯುವುದು ಸೇರಿದಂತೆ ಐಎಸ್ಎಸ್ನಲ್ಲಿ ಪ್ರಯೋಗಗಳನ್ನು ಕೈಗೊಳ್ಳಲು ಭಾರತೀಯ ಆಹಾರದ ಮೇಲೆ ಕೇಂದ್ರೀಕರಿಸಲು ಇಸ್ರೋ ಯೋಜನೆಗಳನ್ನು ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.