ಸೋಮವಾರ, ಸೆಪ್ಟೆಂಬರ್ 20, 2021
30 °C

ಐಎಸ್‌ಎಸ್‌ನಲ್ಲಿ ಗಗನಯಾತ್ರಿ ಜನ್ಮದಿನಕ್ಕೆ ಅದ್ಭುತ ಉಡುಗೊರೆ ಕೊಟ್ಟ ಎಲೊನ್ ಮಸ್ಕ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಆಗಸ್ಟ್‌.31 ರಂದು ನಾಸಾ ಗಗನಯಾತ್ರಿ ಮೇಘನ್ ಮ್ಯಾಕ್‌ಅರ್ಥೂರ್‌ ಅವರು ತಮ್ಮ 50 ನೇ ಜನ್ಮದಿನ ಆಚರಿಸಿಕೊಂಡರು. ಈ ಜನ್ಮದಿನ ಅವರಿಗೆ ತುಂಬಾ ವಿಶೇಷವಾಗಿತ್ತು.

ಸ್ಪೇಸ್ ಎಕ್ಸ್‌ ಸಂಸ್ಥೆ ಸ್ಥಾಪಕ ಹಾಗೂ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ಎಲೊನ್ ಮಸ್ಕ್ ಅವರು ಮೇಘನ್ ಅವರ ಜನ್ಮದಿನದ ವಿಶೇಷಕ್ಕೆ ಕಾರಣರಾಗಿದ್ದರು.

ಬಾಹ್ಯಾಕಾಶದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಭೂಮಿಯ ಬಗ್ಗೆ ಅಧ್ಯಯನ ಮಾಡುವ ಗಗನಯಾನಿಗಳು ನಮ್ಮ ನಿಮ್ಮಂತೆ ಆಹಾರ ಸೇವಿಸುವುದಿಲ್ಲ. ಅವರಿಗಾಗಿಯೇ ವಿಶೇಷ ಆಹಾರ ಇರುತ್ತದೆ.

ಇದನ್ನೂ ಓದಿ: ಮಂಗಳ ಗ್ರಹದ ಮೇಲೆ 90 ದಿನ ಪೂರೈಸಿದ ರೋವರ್‌ ಅತ್ಯುತ್ತಮ ಸ್ಥಿತಿಯಲ್ಲಿದೆ: ಚೀನಾ

ಪರಿಸ್ಥಿತಿ ಹೀಗಿರುವಾಗ ಮೇಘನ್ ಅವರು ಭೂಮಿಯ ಮೇಲಿನಂತೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡರು. ಇದಕ್ಕೆ ಕಾರಣಿಭೂತರಾಗಿದ್ದು ಎಲೊನ್ ಮಸ್ಕ್ ಅವರು. ಮಸ್ಕ್‌ ಅವರ ಸ್ಪೇಸ್ ಎಕ್ಸ್ ಸಂಸ್ಥೆಯಿಂದ ಐಎಸ್‌ಎಸ್‌ಗೆ ಅವಶ್ಯಕ ಸಾಮಗ್ರಿಗಳನ್ನು (ಕ್ಯಾಪ್ಸೊಲ್) ಕಳುಹಿಸಿ ಕೊಡಲಾಯಿತು. ಇದಕ್ಕಾಗಿ ಕಳೆದ ಸೋಮವಾರ ರಾಕೆಟ್ ಉಡಾವಣೆ ಆಗಿತ್ತು.

ಕ್ಯಾಪ್ಸೊಲ್  ಐಎಸ್‌ಎಸ್‌ ತಲುಪಿದ ನಂತರ ಅಲ್ಲಿ ವಿಶೇಷವಾಗಿ ಗಗನಯಾತ್ರಿ ಮೇಘನ್ ಅವರಿಗೆ ಆಶ್ಚರ್ಯ ಕಾದಿತ್ತು. ಮೇಘನ್ ಅವರಿಗೋಸ್ಕರ ಮಸ್ಕ್‌ ಅವರು, ಗಗನಯಾತ್ರಿಗಳು ಸೇವಿಸಬಹುದಾದ ಪಿಜ್ಜಾ, ಕುಕ್ಕೀಸ್, ಚಾಕೊಲೇಟ್, ಕೇಕ್‌ ಹಾಗೂ ಐಸ್‌ಕ್ರೀಂ, ಮತ್ತು ಕ್ಯಾಂಡಲ್ಸ್‌ ಹಾಗೂ ಉಡುಗೊರೆ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿ ಅತೀವ ಸಂತಸ ವ್ಯಕ್ತಪಡಿಸಿದ ಮೇಘನ್ ಅವರು ಬಾಹ್ಯಾಕಾಶದಲ್ಲೇ ಕುಣಿದು ಕುಪ್ಪಳಿಸಿದ್ದಾರೆ.

 

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವಾಹ್‌ ಎಂತಹ ಅದ್ಭುತ ಘಳಿಗೆ‘ ಎಂದು ಉದ್ಘಾರ ತೆಗೆದಿದ್ದಾರೆ. ಇನ್ನು ಐಎಸ್‌ಎಸ್‌ ಕಳೆದ 22 ವರ್ಷದಿಂದ ಭೂಮಿಯ ಮೇಲೆ ಹಾರಾಟ ನಡೆಸುತ್ತಾ, ಭೂಮಿ ಹಾಗೂ ಅದರ ವಾತಾವರಣದ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದೆ. ಪ್ರಸ್ತುತ ಮೇಘನ್ ಅವರೂ ಸೇರಿ ನಾಸಾದ ಏಳು ಗಗನಯಾತ್ರಿಗಳು ಅದರಲ್ಲಿದ್ದಾರೆ.

ಇದನ್ನೂ ಓದಿ: ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು