ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಮಂಡಿಸಿರುವ 2025-26ನೇ ಸಾಲಿನ ಬಜೆಟ್ನಲ್ಲಿ ‘ಪರಮಾಣು ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರ ಹೆಚ್ಚು ಒತ್ತನ್ನು ನೀಡಲಿದೆ’ ಎಂದಿದ್ದಾರೆ. 2047ರ ಹೊತ್ತಿಗೆ 100 ಗಿಗಾ ವಾಟ್ ಅಣುವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದುವುದಕ್ಕಾಗಿ ₹20 ಸಾವಿರ ಕೋಟಿಯ ಯೋಜನೆಯನ್ನು ಘೋಷಿಸಿದ್ದಾರೆ. ಇಂಗಾಲರಹಿತ ವಿದ್ಯುತ್ ಉತ್ಪಾದನೆಗಾಗಿ ಸಣ್ಣ ಮಾಡ್ಯುಲರ್ ಪರಮಾಣು ಸ್ಥಾವರಗಳನ್ನು (ಎಸ್ಎಂಆರ್ - Small Modular Reactor) ಖಾಸಗಿಯವರ ಸಹಭಾಗಿತ್ವದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ. 2033ರ ವೇಳೆಗೆ ಇಂತಹ ಐದು ಸ್ಥಾವರಗಳನ್ನು ಕೇಂದ್ರ ನಿರ್ಮಿಸಲಿದೆ.

2070ರ ವೇಳೆಗೆ ಭಾರತವು ಶೂನ್ಯ ಇಂಗಾಲ/ಹಸಿರುಮನೆ ಅನಿಲಗಳನ್ನು ಹೊರಸೂಸುವ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ವಿದ್ಯುತ್ ಪರಿವರ್ತನೆಯಾಗಬೇಕಾಗಿದೆ. ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ನಲ್ಲಿ ಶೇ 46.21ರಷ್ಟು ಪ್ರಮಾಣದ ವಿದ್ಯುತ್ತನ್ನು ಕಲ್ಲಿದ್ದಲನ್ನೇ ಬಳಸಿ ಉತ್ಪಾದಿಸಲಾಗುತ್ತಿದೆ. ಕಲ್ಲಿದ್ದಲು ಸೇರಿದಂತೆ ಪಳೆಯುಳಿಕೆ ಇಂಧನಗಳ ವಿದ್ಯುತ್ ಉತ್ಪಾದನಾಪ್ರಕ್ರಿಯೆಗೆ ಹೋಲಿಸಿದರೆ ಪರಮಾಣುಶಕ್ತಿಯನ್ನು ಬಳಸಿಕೊಂಡು ಉತ್ಪಾದಿಸುವ ಪ್ರಕ್ರಿಯೆ ಹೆಚ್ಚು ಪರಿಸರಸ್ನೇಹಿ. ಈ ವಿಧಾನದಿಂದ ವಾತಾವರಣಕ್ಕೆ ಹೆಚ್ಚು ಇಂಗಾಲ ಬಿಡುಗಡೆಯಾಗುವುದಿಲ್ಲ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಅಣು ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತನ್ನು ನೀಡಲು ಬಯಸಿದೆ. ಭಾರತ ಮಾತ್ರವಲ್ಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಸಣ್ಣ ಮಾಡ್ಯುಲರ್ ಪರಮಾಣು ಸ್ಥಾವರಗಳನ್ನು ಅಭಿವೃದ್ಧಿಪಡಿಸುತ್ತಿವೆ. ರಷ್ಯಾ, ಚೀನಾಗಳು ಈಗಾಗಲೇ ಕೆಲವು ಎಸ್ಎಂಆರ್ಗಳನ್ನು ಸ್ಥಾಪಿಸಿವೆ.

ಎಸ್ಎಂಆರ್ ಎಂದರೇನು?:

10ರಿಂದ 300 ಮೆಗಾವಾಟ್ನಷ್ಟು ವಿದ್ಯುತ್ ಉತ್ಪಾದಿಸುವ ಅತ್ಯಾಧುನಿಕ ಪರಮಾಣು ಸ್ಥಾವರವನ್ನು ಸಣ್ಣ ಮಾಡ್ಯುಲರ್ ಪರಮಾಣು ಸ್ಥಾವರ (ಎಸ್ಎಂಆರ್) ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ವ್ಯಾಖ್ಯಾನಿಸುತ್ತದೆ. ಈಗಿನ ಸಾಂಪ್ರದಾಯಿಕ ಬೃಹತ್ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಹೋಲಿಸಿದರೆ ಎಸ್ಎಂಆರ್ಗಳು ಗಾತ್ರದಲ್ಲಿ ತುಂಬಾ ಚಿಕ್ಕದು. ಸಾಮಾನ್ಯ ಸ್ಥಾವರಗಳ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯಕ್ಕೆ ಹೋಲಿಸಿದರೆ ಇವುಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೂಡ ಮೂರನೇ ಒಂದರಷ್ಟು ಮಾತ್ರ (ಸಾಂಪ್ರದಾಯಿಕ ಸ್ಥಾವರಗಳು 1000 ಮೆಗಾವಾಟ್ಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ).

ಹೆಸರೇ ಸೂಚಿಸುವಂತೆ ಇದು ಗಾತ್ರದಲ್ಲಿ ಚಿಕ್ಕದಾದ ಸ್ಥಾವರ. ಮಾಡ್ಯುಲರ್ ಎಂದರೆ, ಈ ಸ್ಥಾವರವನ್ನು ಘಟಕವಾರು ವಿಂಗಡಿಸಬಹುದು. ಅಂದರೆ, ಸ್ಥಾವರ ನಿರ್ಮಾಣಕ್ಕೆ ಬಳಸುವ ಉಪಕರಣಗಳನ್ನು ಬೇರೆ ಕಡೆ ತಯಾರಿಸಿ, ನಂತರ ಅವುಗಳನ್ನು ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಿರುವ ಸ್ಥಳಕ್ಕೆ ಕೊಂಡುಹೋಗಿ, ಅಲ್ಲಿ ಜೋಡಿಸಬಹುದು (ಅಸೆಂಬ್ಲಿಂಗ್). ಈ ಸ್ಥಾವರಗಳು ಕೂಡ ಸಾಂಪ್ರದಾಯಿಕ ಅಣುಸ್ಥಾವರಗಳ ರೀತಿಯಲ್ಲೇ, ಅಂದರೆ, ಪರಮಾಣು ವಿದಳನ (ನ್ಯೂಕ್ಲಿಯರ್ ಫಿಷನ್) ಕ್ರಿಯೆಯಿಂದ ಶಾಖವನ್ನು ಸೃಷ್ಟಿಸಿ ಅದರಿಂದ ವಿದ್ಯುತ್ತನ್ನು ಉತ್ಪಾದಿಸುತ್ತವೆ.

ಪ್ರಯೋಜನಗಳು

ದೊಡ್ಡ ಪರಮಾಣು ಸ್ಥಾವರಗಳಿಗೆ ಹೋಲಿಸಿದರೆ ಸಣ್ಣ ಮಾಡ್ಯುಲರ್ ಸ್ಥಾವರಗಳಿಂದ ಹಲವು ಲಾಭಗಳಿವೆ. ಮೊದಲನೆಯದು ಈ ಸ್ಥಾವರಗಳ ನಿರ್ಮಾಣವೆಚ್ಚ ಕಡಿಮೆ. ಸಾಂಪ್ರದಾಯಿಕ ಸ್ಥಾವರಗಳ ವಿವಿಧ ಘಟಕಗಳನ್ನು ಸ್ಥಾವರ ತಲೆ ಎತ್ತಲಿರುವ ಸ್ಥಳದಲ್ಲೇ ನಿರ್ಮಾಣ ಮಾಡಬೇಕಾಗುತ್ತದೆ. ಆದರೆ ಎಸ್ಎಂಆರ್ಗಳಿಗೆ ಬೇಕಾಗುವ ಬಿಡಿ ಭಾಗಗಳನ್ನು ಬೇರೆಡೆಗಳಲ್ಲಿ ನಿರ್ಮಿಸಿ, ನಂತರ ನಿರ್ಮಾಣಸ್ಥಳಕ್ಕೆ ತಂದು ಜೋಡಿಸಲಾಗುತ್ತದೆ.

ಸ್ಥಾವರ ಚಿಕ್ಕದಾಗಿರುವುದರಿಂದ ಅದರ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಡ. ವಿಶ್ವ ಪರಮಾಣು ಒಕ್ಕೂಟದ ಪ್ರಕಾರ, ದೊಡ್ಡ ಪರಮಾಣು ಸ್ಥಾವರ ನಿರ್ಮಾಣಕ್ಕೆ ಆರರಿಂದ 12 ವರ್ಷಗಳ ಸಮಯ ಬೇಕಾಗುತ್ತದೆ. ಆದರೆ, ಎಸ್ಎಂಆರ್ಗಳನ್ನು ಎರಡರಿಂದ ಮೂರು ವರ್ಷಗಳ ಒಳಗಾಗಿ ನಿರ್ಮಿಸಬಹುದು.

ಎಸ್ಎಂಆರ್ಗಳಿಗೆ ಹೆಚ್ಚು ಜಾಗ/ಭೂಮಿಯ ಅಗತ್ಯವಿಲ್ಲ. ದೊಡ್ಡ ಸ್ಥಾವರಗಳನ್ನು ನಿರ್ಮಿಸಲು ನೂರಾರು ಎಕರೆಗಳ ಸ್ಥಳಾವಕಾಶ ಬೇಕು. ಸಣ್ಣ ಸ್ಥಾವರಗಳನ್ನು ಕೇವಲ 10 ಎಕರೆಯಷ್ಟು ಜಾಗದಲ್ಲೂ ನಿರ್ಮಿಸಬಹುದು. ಹೀಗಾಗಿ, ವಿದ್ಯುತ್ ಬೇಡಿಕೆ ಹೆಚ್ಚಿರುವ ಸಣ್ಣ ಗ್ರಾಮಗಳಲ್ಲೂ ಇವನ್ನು ಸ್ಥಾಪಿಸಬಹುದು.

ಈ ಸ್ಥಾವರಗಳು ಹೆಚ್ಚು ಸುರಕ್ಷಿತ ಎನ್ನುವುದು ತಜ್ಞರ ವಾದ. ಸರಳ ವಿನ್ಯಾಸ, ಸಹಜ ತಂಪಾಗಿಸುವ ವ್ಯವಸ್ಥೆಯನ್ನು (ಶಾಖದ ತೀವ್ರತೆಯನ್ನು ಕಡಿಮೆ ಮಾಡಲು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವ ಕಟ್ಟಡ ನಿರ್ಮಾಣ ತಂತ್ರಜ್ಞಾನ) ಹೊಂದಿರುವ ಎಸ್ಎಂಆರ್ಗಳ ಕಾರ್ಯಾಚರಣೆಗೆ ಕಡಿಮೆ ಶಕ್ತಿ ಮತ್ತು ಕಡಿಮೆ ಒತ್ತಡ ಸಾಕು ಎನ್ನುತ್ತಾರೆ.

ಸಾಂಪ್ರದಾಯಿಕ ಸ್ಥಾವರಗಳಿಗೆ ಹೋಲಿಸಿದರೆ ಸಣ್ಣ ಸ್ಥಾವರಗಳಿಗೆ ಪ್ರತಿ 3ರಿಂದ 7 ವರ್ಷಗಳಿಗೊಮ್ಮೆ ಇಂಧನವನ್ನು (ಯುರೇನಿಯಂ) ಪೂರೈಸಿದರೆ ಸಾಕು. ದೊಡ್ಡ ಸ್ಥಾವರಗಳಿಗೆ ಒಂದೆರಡು ವರ್ಷಗಳ ಒಳಗಾಗಿಯೇ ಇಂಧನದ ಮರುಪೂರಣ ಮಾಡಬೇಕು. ಮಾತ್ರವಲ್ಲ, ಇದು ಸಂಕೀರ್ಣವಾದ ಮತ್ತು ಹೆಚ್ಚು ಸುರಕ್ಷತೆಯನ್ನು ಬೇಡುವ ಪ್ರಕ್ರಿಯೆ.

ಕೊನೆ ಮಾತು

ಎಸ್ಎಂಆರ್ಗಳ ಬಗ್ಗೆ ಚರ್ಚೆ ಆರಂಭವಾಗಿ ದಶಕವೇ ಕಳೆದಿದೆ. ಆದರೆ, ಜಾಗತಿಕವಾಗಿ ದೊಡ್ಡ ಮಟ್ಟಿಗೆ ಈ ಸ್ಥಾವರಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಇನ್ನೂ ಅಧ್ಯಯನ–ಸಂಶೋಧನೆಗಳು ನಡೆಯುತ್ತಿವೆ. ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಇವುಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಜಾಗತಿಕವಾಗಿ 80ಕ್ಕೂ ಹೆಚ್ಚು ಎಸ್ಎಂಆರ್ಗಳ ವಿನ್ಯಾಸದ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ ಹೇಳಿದೆ. 2024ರ ಆರಂಭದಲ್ಲಿ ಜಗತ್ತಿನಲ್ಲಿ ಐದು ಸ್ಥಾವರಗಳು ಕಾರ್ಯಾರಂಭ ಮಾಡಿದ್ದವು. 20 ಸ್ಥಾವರಗಳ ನಿರ್ಮಾಣ ಅಂತಿಮ ಹಂತದಲ್ಲಿದೆ ಎಂದು ಹೇಳುತ್ತದೆ ವಿಶ್ವ ಪರಮಾಣು ಒಕ್ಕೂಟ.

ಆತಂಕಗಳು

ಎಸ್ಎಂಆರ್ಗಳು ಕಡಿಮೆ ಪ್ರಮಾಣದಲ್ಲಿ ಇಂಗಾಲ ಹೊರಸೂಸುತ್ತವೆ. ಹೀಗಾಗಿ ಇವು ಪರಿಸರಸ್ನೇಹಿ ಎಂದು ಹೇಳಲಾಗುತ್ತದೆ. ಆದರೆ ಈ ಸ್ಥಾವರಗಳು ಕೂಡ ಪರಿಸರದ ಮೇಲೆ ಪರಿಣಾಮ ಬೀರುತ್ತವೆ ಎಂಬ ಆತಂಕ ಪರಿಸರವಾದಿಗಳದ್ದು.

ಸ್ಥಾವರಗಳಿಗೆ ಅಗತ್ಯವಿರುವ ಯುರೇನಿಯಂ ಅನ್ನು ಗಣಿಗಾರಿಕೆಯ ಮೂಲಕವೇ ಹೊರ ತೆಗೆಯಬೇಕಾಗುತ್ತದೆ . ಈ ಪ್ರಕ್ರಿಯೆಯಲ್ಲಿ ಪಳೆಯುಳಿಕೆ ಇಂಧನಗಳನ್ನೇ ಬಳಸಬೇಕಾಗುತ್ತದೆ. ಸ್ಥಾವರಗಳು ರೇಡಿಯೊ ವಿಕಿರಣಯುಕ್ತ ತ್ಯಾಜ್ಯವನ್ನು ಸೃಷ್ಟಿಸುತ್ತವೆ. ಇದು ಯಾವತ್ತಿಗೂ ಅಪಾಯಕಾರಿ. ಎಸ್ಎಂಆರ್ಗಳು ಸಾಂಪ್ರದಾಯಿಕ ಸ್ಥಾವರಗಳಿಗಿಂತ ಹೆಚ್ಚು ವಿಕಿರಣಯುಕ್ತ ತ್ಯಾಜ್ಯವನ್ನು ಸೃಷ್ಟಿಸುತ್ತವೆ ಎಂದು ಸ್ಟ್ಯಾನ್ಫೋರ್ಡ್ ವಿ.ವಿ 2022ರಲ್ಲಿ ನಡೆಸಿರುವ ಅಧ್ಯಯನ ಹೇಳಿದೆ.

ಸ್ಥಾವರದಿಂದ ಹೊರ ಬರುವ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡದಿದ್ದರೆ, ಸ್ಥಾವರ ಇರುವ ಪ್ರದೇಶದ ಜಲಚರಗಳ ಜೀವಕ್ಕೂ ಅದು ಕಂಟಕವಾಗಬಹುದು. ಸ್ಥಾವರ ಸ್ಥಾಪಿಸಲು ಗುರುತಿಸಿರುವ ಜಾಗದಲ್ಲಿ ನಡೆಯುವ ಕಾಮಗಾರಿಗಳು ಕೂಡ ಪರಿಸರಕ್ಕೆ ಧಕ್ಕೆ ತರುತ್ತವೆ. ಹೀಗಾಗಿ ಸಣ್ಣ ಸ್ಥಾವರಗಳ ವಿರೋಧಿ ಕೂಗು ಕೂಡ ಜಾಗತಿಕ ಮಟ್ಟದಲ್ಲಿ ಕೇಳಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.