ಹೃದಯದ ಮಿಡಿತವನ್ನು ಹದವಾಗಿ ನಿಯಂತ್ರಿಸುವ ‘ಪೇಸ್ಮೇಕರ್’ (ಗತಿನಿಯಂತ್ರಕ) ಸಾಧನವು ವೈದ್ಯಕೀಯ ಲೋಕದಲ್ಲಿ ಬಹು ಮಹತ್ವದ ಸ್ಥಾನವನ್ನು ಪಡೆದಿದೆ. ಹೃದಯದ ಸಮಸ್ಯೆ ಇರುವ ರೋಗಿಗಳಲ್ಲಿ ಈ ಸಾಧನವು ಹೃದಯಸ್ತಂಭನ ಆಗದಂತೆ, ರಕ್ತದ ಒತ್ತಡ ಸರಿ ಇರುವಂತೆ ನೋಡಿಕೊಳ್ಳುತ್ತದೆ. ಈ ಸಾಧನದೊಳಗೆ ಒಂದು ಪುಟ್ಟ ಬ್ಯಾಟರಿಯೂ ಇರುತ್ತದೆ. ಆದರೂ ಈ ಸಾಧನದ ಗಾತ್ರ ಕೊಂಚ ದೊಡ್ಡದೇ; ಸುಮಾರು 50 ಗ್ರಾಂ ತೂಕವಿರುವ ಸಾಧನ.

ಈ ಗಾತ್ರದ ಕಾರಣದಿಂದಾಗಿ ಈ ಸಾಧನದ ಯಶಸ್ವಿ ಅಳವಡಿಕೆ ಕೊಂಚ ಸವಾಲಿನ ವಿಷಯ. ಅದಕ್ಕಾಗಿಯೇ ಇದಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯೂ ದುಬಾರಿ. ಅಲ್ಲದೇ, ಎಲ್ಲ ರೋಗಿಗಳಿಗೂ ಇದನ್ನು ಯಶಸ್ವಿಯಾಗಿ ಅಳವಡಿಸಲಾಗದು. ದೇಹದ ಗಾತ್ರ ತೀರ ಸಣ್ಣ ಇರುವ ರೋಗಿಗಳು, ಮಕ್ಕಳಲ್ಲಿ ಈ ಪೇಸ್ಮೇಕರ್ ಅಳವಡಿಕೆ ಕೆಲವೊಮ್ಮೆ ಅಸಾಧ್ಯವೇ ಸರಿ. ಈ ಸವಾಲಿಗೆ ಇದೀಗ ಉತ್ತರ ದೊರೆತಿದೆ. ಕೇವಲ ಒಂದು ಅಕ್ಕಿಕಾಳಿನಷ್ಟು ಗಾತ್ರವಿರುವ ಪೇಸ್ಮೇಕರ್ನ ಸಂಶೋಧನೆ ಆಗಿದೆ.

ಅಮೆರಿಕದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಬಯೋ ಎಲೆಕ್ಟ್ರಾನಿಕ್ಸ್ ವಿಭಾಗದ ವಿಜ್ಞಾನಿ ಜಾನ್ ಎ. ರಾಜರ್ಸ್ ಅವರ ನೇತೃತ್ವದ ತಂಡವು ಅಕ್ಕಿಕಾಳಿನ ಗಾತ್ರದ ಈ ಪೇಸ್ಮೇಕರನ್ನು ಸಂಶೋಧಿಸಿದೆ. ಇದು ತೆಳ್ಳಗಿದೆ; ಕೇವಲ ಬೆಳಕಿನ ಶಕ್ತಿ ಹಾಗೂ ದೇಹದ ಶಾಖದ ಶಕ್ತಿಯಿಂದಲೇ ಕಾರ್ಯನಿರ್ವಹಿಸಬಲ್ಲದು. ಎಂದರೆ, ಈ ಸಾಧನಕ್ಕೆ ಬ್ಯಾಟರಿಯ ಅವಶ್ಯಕತೆಯೂ ಇಲ್ಲ. ಈ ಸಂಶೋಧನೆಯ ವಿವರ ‘ನೇಚರ್’ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಏನಿದರ ವೈಶಿಷ್ಟ್ಯ?

ಸದ್ಯಕ್ಕೆ ಇದು ವಿಶ್ವದ ಅತಿ ಚಿಕ್ಕ ಪೇಸ್ಮೇಕರ್. ಇದರ ಗಾತ್ರವೇ ಇದರ ವಿಶೇಷ. ಸಾಮಾನ್ಯವಾಗಿ ಸಾಂಪ್ರದಾಯಿಕ ಪೇಸ್ಮೇಕರನ್ನು ದೇಹದ ಭುಜದ ಮೂಳೆಯ ಕೆಳಗೆ ಅಳವಡಿಸಲಾಗುತ್ತದೆ. ಒಂದು ಸಣ್ಣ ರಂಧ್ರವನ್ನು ಮಾಡಿ ಅದರ ಮೂಲಕ ಪೇಸ್ಮೇಕರನ್ನು ತೂರಿಸಿ, ಪೇಸ್ಮೇಕರ್ಗೆ ಅಂಟಿಕೊಂಡಿರುವ ವೈರ್ಗಳನ್ನು ಹೃದಯದ ಕವಾಟಗಳಿಗೆ ನೇರವಾಗಿ ಅಳವಡಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆ ತುಂಬ ಸಂಕೀರ್ಣವಾದುದು. ಅತಿ ನಿಪುಣ ಶಸ್ತ್ರಚಿಕಿತ್ಸಕರು ಇದಕ್ಕೆ ಬೇಕಿರುತ್ತಾರೆ. ಹಾಗಾಗಿ, ಇದು ದುಬಾರಿಯೂ ಹೌದು. ಒಂದು ಸಾಮಾನ್ಯ ಪೇಸ್ಮೇಕರ್ನ ಬೆಲೆ ಭಾರತದಲ್ಲಿ ಇಂದು ₹ 45 ಸಾವಿರ ₹ 3 ಲಕ್ಷ ಇದೆ. ಶಸ್ತ್ರಚಿಕಿತ್ಸೆಯ ಖರ್ಚು ಸರಿಸುಮಾರು ₹ 1.8 ಲಕ್ಷ ದಿಂದ ₹ 3 ಲಕ್ಷ ಆಗುತ್ತದೆ. ಅಂದರೆ ಒಟ್ಟಾರೆಯಾಗಿ ಸರಾಸರಿ ₹ 3 ಲಕ್ಷದವರೆಗೂ ಖರ್ಚು ಬರುತ್ತದೆ. ಒಂದು ಪೇಸ್ಮೇಕರ್ ಸಾಧರಣ 5ರಿಂದ 15 ವರ್ಷಗಳ ಕಾಲ ಬಾಳಿಕೆ ಬರಬಹುದು.

ಈ ಮೇಲೆ ನೀಡಿದ ಮಾಹಿತಿಯು ಬದಲಾಗಬಹುದು. ಅಂದರೆ, ವ್ಯಕ್ತಿಯಿಂದ ವ್ಯಕ್ತಿಗೆ, ಜಾಗದಿಂದ ಜಾಗಕ್ಕೆ, ಪ್ರಕರಣದಿಂದ ಪ್ರಕರಣಕ್ಕೆ ವ್ಯತ್ಯಾಸಗಳಿರುತ್ತವೆ. ಒಟ್ಟಾರೆಯಾಗಿ ಈ ಪ್ರಕ್ರಿಯೆ ದುಬಾರಿ ಹಾಗೂ ಸಂಕೀರ್ಣವಾದುದು ಎಂದೇ ಹೇಳಬಹುದು.
ಜೊತೆಗೆ, ಮೇಲೆ ಉದಾಹರಿಸಿದಂತೆ ಮಕ್ಕಳಲ್ಲಿ ಪೇಸ್ಮೇಕರ್ನ ಅಳವಡಿಕೆ ಬಹು ಸಂಕೀರ್ಣವಾದುದು. ಮಕ್ಕಳ ಪೇಸ್ಮೇಕರ್ ದೊರೆಯುತ್ತದೆಯಾದರೂ, ಅದರ ಬಾಳಿಕೆ ತೀರಾ ಕಡಿಮೆ. ಮಕ್ಕಳ ದೇಹ ದಿನದಿಂದ ದಿನಕ್ಕೆ ಬೆಳೆಯುವ ಕಾರಣ, ಪೇಸ್ಮೇಕರ್ ಚಿಕ್ಕದಾಗಿ ಅದು ಬಳಕೆಗೆ ಯೋಗ್ಯವಾಗದಂತೆ ಆಗುತ್ತದೆ. ಆಗ ಅದನ್ನು ಬದಲಿಸಬೇಕು. ಆಗ, ಮತ್ತೆ ಅವರು ಈ ದುಬಾರಿ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.

ಉತ್ತಮ ಪರಿಹಾರ

ಹಲವು ಸಮಸ್ಯೆಗಳಿಗೆ ಈ ಹೊಸ ಪೇಸ್ಮೇಕರ್ ಉತ್ತಮ ಪರಿಹಾರವಾಗಲಿದೆ. ಇದು ಕೇವಲ ಒಂದು ಅಕ್ಕಿಕಾಳಿನ ಗಾತ್ರ ಇರುತ್ತದೆ. ಅಲ್ಲದೇ ಇದನ್ನು ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿ ಅಳವಡಿಸುವ ಅಗತ್ಯವಿಲ್ಲ. ಆ್ಯಂಜಿಯೋಗ್ರಾಂ ಅಥವಾ ಆ್ಯಂಜಿಯೋಪ್ಲಾಸ್ಟಿ ಮಾಡುವಂತೆ ರಕ್ತನಾಳದ ಮೂಲಕ ಒಳಪ್ರವೇಶಿಸಿ ಈ ಅಕ್ಕಿಕಾಳಿನ ಗಾತ್ರದ ಪೇಸ್ಮೇಕರನ್ನು ನೇರವಾಗಿ ಹೃದಯದ ಒಳಗೆ ಇರಿಸಲಾಗುತ್ತದೆ. ದೇಹದ ಶಾಖ ಹಾಗೂ ಹೊರಮೈನ ಅತಿ ಸಾಧಾರಣ ಬೆಳಕಿನಿಂದಲೇ ಇದು ಕೆಲಸ ಮಾಡುತ್ತದೆ.

ಇಂದಿನ ವೈದ್ಯಕೀಯ ದತ್ತಾಂಶದ ಪ್ರಕಾರ ಪ್ರತಿ ನೂರು ನವಜಾತ ಶಿಶುಗಳಲ್ಲಿ ಒಂದು ಶಿಶುವಿಗೆ ಹೃದಯದ ಸಮಸ್ಯೆ ಇದೆ. ಇದು ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರಗಳಲ್ಲಿ ದೊಡ್ಡ ಸಂಖ್ಯೆಯೇ ಆಗುತ್ತದೆ. ಈ ಸಮಸ್ಯೆ ಇರುವ ಮಕ್ಕಳು ಬೆಳೆದಂತೆ ಅನೇಕ ಇತರ ವೈದ್ಯಕೀಯ ಸಮಸ್ಯೆಗಳಿಗೂ ಈಡಾಗಬಹುದು. ಈ ಹೊಸ ಸಾಧನವು ತೀರಾ ಸಣ್ಣಗಿರುವ ಕಾರಣ, ನವಜಾತ ಶಿಶುವಿಗೂ ಈ ಸಾಧನವನ್ನು ಅಳವಡಿಸಬಹುದಾಗಿದೆ. ವಯಸ್ಕ ರೋಗಿಗಳಿಗೂ ಈ ಸಾಧನವನ್ನು ಅಳವಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.