ಸೆಗಣಿಯನ್ನು ಕೇಕ್ ಎಂದು ತಿಂದ; ವೈರಲ್ ಆಯ್ತು ಅಮೆಜಾನ್ ಬಳಕೆದಾರನ ಕಾಮೆಂಟ್!

ಬೆಂಗಳೂರು: ಆನ್ಲೈನ್ ಶಾಪಿಂಗ್ ತಾಣ ಅಮೆಜಾನ್ನಲ್ಲಿ ದನದ ಸೆಗಣಿಯಿಂದ ಮಾಡಿದ ಬೆರಣಿಯನ್ನು ಕೇಕ್ ಎಂದು ಭಾವಿಸಿ ಖರೀದಿಸಿದ ವ್ಯಕ್ತಿಯೋರ್ವ ಮಾಡಿದ ಕಾಮೆಂಟ್ ವೈರಲ್ ಆಗಿದೆ. ಅಮೆಜಾನ್ ಶಾಪಿಂಗ್ನಲ್ಲಿ ಶುದ್ಧ ದನದ ಸೆಗಣಿಯ ಬೆರಣಿ ಲಭ್ಯವಿದ್ದು, ₹600 ಬೆಲೆ ಹೊಂದಿದೆ. ಆದರೆ ಆಫರ್ ದರದಲ್ಲಿ ₹299 ದರಕ್ಕೆ ಲಭ್ಯವಿದೆ. ಆದರೆ ಉತ್ಪನ್ನದ ಹೆಸರು ಮಾತ್ರ ಒರಿಜಿನಲ್ ಹೋಲಿ ಕೌ ಡಂಗ್ ಕೇಕ್ ಎಂದಿದೆ. ಇದನ್ನು ಗಮನಿಸಿದ ಬಳಕೆದಾರನೋರ್ವ, ತಿನ್ನುವ ಕೇಕ್ ಎಂದು ಭಾವಿಸಿ ಖರೀದಿಸಿದ್ದಾನೆ.
ನಂತರ ಏನಾಯ್ತು?
ದನದ ಸೆಗಣಿಯ ಬೆರಣಿ ಖರೀದಿಸಿದ ವ್ಯಕ್ತಿ ಅದನ್ನು ತಿಂದ ಬಳಿಕ ಅಮೆಜಾನ್ ಶಾಪಿಂಗ್ ಪೇಜ್ನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. ಇದನ್ನು ನಾನು ತಿಂದಾಗ ಅದರ ರುಚಿ ತುಂಬಾ ಕೆಟ್ಟದಾಗಿತ್ತು. ಅದು ಹುಲ್ಲಿನ ಹಾಗಿದ್ದು, ಅದರಲ್ಲಿ ಮಣ್ಣಿನ ಸ್ವಾದವಿತ್ತು, ತಿಂದಾದ ಬಳಿಕ ಹೊಟ್ಟೆ ಕೆಟ್ಟುಹೋಯಿತು. ಅದನ್ನು ತಯಾರಿಸುವಾಗ ಸ್ವಲ್ಪ ಶುದ್ಧತೆ ಕಡೆ ಗಮನ ಕೊಡಿ, ಅಲ್ಲದೆ, ರುಚಿ ಮತ್ತು ಕುರುಕುರು ಅನ್ನಿಸುವಂತೆ ತಯಾರಿಸಿ ಎನ್ನುವ ಸಲಹೆ ನೀಡಿದ್ದಾನೆ.
Ye mera India, I love my India…. :) pic.twitter.com/dEDeo2fx99
— Dr. Sanjay Arora PhD (@chiefsanjay) January 20, 2021
ಈ ಬಳಕೆದಾರನ ಅನಿಸಿಕೆ ವೈರಲ್ ಆಗಿದ್ದು, ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಅದಕ್ಕೆ ಸಹಮತ ಸೂಚಿಸಿದ್ದಾರೆ. ದನದ ಸೆಗಣಿಗೆ ಕೌ ಡಂಗ್ ಎಂದೂ, ಸೆಗಣಿಯಲ್ಲಿ ತಯಾರಿಸಿದ ಬೆರಣಿಗೆ ಕೇಕ್ ಎಂದೂ ಹೇಳಲಾಗುತ್ತದೆ. ಇದರಿಂದ ಆತ ಗೊಂದಲಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ.
Ha ha ..literally shit happened !!
— Sameera gawandi (@sameeratweeter) January 21, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.