ಬೆಂಗಳೂರು: ವಾಟ್ಸ್ ಆ್ಯಪ್ ಹೊಸ ಪ್ರೈವೆಸಿ ಅಪ್ಡೇಟ್ ಬಳಕೆದಾರರಲ್ಲಿ ತೀವ್ರ ಗೊಂದಲ ಮೂಡಿಸುವ ಜತೆಗೆ, ಖಾಸಗಿತನ ಸುರಕ್ಷತೆ ಕುರಿತು ಕೂಡ ಪ್ರಶ್ನೆ ಸೃಷ್ಟಿಸಿತ್ತು. ಅದಾದ ಬಳಿಕ, ಕಂಪನಿ ಗ್ರಾಹಕರಿಂದ ಪ್ರತಿರೋಧ ಕೂಡ ಎದುರಿಸಿತ್ತು. ಆದರೆ ಫೇಸ್ಬುಕ್ ಒಡೆತನದ ವಾಟ್ಸ್ ಆ್ಯಪ್ ನೀತಿಯನ್ನು ಟೀಕಿಸಿದ್ದ ಆ್ಯಪಲ್, ಐಫೋನ್ ಮತ್ತು ಐಪ್ಯಾಡ್ಗಳಲ್ಲಿ ಹೊಸ ಆ್ಯಪ್ ಟ್ರ್ಯಾಕಿಂಗ್ ಟ್ರಾನ್ಸ್ಪರೆನ್ಸಿ ಎಂಬ ಫೀಚರ್ ಪರಿಚಯಿಸಲು ಮುಂದಾಗಿದೆ.

ಏನಿದು ಆ್ಯಪ್ ಟ್ರ್ಯಾಕಿಂಗ್ ಟ್ರಾನ್ಸ್ಪರೆನ್ಸಿ?

ಬಳಕೆದಾರರು ಸ್ಮಾರ್ಟ್ಫೋನ್ನಲ್ಲಿ ಯಾವುದೇ ಆ್ಯಪ್ ಇನ್ಸ್ಟಾಲ್ ಮಾಡುವಾಗಲೂ ಅದು ಕೆಲವೊಂದು ಅನುಮತಿಗಳನ್ನು ಕೇಳುತ್ತದೆ. ನಿಮ್ಮ ಫೋನ್ ಕ್ಯಾಮರಾ, ಲೊಕೇಶನ್, ಫೋಟೋ, ಕಾಂಟಾಕ್ಟ್ ಎಂದೆಲ್ಲ ವಿವಿಧ ರೀತಿಯ ಅನುಮತಿ ನೀಡಿದ ಬಳಿಕವೇ ಆ್ಯಪ್ ಬಳಸಲು ಅನುವು ಮಾಡಿಕೊಡುತ್ತದೆ. ಆದರೆ ಕೆಲವೊಂದು ಆ್ಯಪ್, ನಿಮ್ಮ ಫೋನ್ನಲ್ಲಿ ಇನ್ಸ್ಟಾಲ್ ಆಗಿದ್ದರೂ, ಏನೆಲ್ಲ ಅನುಮತಿ ಪಡೆದುಕೊಂಡಿದೆ ಮತ್ತು ಅದು ಅಗತ್ಯವೇ ಎಂದು ನಮಗೆ ತಿಳಿದಿರುವುದಿಲ್ಲ. ಹೀಗಾಗಿ ಬಳಕೆದಾರರ ಖಾಸಗಿತನ ಎಲ್ಲವೂ ಅಲ್ಲಿ ಸೋರಿಕೆಯಾಗುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಯಾವ ಆ್ಯಪ್ ಏನೆಲ್ಲ ಅನುಮತಿ ಪಡೆದುಕೊಂಡಿದೆ ಎನ್ನುವುದನ್ನು ಆ್ಯಪಲ್ ಆ್ಯಪ್ ಸ್ಟೋರ್ ಆ್ಯಪ್ ಟ್ರ್ಯಾಕಿಂಗ್ ಟ್ರಾನ್ಸ್ಪರೆನ್ಸಿ ತೋರಿಸಿಕೊಡಲಿದೆ.

ಏನು ಪ್ರಯೋಜನ?

ಆ್ಯಪಲ್ ಐಫೋನ್ ಮತ್ತು ಐಪ್ಯಾಡ್ಗಳಲ್ಲಿ ಪರಿಚಯಸಲು ಉದ್ದೇಶಿಸಿರುವ ಹೊಸ ನೀತಿಯಿಂದಾಗಿ ಬಳಕೆದಾರರ ಖಾಸಗಿತನ ರಕ್ಷಣೆಯಾಗಲಿದೆ. ಹೊಸ ಫೀಚರ್ ಅನ್ನು ಐಓಎಸ್ 14 ಬೀಟಾ ಆವೃತ್ತಿಯಲ್ಲಿ ಆ್ಯಪಲ್ ಪರಿಶೀಲಿಸಿದೆ. ಹೀಗಾಗಿ ಶೀಘ್ರದಲ್ಲೇ ಬಳಕೆದಾರರಿಗೆ ಹೊಸ ಭದ್ರತಾ ಮತ್ತು ಖಾಸಗಿತನ ವೈಶಿಷ್ಟ್ಯ ಲಭ್ಯವಾಗಲಿದೆ. ಆದರೆ ಫೇಸ್ಬುಕ್ ಆ್ಯಪಲ್ನ ಹೊಸ ಖಾಸಗಿತನ ಫೀಚರ್ ಅನ್ನು ವಿರೋಧಿಸಿದೆ.

ಆ್ಯಪ್ ಟ್ರ್ಯಾಕಿಂಗ್ ಟ್ರಾನ್ಸ್ಪರೆನ್ಸಿ

ಬಳಕೆದಾರರ ಅನುಮತಿಯಿಲ್ಲದೆ ಮತ್ತು ಅವರಿಗೆ ಅರಿವಿಲ್ಲದೆ ಯಾವುದೇ ಆ್ಯಪ್ ಅವರ ಫೋನ್ನಲ್ಲಿರುವ ಮಾಹಿತಿಯನ್ನು ಗಮನಿಸಲು, ಬಳಸಿಕೊಳ್ಳಲು ಸಾಧ್ಯವಿಲ್ಲ. ಬಳಕೆದಾರರು ಬೇಕೆನಿಸಿದರಷ್ಟೇ ಆ್ಯಪ್ ಅನುಮತಿ ನೀಡಬಹುದು. ಮಾಹಿತಿ ಹಂಚಿಕೊಳ್ಳಲು ಇಷ್ಟವಿಲ್ಲವೆಂದಾದರೆ, ಅದನ್ನು ನಿಮ್ಮಲ್ಲಿಯೇ ಇರಿಸಿಕೊಳ್ಳಬಹುದು.

ಬಹುತೇಕ ವೆಬ್ಸೈಟ್, ಆ್ಯಪ್, ಸಾಮಾಜಿಕ ತಾಣಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು ಬಳಸುತ್ತಿವೆ. ಇದರಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ. ಹಾಗಾಗದಂತೆ ತಡೆಯಲು ಆ್ಯಪ್ ಟ್ರ್ಯಾಕಿಂಗ್ ಟ್ರಾನ್ಸ್ಪರೆನ್ಸಿ ಫೀಚರ್ ಪರಿಚಯಿಸಲಾಗುತ್ತಿದೆ ಎಂದು ಆ್ಯಪಲ್ ಹೇಳಿದೆ.

ಇದನ್ನೂ ಓದಿ:ಸಾಮಾಜಿಕ ಮಾಧ್ಯಮ ನೀತಿ ಕುರಿತು ಫೇಸ್ಬುಕ್ ಅನ್ನು ಟೀಕಿಸಿದ ಟಿಮ್ ಕುಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.