ಬೆಂಗಳೂರು: ನಗರದ ಟೆಕ್ಕಿಯೊಬ್ಬರು ಸ್ಟಾರ್‌ಬಕ್ಸ್‌ನಲ್ಲಿ ಕುಳಿತು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ ಲ್ಯಾಪ್‌ಟಾಪ್ ಕೇವಲ 15 ನಿಮಿಷದಲ್ಲಿ ಕೈ ಸೇರಿದೆ. ಫ್ಲಿಪ್‌ಕಾರ್ಟ್‌ನ ಈ ವೇಗದ ಡೆಲಿವರಿಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ವಸ್ತುಗಳನ್ನು ತ್ವರಿತವಾಗಿ ಡೆಲಿವರಿ ಮಾಡುವ ‘ಫ್ಲಿಕ್‌ಕಾರ್ಟ್ ಮಿನಿಟ್ಸ್’ ಅನ್ನು ಫ್ಲಿಪ್‌ಕಾರ್ಟ್ ಪರಿಚಯಿಸಿದೆ. ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿ ವಿವಿಧ ವಸ್ತುಗಳನ್ನು 15 ನಿಮಿಷದಲ್ಲಿ ಡೆಲಿವರಿ ಮಾಡುತ್ತೇವೆ ಎಂದು ಸಂಸ್ಥೆ ಹೇಳಿತ್ತು.