ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಬ್‌ಹೌಸ್‌ನಲ್ಲಿ ಬಂತು ಹೊಸ ಫೀಚರ್: ಬ್ಯಾಕ್‌ಚಾನಲ್ ಮೆಸೇಜ್ ಆಯ್ಕೆ

ಅಕ್ಷರ ಗಾತ್ರ

ಬೆಂಗಳೂರು: ಆಡಿಯೊ ಮಾತ್ರ ಎಂಬ ಆಯ್ಕೆ ಹೊಂದಿದ್ದ ನೂತನ ಸಾಮಾಜಿಕ ತಾಣ ಕ್ಲಬ್‌ಹೌಸ್‌ನಲ್ಲಿ ಹೊಸ ಫೀಚರ್ ಪರಿಚಯಿಸಲಾಗಿದೆ.

ಬಳಕೆದಾರರಿಗೆ ಹೊಸ ಅಪ್‌ಡೇಟ್ ಜತೆಗೆ ಬ್ಯಾಕ್‌ಚಾನಲ್ ಎಂಬ ಆಯ್ಕೆಯನ್ನು ಕ್ಲಬ್‌ಹೌಸ್ ಆ್ಯಪ್‌ನಲ್ಲಿ ಪರಿಚಯಿಸಲಾಗಿದೆ.

ನೂತನ ಫೀಚರ್ ಮೂಲಕ ಬಳಕೆದಾರರು ವೈಯಕ್ತಿಕ ಮತ್ತು ಗ್ರೂಪ್ ಮೆಸೇಜ್ ಕಳುಹಿಸಬಹುದಾಗಿದೆ.

ಹೊಸ ಫೀಚರ್ ಕುರಿತು ಕ್ಲಬ್‌ಹೌಸ್ ಟ್ವಿಟರ್‌ ಪೋಸ್ಟ್ ಮೂಲಕ ಬಳಕೆದಾರರಿಗೆ ತಿಳಿಸಿದೆ.

ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ನೂತನ ಕ್ಲಬ್‌ಹೌಸ್ ಅಪ್‌ಡೇಟ್ ಜತೆಗೆ ಬ್ಯಾಕ್‌ಚಾನಲ್ ಆಯ್ಕೆ ದೊರೆಯುತ್ತಿದೆ.

ಅಲ್ಲದೆ, ನಿಮಗೆ ಕ್ಲಬ್‌ಹೌಸ್ ಮೂಲಕ ಮೆಸೇಜ್ ಬರುವುದು ಬೇಡವೆಂದಾದಲ್ಲಿ, ನಿರ್ಬಂಧಿಸುವ ಆಯ್ಕೆಯೂ ಇದೆ.

ಕಳೆದ ಮೇ ತಿಂಗಳಿನಲ್ಲಿ ಆಂಡ್ರಾಯ್ಡ್ ಆವೃತ್ತಿ ಲಭ್ಯವಾದ ಬಳಿಕ 80 ಲಕ್ಷಕ್ಕೂ ಅಧಿಕ ಹೊಸ ಬಳಕೆದಾರರನ್ನು ಪಡೆದುಕೊಂಡಿದೆ ಎಂದು ಕ್ಲಬ‌್‌ಹೌಸ್ ಹೇಳಿದೆ. ಅದಕ್ಕೂ ಮೊದಲು ಐಫೋನ್‌ಗಳಿಗೆ ಮಾತ್ರ ಲಭ್ಯವಿತ್ತು.

ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ'ಪ್ರಜಾವಾಣಿ ಆಲದ ಮರ' ಕ್ಲಬ್‌ಹೌಸ್ ಖಾತೆ ಸೇರಿಕೊಳ್ಳಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT