ಸೋಮವಾರ, ಜೂನ್ 1, 2020
27 °C

ಕೋವಿಡ್-19: ಸಾರ್ವಜನಿಕರೊಂದಿಗೆ ಟ್ವಿಟರ್‌ನಲ್ಲಿ ಪೋಲಿಸ್ ಇಲಾಖೆ ಸಂಪರ್ಕ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಪೊಲೀಸ್‌ ಟ್ವೀಟ್‌

ಬೆಂಗಳೂರು: ದೇಶದಾದ್ಯಂತ ಕೋವಿಡ್‌–19 ಸಾಂಕ್ರಾಮಿಕದ ಬಿಕ್ಕಟ್ಟಿನಲ್ಲಿ ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು, ಅನುಸರಿಸಬೇಕಾದ ಹಾಗೂ ಮಾಡಬಾರದ ಕಾರ್ಯಗಳ ಬಗ್ಗೆ ತಿಳಿವಳಿಕೆ ನೀಡಲು ಟ್ವಿಟರ್‌ ಸಂಪರ್ಕ ಮಾಧ್ಯಮ ಬಳಕೆ ಮಾಡುತ್ತಿದೆ. 

ಹಾಸ್ಯಮಯ ಹಾಗೂ ಅರಿವು ಮೂಡಿಸುವ ಸಾಲುಗಳನ್ನು ಒಳಗೊಂಡ ಟ್ವೀಟ್‌ ಚಾಟ್ಸ್‌, ಟ್ವೀಟ್‌ ಥ್ರೆಡ್ಸ್‌, ರಿಟ್ವೀಟ್ಸ್‌, ಹ್ಯಾಷ್‌ಟ್ಯಾಗ್ಸ್‌, ಚಿತ್ರಗಳು ಹಾಗೂ ವಿಡಿಯೊದಂತಹ ವಿವಿಧ ಆಯ್ಕೆಗಳನ್ನು ಸಮರ್ಥವಾಗಿ ಪೊಲೀಸ್‌ ಇಲಾಖೆ ಬಳಸಿಕೊಳ್ಳುತ್ತಿದೆ. ಕ್ರಿಯಾಶೀಲ ಹಾಗೂ ಸಕಾರಾತ್ಮಕ ಅಂಶಗಳನ್ನು ಒಳಗೊಂಡ ಟ್ವೀಟ್‌ಗಳ ಮೂಲಕ ದೇಶದಾದ್ಯಂತ ಜನರ ಮನಸ್ಸು ಸೂರೆಗೊಳ್ಳುತ್ತಿದೆ. ಲಾಕ್‌ಡೌನ್‌ ಸಂಬಂಧಿಸಿದ ಸಾರ್ವಜನಿಕ ವಿಚಾರಣೆ ಹಾಗೂ ಆತಂಕಗಳನ್ನು ನಿವಾರಿಸಲು @DelhiPolice ಟ್ವೀಟ್‌ ಚಾಟ್‌ ಸೇವೆಯನ್ನು ಉಪಯೋಗಿಸಿದೆ. 

ಅಪಾಯಗಳನ್ನು ತಡೆಗಟ್ಟುವುದು, ಪ್ರಮುಖ ಯೋಜನಾ ಸಲಹೆಗಳ ಪಡೆಯುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಾಧಿಕಾರಗಳು ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಮುಕ್ತ ಸಂವಹನ ಸಂಪರ್ಕವನ್ನು ಟ್ವಿಟರ್‌ ಮೂಲಕ ಸಾಧಿಸಲಾಗಿದೆ. ಕೋವಿಡ್‌–19 ಕುರಿತಾದ ಇತ್ತೀಚಿನ ಹಾಗೂ ವಿಶ್ವಾಸನೀಯ ಮಾಹಿತಿಗಾಗಿ ಟ್ವಿಟರ್‌ನಲ್ಲಿರುವ ಪ್ರಮುಖ ಖಾತೆಗಳ ಪಟ್ಟಿಯನ್ನು Twitter India ಪ್ರಕಟಿಸಿದೆ. ಪ್ರತಿಕ್ರಿಯಾ ನಿರ್ವಹಣೆಯಲ್ಲಿ ಕೌಶಲ ವೃದ್ಧಿಸಲು ಹಲವು ಪೊಲೀಸ್‌ ಇಲಾಖೆಗಳೊಂದಿಗೆ ಟ್ವಿಟರ್‌ ಕಾರ್ಯ ನಿರ್ವಹಿಸುತ್ತಿದೆ. 

ಬೆಂಗಳೂರು ಪೋಲಿಸ್ (@BlrCityPolice) #ArrestCorona ಎಂಬ ಪ್ರಚಾರ ಆಂದೋಲನ ನಡೆಸುತ್ತಿದೆ. ಸಕಾರಾತ್ಮ ವಿಷಯಗಳನ್ನು ಹಂಚುವುದಕ್ಕೆ ಹಾಗೂ ಜನರನ್ನು ಪ್ರೋತ್ಸಾಹಿಸುವುದಕ್ಕೆ ಇದನ್ನು ಬಳಸಿಕೊಳ್ಳುತ್ತಿದೆ. 

ಬೆಂಗಳೂರು ನಗರ ಪೋಲಿಸ್ ಇಲಾಖೆಯ ಡಿಸಿಪಿ ಇಶಾ ಪಂತ್, ಬೆಂಗಳೂರು ನಗರ ಪೋಲಿಸ್ ಟ್ವಿಟ್ಟರ್‌ನಲ್ಲಿ #ArrestCorona ಪ್ರಚಾರ ಆಂದೋಲಯನ ಆರಂಭಿಸಿದ್ದಾರೆ. ಇದರ ಮೂಲಕ ದಿನದ ಹೀರೊ ಸರಣಿಯಲ್ಲಿ ಸಕಾರಾತ್ಮಕ ಕಥೆಗಳನ್ನು ಪ್ರಕಟಿಸುವ ಮೂಲಕ ಜಾಗೃತಿ ಹರಡುವುದರ ಜೊತೆಗೆ, ಮೂಢನಂಬಿಕೆಗಳನ್ನು ತೊಲಗಿಸಿ ಸಂತೋಷ ಹರಡುವ ಪ್ರಯತ್ನ ನಡೆಸಲಾಗುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು