ಅಂಗಡಿಯೊಂದರಲ್ಲಿ ಚಿಪ್ಸ್ ಕದಿಯಲು ಕೋತಿಗೆ ಶ್ವಾನ ಸಹಾಯ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ನಾಯಿಯು ಅಂಗಡಿಯ ಮುಂದೆ ನೇತು ಹಾಕಿದ್ದ ಚಿಪ್ಸ್ ಪೊಟ್ಟಣ ಕದಿಯಲು ಕೋತಿಗೆ ಸಹಾಯ ಮಾಡಿದೆ. ನಾಯಿಯ ಬೆನ್ನ ಮೇಲೆ ಕುಳಿತು ಚಿಪ್ಸ್ ಪೊಟ್ಟಣ ಕದಿಯಲು ಕೋತಿ ಯತ್ನಿಸುತ್ತಿರುವುದನ್ನು ನೋಡಿ, ಯಾರೋ ಒಬ್ಬರು ವಿಡಿಯೊ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದು ಹಳೆಯ ವಿಡಿಯೊವಾಗಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈರಲ್ ಆಗಿತ್ತು. ಇದು ‘ಮೀಮ್ಸ್ ಬಿಕೆಎಸ್‘ ಎಂಬ ಇನ್‌ಸ್ಟಾ ಪೇಜ್‌ನಲ್ಲಿ ಪ್ರಕಟವಾಗಿತ್ತು. ಇದೀಗ ಮತ್ತೆ ಇದೇ ವಿಡಿಯೊ ಹರಿದಾಡುತ್ತಿದೆ.
ಸದ್ಯ ಈ ವಿಡಿಯೊಗೆ ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಹಾಗೇ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ.
ಈ ವಿಡಿಯೊಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಕೋತಿ ಚಿಪ್ಸ್ ಕದಿಯುತ್ತಿದೆ ಎಂದು ಹೇಳಿದರೆ, ಮತ್ತೆ ಕೆಲವರು ಕೋತಿ ಚಿಪ್ಸ್ ಪಡೆಯಲು ಯತ್ನಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಕೋತಿಯ ಈ ವಿಡಿಯೊಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.