ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಅಕ್ಷರ ಮಿತಿ 280ರಿಂದ 4000ಕ್ಕೆ ಏರಿಕೆ: ಇಲಾನ್ ಮಸ್ಕ್

ಟ್ವೀಟ್ ಮಾಡುವಾಗ ಅಕ್ಷರ ಮಿತಿ ಏರಿಕೆ ಮಾಡಲು ಮಸ್ಕ್ ನಿರ್ಧಾರ
Last Updated 12 ಡಿಸೆಂಬರ್ 2022, 13:31 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಟ್ವೀಟ್ ಮಾಡುವ ಸಂದರ್ಭದಲ್ಲಿ ಅದರಲ್ಲಿನ ಅಕ್ಷರ (ಕ್ಯಾರಕ್ಟರ್‌) ಮಿತಿಯನ್ನು 280ರಿಂದ 4,000ಕ್ಕೆ ಏರಿಕೆ ಮಾಡುವುದಾಗಿ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

ಓರ್ವ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿ, ಮಸ್ಕ್ ಅವರಲ್ಲಿ ಟ್ವೀಟ್ ಅಕ್ಷರ ಮಿತಿಯನ್ನು ಏರಿಕೆ ಮಾಡುವಿರಾ ಎಂದು ಕೇಳಿದ್ದರು.

ಅವರ ಪ್ರಶ್ನೆಗೆ ಮಸ್ಕ್ ಹೌದು ಎಂದು ಉತ್ತರಿಸಿದ್ದಾರೆ.

ಆದರೆ, ಟ್ವೀಟ್ ಅಕ್ಷರ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಿರುವ ಅಕ್ಷರ ಮಿತಿಯೇ ಸರಿಯಾಗಿದೆ, ಟ್ವೀಟ್ ಎನ್ನುವುದಕ್ಕೆ ಪೂರಕವಾಗಿ 280 ಅಕ್ಷರ ಇದ್ದರೆ ಸಾಕಾಗುತ್ತದೆ. 4,000ಕ್ಕೆ ಏರಿಕೆಯಾದರೆ, ಅದು ಪ್ರಬಂಧವಾಗುವುದಿಲ್ಲವೇ ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT