ನವದೆಹಲಿ: ಭಾರತದ ಮೊದಲ ಮಹಿಳಾ ವೈದ್ಯೆ ಕಾದಂಬಿನಿ ಗಂಗೂಲಿ ಅವರ 160ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ವಿಶೇಷ ಗೌರವವನ್ನು ಸಲ್ಲಿಸಿದೆ.
ಗೂಗಲ್ ಪುಟದಲ್ಲಿ ಕಾದಂಬಿನಿ ಗಂಗೂಲಿ ಅವರ ಡೂಡಲ್ಪ್ರಕಟಿಸಲಾಗಿದೆ. ಇದನ್ನು ಕ್ಲಿಕ್ ಮಾಡಿದಾಗ ಕದಂಬಿನಿ ಗಂಗೂಲಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ.
1861ನೇ ಇಸವಿಯ ಜುಲೈ 18ರಂದು ಜನಿಸಿದ ಕಾದಂಬಿನಿ 1884ರಲ್ಲಿ ಕಲ್ಕತ್ತದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಮೊದಲ ಮಹಿಳೆಯಾಗಿದ್ದಾರೆ. 19ನೇ ಶತಮಾನದಲ್ಲಿ ಪುರುಷ ಪ್ರಾಬಲ್ಯದ ನಡುವೆ ಕಾದಂಬಿನಿ ಅಸಾಧಾರಣ ಸಾಧನೆ ಮಾಡಿದ್ದರು.
ಕಾದಂಬಿನಿಯವರು ಕಲ್ಕತ್ತದವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಶಾಸ್ತ್ರ ಅಭ್ಯಸಿಸಿದರು. ಇದೇ ಸಂದರ್ಭದಲ್ಲಿ ಇನ್ನೋರ್ವ ಭಾರತೀಯ ಮಹಿಳೆ ಆನಂದಿ ಗೋಪಾಲ್ ಜೋಶಿ ಅಮೆರಿಕದಲ್ಲಿ ವೈದ್ಯಳಾಗಿ ಉತ್ತೀರ್ಣಗೊಂಡರು.
ವೈದ್ಯಲೋಕ ಹಾಗೂ ಮಹಿಳಾ ಅಭಿವೃದ್ಧಿಗಾಗಿ ಕಾದಂಬಿನಿ ಗಂಗೂಲಿ ಸಾಧನೆಯನ್ನು ಗುರುತಿಸಿ ಗೂಗಲ್ ವಿಶೇಷ ಗೌರವ ಸಲ್ಲಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.