ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸಾಪ್, ಇನ್‌ಸ್ಟಾಗ್ರಾಂಗೂ ಮೆಸೆಂಜರ್ ರೂಮ್ಸ್ ವಿಸ್ತರಿಸುತ್ತಿದೆ ಫೇಸ್‌ಬುಕ್

Last Updated 11 ಮೇ 2020, 4:41 IST
ಅಕ್ಷರ ಗಾತ್ರ

ಝೂಮ್, ಗೂಗಲ್ ಹ್ಯಾಂಗೌಟ್ಸ್, ಮೈಕ್ರೋಸಾಫ್ಟ್ ಟೀಮ್ಸ್, ಸ್ಕೈಪ್ ಮುಂತಾದ ವಿಡಿಯೊ ಕರೆ ತಂತ್ರಜ್ಞಾನಗಳೆದುರು ಸ್ಪರ್ಧೆಗೆ ಇಳಿದಿರುವ ಫೇಸ್‌ಬುಕ್, ತನ್ನ ಮೆಸೆಂಜರ್ ಪ್ಲ್ಯಾಟ್‌ಫಾರ್ಮ್‌ನ ‘ಮೆಸೆಂಜರ್ ರೂಮ್ಸ್’ ಸೌಕರ್ಯವನ್ನು ವಿಸ್ತರಿಸಲು ಹೊರಟಿದೆ. ತನ್ನದೇ ಒಡೆತನದಲ್ಲಿರುವ ವಾಟ್ಸ್ಆ್ಯಪ್‌ನಲ್ಲಿ, ಸಮೂಹ ಕರೆಗಳ ವೈಶಿಷ್ಟ್ಯ ವಿಸ್ತರಿಸಿ, 8 ಮಂದಿಗೆ ಈಗಾಗಲೇ ಅವಕಾಶ ಮಾಡಿಕೊಟ್ಟಿರುವ ಅದು, ತನ್ನ ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲೂ ಲೈವ್ ವಿಡಿಯೊ ವೈಶಿಷ್ಟ್ಯವನ್ನು ವಿಸ್ತರಿಸಿದೆ.

ಲಾಕ್‌ಡೌನ್ ವಿಸ್ತರಣೆಯ ಈ ಸಂದರ್ಭದಲ್ಲಿ ಈ ರೀತಿಯ ವಿಡಿಯೊ ಕರೆ ಪ್ಲ್ಯಾಟ್‌ಫಾರ್ಮ್‌ಗಳೇ ಹಲವಾರು ಕಂಪನಿಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಮುನ್ನಡೆಸಿವೆ ಮತ್ತು ಜಗತ್ತಿನಾದ್ಯಂತ ಸಾಕಷ್ಟು ಬಳಕೆದಾರರಿಂದ ಮನ್ನಣೆಯನ್ನೂ ಪಡೆದುಕೊಂಡಿವೆ.

ಇದರ ಮುಂದಿನ ಭಾಗವಾಗಿ ಫೇಸ್‌ಬುಕ್ ಈ ಮೊದಲೇ ಘೋಷಿಸಿದಂತೆ, ತನ್ನ ಮೆಸೆಂಜರ್ ರೂಮ್ಸ್ ಸೌಕರ್ಯವನ್ನು ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂಗೂ ವಿಸ್ತರಿಸಲು ಆರಂಭಿಸಿದೆ. ಈ ಮೂಲಕ ಮೆಸೆಂಜರ್, ವಾಟ್ಸ್ಆ್ಯಪ್ ಹಾಗೂ ಇನ್‌ಸ್ಟಾಗ್ರಾಂಗಳನ್ನು ಪರಸ್ಪರ ಬೆಸೆಯುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇತ್ತೀಚೆಗೆ ಸೋರಿಕೆಯಾಗಿರುವ ವರದಿಯ ಪ್ರಕಾರ, ಬ್ರೌಸರ್ ಮೂಲಕ ವಾಟ್ಸ್ಆ್ಯಪ್‌ನಲ್ಲಿ ಕೆಲಸ ಮಾಡುತ್ತಿರುವವರಿಗೆ ‘ಮೆಸೆಂಜರ್ ರೂಮ್ಸ್’ನಲ್ಲಿರುವವರೊಂದಿಗೆ ಸಂವಹನ ನಡೆಸುವ ಸೌಕರ್ಯವು ಪ್ರಾಯೋಗಿಕ ಹಂತದಲ್ಲಿದೆ.

ವಿದೇಶದ ಕೆಲವು ವಾಟ್ಸ್ಆ್ಯಪ್ ಬಳಕೆದಾರರಿಗೆ ಈ ಸೌಕರ್ಯವನ್ನು ಪರೀಕ್ಷೆಗಾಗಿ ಬಿಡುಗಡೆ ಮಾಡಲಾಗಿದೆ. ಇದು ಸದ್ಯಕ್ಕೆ ವೆಬ್‌ನಲ್ಲಿ ವಾಟ್ಸ್ಆ್ಯಪ್ ಬಳಸುವವರಿಗೆ ಮಾತ್ರ. ಆ್ಯಪ್ ಬಳಕೆದಾರರ ಮೇಲೆ ಇನ್ನೂ ಪ್ರಯೋಗ ಆರಂಭವಾಗಿಲ್ಲ. ಇದು ಯಶಸ್ವಿಯಾದರೆ, ಶೀಘ್ರದಲ್ಲೇ ಎಲ್ಲರಿಗೂ ಹಂತಹಂತವಾಗಿ ಬಿಡುಗಡೆಯಾಗಲಿದೆ. ಹೀಗಾದಲ್ಲಿ, ವಾಟ್ಸ್ಆ್ಯಪ್ ಮತ್ತು ಮೆಸೆಂಜರ್ ಬಳಕೆದಾರರು ಪರಸ್ಪರ ವಿಡಿಯೊ ಕಾಲಿಂಗ್ ಮೂಲಕ ಸಂವಹನ ನಡೆಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT