ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್‌ ಕದಿಯುವ ಆ್ಯಪ್‌ಗಳ ಬಗ್ಗೆ ಫೇಸ್‌ಬುಕ್‌ ಬಳಕೆದಾರರಿಗೆ ಮೆಟಾ ಎಚ್ಚರಿಕೆ

Last Updated 7 ಅಕ್ಟೋಬರ್ 2022, 16:12 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಪಾಸ್‌ವರ್ಡ್‌ಗಳನ್ನು ಕದಿಯಲು ವಿನ್ಯಾಸಗೊಳಿಸಲಾದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಬಗ್ಗೆ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ‘ಮೆಟಾ’ ಶುಕ್ರವಾರ ಎಚ್ಚರಿಕೆ ನೀಡಿದೆ.

‘ಈ ವರ್ಷ ಇಲ್ಲಿಯವರೆಗೆ 400 ಕ್ಕೂ ಹೆಚ್ಚು ‘ದುರುದ್ದೇಶಪೂರಿತ‘ ಅಪ್ಲಿಕೇಶನ್‌ಗಳನ್ನು ನಾವು ಗುರುತಿಸಿದ್ದೇವೆ. ಅವುಗಳನ್ನು ಆ್ಯಪಲ್‌ ಅಥವಾ ಆ್ಯಂಡ್ರಾಯ್ಡ್‌ ಸಾಫ್ಟ್‌ವೇರ್‌ ಚಾಲಿತ ಫೋನ್‌ಗಳಿಗೆ ಹೊಂದಿಕೆಯಾಗುವಂತೆ ರೂಪಿಸಲಾಗಿದೆ. ಆ್ಯಪಲ್‌ ಮತ್ತು ಗೂಗಲ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಅವುಗಳು ಲಭ್ಯವಿವೆ’ ಎಂದು ಮೆಟಾದ ‘ಬೆದರಿಕೆ/ ಅಡಚಣೆ ನಿವಾರಣಾ ವಿಭಾಗ’ದ ನಿರ್ದೇಶಕ ಡೇವಿಡ್ ಅಗ್ರನೋವಿಚ್ ಹೇಳಿದ್ದಾರೆ.

‘ಈ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್‌ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿವೆ. ಅಂತರ್ಜಾಲ ಬಳಕೆದಾರರನ್ನು ಆಕರ್ಷಿಸಲು ಅವುಗಳನ್ನು ಫೋಟೋ ಎಡಿಟರ್‌, ಗೇಮ್‌, ವಿಪಿಎನ್ ಸರ್ವಿಸ್‌, ಬ್ಯುಸಿನೆಸ್‌ ಅಪ್ಲಿಕೇಶನ್‌ಗಳಂತೆ ಮರೆಮಾಚಲಾಗಿದೆ’ ಎಂದು ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

‘ಹೆಚ್ಚಿನ ವೈಶಿಷ್ಟ್ಯಗಳ ಆಮಿಷ ಒಡ್ಡುವ ಆ್ಯಪ್‌ಗಳು ಅದಕ್ಕಾಗಿ, ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆಗುವಂತೆ ಬಳಕೆದಾರರನ್ನು ಕೇಳುತ್ತದೆ. ಹಾಗೇನಾದರೂ ಲಾಗಿನ್‌ ಆದರೆ, ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ಗಳನ್ನು ಆ್ಯಪ್‌ ಕದಿಯುತ್ತದೆ’ ಎಂದು ಮೆಟಾದ ಭದ್ರತಾ ತಂಡ ಹೇಳಿದೆ.

‘ಲಾಗಿನ್ ಮಾಹಿತಿಯನ್ನು ನಮೂದಿಸಲು ಗ್ರಾಹಕರನ್ನು ಪ್ರೇರೇಪಿಸಿ ಹ್ಯಾಕರ್‌ಗಳು ಖಾತೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ,’ ಎಂದು ಮೆಟಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT