ದೇವಾಲಯಗಳಿಗೆ ಪಾದಯಾತ್ರೆ ಮೂಲಕ ಹೋಗುವುದು ಸಾಮಾನ್ಯವಾಗಿದೆ. 9 ವರ್ಷದ ಬಾಲಕಿ ಸ್ಕೇಟಿಂಗ್ ಮಾಡಿಕೊಂಡು ಫಿರೋಜಾಬಾದ್ನಿಂದ ಆಯೋಧ್ಯೆಯನ್ನು ತಲುಪಿ ರಾಮನ ದರ್ಶನವನ್ನು ಪಡೆದಿದ್ದಾರೆ.

9 ವರ್ಷದ ವಂಶಿಕಾ ಭಗವಾನ್ ಕೊರೆಯುವ ಚಳಿಯಲ್ಲಿ ಸ್ಕೇಟಿಂಗ್ ಮಾಡಿಕೊಂಡು 450 ಕಿ.ಮೀ ಪ್ರಯಾಣಿಸಿ ರಾಮ ಲಲ್ಲಾನ ದರ್ಶನ ಪಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
.ಪೊಲೀಸ್, ಪೊಲೀಸ್ ಎಂದು ಕೂಗಿದ ಪಂಜರದಲ್ಲಿದ್ದ ಗಿಳಿ: ಕಾರಣ ಏನು ಗೊತ್ತಾ?.
ಫಿರೋಜಾಬಾದ್ನ ವಂಶಿಕಾ ಭಗವಾನ್ ಅವರು ಈ ಸಾಧನೆಯನ್ನು ಮಾಡಿದ್ದಾರೆ. ರಾಮನ ಮೇಲಿನ ಭಕ್ತಿಯಿಂದ 450 ಕಿ.ಮೀ ದೂರದಲ್ಲಿದ್ದ ರಾಮಮಂದಿರಕ್ಕೆ 5 ದಿನಗಳಲ್ಲಿ ತಲುಪಿದ್ದಾರೆ. ಬಾಲಕಿಯ ಭಕ್ತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜನವರಿ 3ರಂದು ಫಿರೋಜಾಬಾದ್ನಿಂದ ತಮ್ಮ ಪ್ರಯಾಣವನ್ನು ವಂಶಿಕಾ ಭಗವಾನ್ ಆರಂಭಿಸಿದರು. 5 ದಿನಗಳ ಬಳಿಕ ಆಯೋಧ್ಯೆಗೆ ತಲುಪಿದ್ದಾರೆ. ವಂಶಿಕಾ ಸ್ಕೇಟಿಂಗ್ ಮಾಡುತ್ತಿದ್ದಾಗ ಆಕೆಯ ಪ್ರಯಾಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಆಕೆಯ ತಂದೆ ಮತ್ತು ಚಿಕ್ಕಪ್ಪ ಕಾರಿನಲ್ಲಿ ಆಕೆಯನ್ನು ಹಿಂಬಾಲಿಸಿದ್ದಾರೆ. ಕೊನೆಗೂ ಗುರಿ ಮುಟ್ಟಿ ಬಾಲರಾಮನ ದರ್ಶನ ಪಡೆದಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.