ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಿಗಾಗಿ 'ಹರ್ ಸರ್ಕಲ್' ಆರಂಭಿಸಿದ ನೀತಾ ಅಂಬಾನಿ

ಸಾಮಾಜಿಕ ಮಾಧ್ಯಮ ವೇದಿಕೆ
ಫಾಲೋ ಮಾಡಿ
Comments

ನವದೆಹಲಿ: ರಿಲಯನ್ಸ್‌ ಫೌಂಡೇಷನ್‌ ಮುಖ್ಯಸ್ಥೆ ನೀತಾ ಮುಕೇಶ್‌ ಅಂಬಾನಿ ಭಾನುವಾರ 'ಹರ್‌ ಸರ್ಕಲ್‌' (Her Circle) ಸಾಮಾಜಿಕ ಮಾಧ್ಯಮ ವೇದಿಕೆಗೆ ಚಾಲನೆ ನೀಡಿದ್ದಾರೆ.

ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಮಹಿಳೆಯ ಸಬಲೀಕರಣ, ಉನ್ನತಿಯ ಗುರಿಯೊಂದಿಗೆ ಈ ಸಾಮಾಜಿಕ ವೇದಿಕೆಗೆ ಆರಂಭಿಸಲಾಗಿದೆ.

ಈ ಪ್ಲಾಟ್‌ಫಾರ್ಮ್‌ಗೆ ಸಬ್‌ಸ್ಕ್ರೈಬ್‌ ಮಾಡಿಕೊಳ್ಳುವವರು ವಿಡಿಯೊ ವೀಕ್ಷಿಸಬಹುದು, ಬದುಕಿಗೆ ಸಂಬಂಧಿಸಿದ ಪರಿಹಾರಗಳನ್ನು ಒಳಗೊಂಡ ಲೇಖನಗಳನ್ನು ಓದಬಹುದು, ಹಣಕಾಸು, ಕೆಲಸ, ವ್ಯಕ್ತಿತ್ವ ವಿಕಸನ, ಸಮುದಾಯ ಸೇವೆಗಳು, ಫ್ಯಾಷನ್‌, ಸೌಂದರ್ಯ, ಮನರಂಜನೆ, ಆರೋಗ್ಯ, ಸೃಜನಶೀಲ ಅಭಿವ್ಯಕ್ತಿ ಹಾಗೂ ಮಹಿಳೆಯರು ಮುನ್ನಡೆಸುತ್ತಿರುವ ಎನ್‌ಜಿಒಗಳು ಮತ್ತು ಇತರೆ ಸಂಸ್ಥೆಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿ ಭಾಗಿಯಾಗುವ ಚಟುಚಟಿಕೆಗಳಲ್ಲಿ ಸಕ್ರಿಯವಾಗಬಹುದಾಗಿದೆ.

'ಹರ್‌ಸರ್ಕಲ್‌ ಡಾಟ್‌ ಇನ್‌ (hercircle.in) ಮೂಲಕ ಲಕ್ಷಾಂತರ ಮಹಿಳೆಯರನ್ನು ಬೆಂಬಲಿಸುವ ಮತ್ತು ಒಗ್ಗಟ್ಟಿನ ಕಾರ್ಯಕ್ಷೇತ್ರವನ್ನು ರೂಪಿಸುವುದು ಸಾಧ್ಯವಾಗಲಿದೆ, ಈ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗೆ ಸೇರ್ಪಡೆಯಾಗಲು ಪ್ರತಿ ಮಹಿಳೆಯನ್ನು ಆಹ್ವಾನಿಸುತ್ತದೆ... ' ಎಂದು ನೀತಾ ಅಂಬಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರ್‌ ಸರ್ಕಲ್‌ ಎಲ್ಲ ಸಂಸ್ಕೃತಿಗಳು, ಸಮುದಾಯಗಳು ಹಾಗೂ ರಾಷ್ಟ್ರಗಳಿಂದ ಮಹಿಳೆಯರ ಅಭಿಯಾನಗಳು, ಯೋಜನೆಗಳನ್ನು ಆಹ್ವಾನಿಸಿದೆ. ಈ ವೇದಿಕೆಯಲ್ಲಿ ಸೋದರಿತ್ವ ಮತ್ತು ಸಮಾನತೆಯು ನಮ್ಮ ಸಂಪರ್ಕಿತ ವಿಷಯವಾಗಲಿವೆ ಎಂದಿದ್ದಾರೆ.

'ಹನ್ನೊಂದು ಜನ ಹುಡುಗಿಯರಿದ್ದ ಕುಟುಂಬದ ಮಗಳಾಗಿ ಬೆಳೆದ ನನಗೆ, ನನ್ನಲ್ಲಿ ನಂಬಿಕೆ ಇಡುವುದನ್ನು ಕಲಿಸಿದರು. ನನ್ನ ಮಗಳು ಇಶಾ ಮೂಲಕ, ನನ್ನ ಕನಸುಗಳ ಬೆನ್ನೇರಿ ಹೊರಡುವ ಅಗಾಧ ಪ್ರೀತಿ ಮತ್ತು ವಿಶ್ವಾಸವನ್ನು ಪಡೆದೆ. ನನ್ನ ಸೊಸೆ ಶ್ಲೋಕಾಳಿಂದ, ತಾಳ್ಮೆ ಮತ್ತು ಸಹಾನುಭೂತಿಯನ್ನು ಕಲಿತೆ. ನನ್ನ ಇಡೀ ಜೀವನ ಬಲಿಷ್ಠ ಮಹಿಳೆಯರಿಂದ ಸುತ್ತುವರಿದಿದ್ದೆ, ಅವರಿಂದ ಬಹಳಷ್ಟು ಕಲಿತೆ, ನನ್ನ ಕಲಿಕೆಯನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಕೌಶಲ ಮತ್ತು ಉದ್ಯೋಗ ವಿಭಾಗಗಳಲ್ಲಿ ಹೊಸ ಔದ್ಯೋಕಿಕ ಕೌಶಲಗಳನ್ನು ಕಂಡುಕೊಳ್ಳಲು ಸಹಕಾರಿಯಾಗಲಿದೆ, ಅವರ ಪ್ರೊಫೈಲ್‌ಗೆ ತಕ್ಕಂತೆ ಉದ್ಯೋಗ ಅವಕಾಶಗಳನ್ನೂ ಪಡೆಯಬಹುದಾಗಿದೆ. ರಿಲಯನ್ಸ್‌ ಸಮಿತಿಯ ತಜ್ಞರಿಂದ ಆರೋಗ್ಯ, ಶಿಕ್ಷಣ, ಉದ್ಯಮ, ಹಣಕಾಸು, ಮಾರ್ಗದರ್ಶನ ಹಾಗೂ ನಾಯಕತ್ವ ಸೇರಿದಂತೆ ಇತರೆ ವಿಷಯಗಳಲ್ಲಿ ಮಹಿಳೆಯರ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿಗದಿತ ಕ್ಷೇತ್ರದಲ್ಲಿ ಅತ್ಯುತ್ತಮ ವ್ಯಕ್ತಿಗಳಿಂದ ಮಾಸ್ಟರ್ ಕ್ಲಾಸ್‌ಗಳಿಗೆ ಅಥವಾ ಡಿಜಿಟಲ್‌ ಕೋರ್ಸ್‌ಗಳಿಗೆ ಅವಕಾಶ ಸಿಗಲಿದೆ. ಹೋರಾಟದಿಂದ ಯಶಸ್ಸಿನವರೆಗಿನ ತಮ್ಮ ಬದುಕಿನ ಪಯಣವನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ಬಹಳಷ್ಟು ಜನರಿಗೆ ಸ್ಫೂರ್ತಿ, ಭರವಸೆ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹರ್‌ ಸರ್ಕಲ್‌ ಪ್ಲಾಟ್‌ಫಾರ್ಮ್‌ಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಪ್ರಸ್ತುತ ಇಂಗ್ಲಿಷ್‌ ಭಾಷೆಯಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಭಾಷೆಗಳಿಗೂ ವಿಸ್ತರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT