ಭಾನುವಾರ, ಜುಲೈ 25, 2021
22 °C

ಎಂಟು ಖಾತೆಗಳಿಂದ ಮಾಹಿತಿ ಕದ್ದಿರುವ ಹ್ಯಾಕರ್‌ಗಳು: ಟ್ವಿಟರ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹ್ಯಾಕರ್‌ಗಳು ಈ ವಾರ ಸುಮಾರು ಎಂಟು ಖಾತೆಗಳನ್ನು ಹ್ಯಾಕ್‌ ಮಾಡಿ ಅದರಲ್ಲಿರುವ ಮಾಹಿತಿಯನ್ನು ಡೌನ್‌ಲೋಡ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವು ಯಾವುವೂ ಪರಿಶೀಲಿಸಲಾದ ಖಾತೆಗಳಾಗಿರಲಿಲ್ಲ (ವೆರಿಫೈಡ್‌ ಅಕೌಂಟ್‌) ಎಂದು ಟ್ವಿಟರ್‌ ಸಂಸ್ಥೆ ಶನಿವಾರ ಹೇಳಿದೆ.

ಹ್ಯಾಕರ್‌ಗಳು ಸುಮಾರು 130 ಖಾತೆಗಳನ್ನು ಹ್ಯಾಕ್‌ ಮಾಡುವ ಪ್ರಯತ್ನ ನಡೆಸಿದ್ದರು. 45 ಖಾತೆಗಳ ಪಾಸ್‌ವರ್ಡ್‌ ಅನ್ನು ಮರುರೂಪಿಸಿ, ಆ ಖಾತೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅವುಗಳ ಮೂಲಕ ಟ್ವೀಟ್‌ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಈ ವೇದಿಕೆಯ ಕೆಲವು ಉನ್ನತ ಮಾಹಿತಿಗಳನ್ನು ಅಪಹರಿಸಲು ಹ್ಯಾಕರ್‌ಗಳು ಸಂಸ್ಥೆಯ ಆಂತರಿಕ ವ್ಯವಸ್ಥೆಗೆ ಪ್ರವೇಶ ಪಡೆದಿದ್ದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿ ಜೊ ಬಿಡೆನ್‌, ಟಿ.ವಿ. ಸ್ಟಾರ್‌ ಕಿಮ್‌ ಕರ್ದಾಶಿಯನ್‌, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಕೋಟ್ಯಧಿಪತಿ ಇಯಾನ್‌ ಮಸ್ಕ್‌ ಮುಂತಾದವರ ಖಾತೆಯನ್ನು ಪ್ರವೇಶಿಸಿ ಡಿಜಿಟಲ್‌ ಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ.

ಹ್ಯಾಕರ್‌ಗಳು ಸುಮಾರು 1ಲಕ್ಷ ಡಾಲರ್‌ನಷ್ಟು ಕ್ರಿಪ್ಟೊ ಕರೆನ್ಸಿ ಪಡೆದಿದ್ದಾರೆ ಎಂಬುದು ಬ್ಲಾಕ್‌ಚೇನ್‌ ದಾಖಲೆಗಳು ಹೇಳಿವೆ.

ಅಮೆಜಾನ್‌ ಡಾಟ್‌ ಕಾಂ ಸಂಸ್ಥಾಪಕ ಜೆಫ್‌ ಬೆಜೋಸ್‌, ಹೂಡಿಕೆದಾರರ ವಾರೆನ್‌ ಬಫೆಟ್‌, ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹಾಗೂ ಉಬರ್‌ ಮತ್ತು ಆ್ಯಪಲ್‌ ಸಂಸ್ಥೆಗಳ ಕಾರ್ಪೊರೇಟ್‌ ಖಾತೆಗಳಿಗೂ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ.

ಹ್ಯಾಕರ್‌ಗಳು ಸಂಸ್ಥೆಯ ಸಣ್ಣ ಸಂಖ್ಯೆಯ ಸಿಬ್ಬಂದಿಯ ಸಹಾಯ ಪಡೆದು ಆಂತರಿಕ ಭದ್ರತಾ ವ್ಯವಸ್ಥೆಯೊಳಗೆ ಪ್ರವೇಶಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು