ಗುರುವಾರ , ಡಿಸೆಂಬರ್ 8, 2022
18 °C

ಟ್ವಿಟರ್ ಖಾತೆಗಳಿಗೆ ಶೀಘ್ರವೇ ಗೋಲ್ಡ್‌, ಗ್ರೇ ಟಿಕ್‌: ಎಲಾನ್‌ ಮಸ್ಕ್‌

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ವಿಟರ್‌ ಖಾತೆಗಳನ್ನು ‘ವೈಯಕ್ತಿಕ, ಕಂಪನಿ ಮತ್ತು ಸರ್ಕಾರಕ್ಕೆ ಸೇರಿದ್ದು ಎಂದು ವರ್ಗೀಕರಿಸುವ ಉದ್ದೇಶದಿಂದ’ ಬ್ಲೂ ಟಿಕ್‌ ಜೊತೆಗೆ ಗೋಲ್ಡ್‌ ಮತ್ತು ಗ್ರೇ ಟಿಕ್‌ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗುವುದು ಎಂದು ಕಂಪನಿಯ ಸಿಇಒ ಇಲಾನ್‌ ಮಸ್ಕ್‌ ಶುಕ್ರವಾರ ಹೇಳಿದ್ದಾರೆ.

ಕಂಪನಿಗಳಿಗೆ ಗೋಲ್ಡ್‌ ಟಿಕ್‌, ಸರ್ಕಾರಗಳಿಗೆ ಗ್ರೇ ಟಿಕ್‌ ಹಾಗೂ ವೈಯಕ್ತಿಕ ಬಳಕೆದಾರರಿಗೆ ಬ್ಲೂ ಟಿಕ್‌ ಮಾರ್ಕ್‌ ಇರಲಿದೆ. ಇದು ಕಷ್ಟಕರವಾದರೂ ಅಗತ್ಯವಾಗಿದೆ ಎಂದು ಮಸ್ಕ್‌ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಚೆಕ್‌ ಮಾರ್ಕ್‌ಗಳು ಸಕ್ರಿಯಗೊಳ್ಳುವ ಮೊದಲು ದೃಢೀಕರಿಸುವ ಕೆಲಸ ಕೂಡ ನಡೆಯಲಿದೆ.

ಬ್ಲೂ ಟಿಕ್‌ಗೆ ಶುಲ್ಕ ವಿಧಿಸಲು ಆರಂಭಿಸಿದ ಬಳಿಕ ನಕಲಿ ಖಾತೆಗಳ ಸಂಖ್ಯೆ ಹೆಚ್ಚಾಯಿತು. ಹೀಗಾಗಿ ಕಂಪನಿಯು ಈಚೆಗಷ್ಟೇ ಆ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಇದೀಗ ಮುಂದಿನ ಶುಕ್ರವಾರದಿಂದ ಮತ್ತೆ ಬ್ಲೂಟಿಕ್‌ ಸೇವೆ ಬಳಕೆಗೆ ಲಭ್ಯವಾಗಲಿದೆ ಎಂದು ಮಸ್ಕ್‌ ತಿಳಿಸಿದ್ದಾರೆ.

ವೈಯಕ್ತಿಕ ಬಳಕೆದಾರರು ಒಂದು ನಿರ್ದಿಷ್ಟ ಸಂಸ್ಥೆಗೆ ಸೇರಿದವರು ಎನ್ನುವುದಕ್ಕೆ ಬ್ಲೂ ಟಿಕ್‌ ಮಾರ್ಕ್‌ ಎದುರು ಮತ್ತೊಂದು ಸಣ್ಣ ಲೋಗೊ ನೀಡಲಾಗುವುದು. ಆದರೆ, ಅದಕ್ಕೆ ಆ ಸಂಸ್ಥೆಯ ದೃಢೀಕರಣ ಅಗತ್ಯ. ಈ ಕುರಿತು ಮುಂದಿನ ವಾರ ಹೆಚ್ಚಿನ ವಿವರಣೆ ನೀಡುವುದಾಗಿ ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಕ್ಷಮಾದಾನ’: ಅಮಾನತ್ತಾಗಿರುವ ಟ್ವಿಟರ್‌ ಖಾತೆಗಳಿಗೆ ‘ಕ್ಷಮಾದಾನ’ ನೀಡಲಾಗುವುದು ಎಂದು ಮಸ್ಕ್‌ ಹೇಳಿದ್ದಾರೆ. ಆದರೆ ಈ ನಿರ್ಧಾರದಿಂದಾಗಿ ಟ್ವಿಟರ್‌ನಲ್ಲಿ ದ್ವೇಷದ ಮಾತುಗಳು ಮತ್ತು ತಪ್ಪು ಮಾಹಿತಿಗಳು ಹೆಚ್ಚಾಗಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು