ಭಾನುವಾರ, ಸೆಪ್ಟೆಂಬರ್ 20, 2020
22 °C

ಮುಂಜಾನೆ ಬೇಗ ಏಳುವವರಲ್ಲಿ ಎರಡು ವಿಧ: ಇದರಲ್ಲಿ ನೀವು ಯಾವ ಗುಂಪಿಗೆ ಸೇರುವಿರಿ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಜಾನೆ ಬೇಗ ಎದ್ದೇಳುವ ಅಭ್ಯಾಸವಿದ್ದವರಿಗೋ ಸರಿ. ಇಲ್ಲವಾದಲ್ಲಿ ಬೇಗ ಎದ್ದೇಳೋದು ಅಂದ್ರೆ ಇಂದಿಗೂ ಕೆಲವರಿಗೆ ಕಷ್ಟಸಾಧ್ಯದ ವಿಷಯ ಅದು. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿ ಈ ಕುರಿತಾದ ತಮಾಷೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ಫಿಟ್‌ನೆಸ್‌ಗಾಗಿ ಜನ ಈಗ ಮಾಡದ ಕೆಲಗಳೇ ಇಲ್ಲ. ಈ ಮಧ್ಯೆ ಟ್ರೇಡಿಂಗ್‌ ಮಿಲ್‌ ಮೇಲೆ ಓಡೋದು ಕೆಲವರಿಗೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಮುಂಜಾನೆ ಏಳೋದೆ ಕಷ್ಟ. ಹೀಗಿರುವಾಗ ಮುಂಜಾನೆ ವೇಳೆ ಎದ್ದು ಟ್ರೇಡಿಂಗ್ ಮಿಲ್ ಮೇಲೆ ಓಡುವವರ ಪೈಕಿ ಎರಡು ವಿಧದ ಜನರಿರುತ್ತಾರೆ. 

ಅರ್ಲಿ ಮಾರ್ನಿಂಗ್ ರೈಸರ್ಸ್‌ಗಳಲ್ಲಿ ಎರಡು ವಿಧ... ಒಂದು ಎದ್ದ ಕೂಡಲೇ ಕ್ರಿಯಾಶೀಲರಾಗಿ ಟ್ರೇಡಿಂಗ್‌ ಮಿಲ್ ಮೇಲೆ ಓಡುವವರು. ಮತ್ತೊಂದು ನಿದ್ದೆ ಮಂಪರಿನಲ್ಲೇ ಟ್ರೇಡಿಂಗ್ ಮಿಲ್ ಅನ್ನು ತಳ್ಳುವವರು. ಈ ರೀತಿಯಾಗಿ ಎರಡು ನಾಯಿಗಳು ಟ್ರೇಡಿಂಗ್‌ ಮಿಲ್ ‌ಮೇಲೆ ಹೇಗೆ ವ್ಯಾಯಾಮ ಮಾಡುತ್ತಿವೆ ಎಂಬುದನ್ನು ಕಾಣಬಹುದು. 

ಈ ಟ್ವೀಟ್‌ ಅನ್ನು ಈವರೆಗೂ 1.9 ಸಾವಿರ ಜನರು ರೀಟ್ವೀಟ್ ಮತ್ತು ಕಮೆಂಟ್ ಮಾಡಿದ್ದರೆ, 12.6 ಸಾವಿರ ಜನರು ಲೈಕ್ ಮಾಡಿದ್ದಾರೆ.

ಇದರಲ್ಲಿ ನೀವು ಯಾವ ಪೈಕಿಗೆ ಸೇರುತ್ತೀರಿ ಸರ್ ಎಂದು ದಿಶಾ ಪಟಾನಿ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಸುಶಾಂತ್ ನಂದಾ, ಇವುಗಳಲ್ಲಿ ಯಾವುದೂ ಅಲ್ಲ. ನಾನು ಮುಂಜಾನೆ ಬೇಗ ಏಳುವುದೇ ಇಲ್ಲ ಎಂದು ಬರೆದಿದ್ದಾರೆ. ನಾನು ನಿಜವಾಗಿಯೂ ಎರಡನೇ ರೀತಿಯವನು ಎಂದು ಅನಿಶ್ ಮೂಂಕಾ ಎನ್ನುವವರು ಕಮೆಂಟ್ ಮಾಡಿದ್ದಾರೆ.

ಕ್ವೀನ್ ಬೀ ಸ್ಟಿಂಗ್ಸ್ ಎನ್ನುವವರು ಕಮೆಂಟ್ ಮಾಡಿ, ಎರಡೂ ಕೂಡ ನಾನೆ. ಮೊದಲನೆಯದು ಕಾಫಿಗೂ ಮುನ್ನ, ಎರಡನೆಯದು ಕಾಫಿಯಾದ ನಂತರ ಎಂದು ಬರೆದಿದ್ದಾರೆ.

ಎರಡನೆಯದ್ದು ಅದ್ಭುತವಾಗಿದೆ ಎಂದು ಅಂಜಲಿ ಎನ್ನುವವರು ಉತ್ತರಿಸಿದ್ದಾರೆ.

ಮೊದಲ ರೀತಿಯಲ್ಲಿ ನಾನಿದ್ದೆ. ಆದರೆ ಕ್ವಾರಂಟೈನ್‌ ವೇಳೆ ನಿಸ್ಸಂಶಯವಾಗಿ ಎರಡನೇ ವಿಧವಾಗಿದ್ದೆ ಎಂದು ಮೈಲಾರಾಮ್ ಎನ್ನುವವರು ಕಮೆಂಟಿಸಿದ್ದಾರೆ.

ಈ ಕುರಿತಾದ ಇನ್ನಷ್ಟು ಟ್ವೀಟ್‌ಗಳು ಇಲ್ಲಿವೆ....

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು