ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TikTok: ಅಮೆರಿಕದಲ್ಲಿ ನಿಷೇಧಿಸುವ ಕುರಿತು ಸಚಿವಾಲಯದ ಚಿಂತನೆ

ವಿದೇಶಾಂಗ ವ್ಯವಹಾರಗಳ ಸಮಿತಿಯಿಂದ ಮುಂದಿನ ತಿಂಗಳು ಮತದಾನ ಸಾಧ್ಯತೆ
Last Updated 30 ಜನವರಿ 2023, 6:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚೀನಾ ಮೂಲದ ಜನಪ್ರಿಯ ಅ್ಯಪ್ ಟಿಕ್‌ಟಾಕ್ ಅನ್ನು ಅಮೆರಿಕದಲ್ಲಿ ನಿಷೇಧಿಸುವ ಕುರಿತು ವಿದೇಶಾಂಗ ವ್ಯವಹಾರಗಳ ಸಮಿತಿ ಮುಂದಿನ ತಿಂಗಳು ಮತದಾನ ನಡೆಸಲಿದೆ.

ರಾಷ್ಟ್ರೀಯ ಭದ್ರತೆಗೆ ಅಪಾಯ ತರಲಿದೆ ಎನ್ನುವ ಕಾರಣಕ್ಕಾಗಿ ಅಮೆರಿಕದ ಭದ್ರತಾ ಸಂಸ್ಥೆಗಳು ಈಗಾಗಲೇ ಟಿಕ್‌ಟಾಕ್ ಬ್ಯಾನ್ ಮಾಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿವೆ. ಅದಕ್ಕೆ ಪೂರಕವಾಗಿ ಸಮಿತಿ, ಮುಂದಿನ ತಿಂಗಳು ಮತದಾನ ನಡೆಸಿ, ನಿಷೇಧಕ್ಕೆ ಮುಂದಾಗಲಿದೆ.

ಸಮಿತಿ ಮುಖ್ಯಸ್ಥ ಮೈಖೆಲ್ ಮೆಕಾಲ್ ಈ ಕುರಿತು ಸಮಿತಿಯ ಪರವಾಗಿ ಸರ್ಕಾರದಲ್ಲಿ ಮತದಾನ ನಡೆಸಿ, ಟಿಕ್‌ಟಾಕ್ ನಿಷೇಧಕ್ಕೆ ಪೂರಕವಾಗಿ ತಾಂತ್ರಿಕ ಅಂಶಗಳನ್ನು, ಕಾನೂನಿನ ಸಾಧ್ಯತೆಯನ್ನು ಮಂಡಿಸಲಿದ್ದಾರೆ.

ಚೀನಾ ಮೂಲದ ಟಿಕ್‌ಟಾಕ್, ಅಮೆರಿಕನ್ನರ ಫೋನ್‌ಗೆ ಹಿಂಬಾಗಿಲ ಮೂಲಕ ಪ್ರವೇಶಿಸಿ, ಬಳಕೆದಾರರ ವಿವರ ಕದಿಯುತ್ತಿದೆ ಎಂದು ಮೆಕಾಲ್ ಆರೋಪಿಸಿದ್ದಾರೆ. ಅಲ್ಲದೆ, ಯುವಸಮುದಾಯದ ಮೇಲೆ ಟಿಕ್‌ಟಾಕ್ ಪ್ರಭಾವ ಬೀರುತ್ತಿದೆ. ಹೀಗಾಗಿ ಅವುಗಳನ್ನು ನಿಷೇಧಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT