ನವದೆಹಲಿ: ಭಾರತೀಯ ಸೇನೆ ಸಿಬ್ಬಂದಿಗೆ ಫೇಸ್‌ಬುಕ್, ಪಬ್‌ಜಿ, ಟಿಕ್‌ಟಾಕ್ ಸೇರಿದಂತೆ 89 ಮೊಬೈಲ್ ಅಪ್ಲಿಕೇಷನ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ. ಮಾಹಿತಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವುದಾಗಿ ಭಾರತೀಯ ಸೇನೆ ಮೂಲಗಳಿಂದ ತಿಳಿದು ಬಂದಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಭಾರತ ಸರ್ಕಾರ ಈಗಾಗಲೇ ಟಿಕ್‌ಟಾಕ್, ಕ್ಯಾಮ್‌ಸ್ಕ್ಯಾನರ್, ಯುಸಿ ನ್ಯೂಸ್, ಶೇರ್‌ಇಟ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಭಾರತೀಯ ಸೇನೆ ಚೀನಾ ಆ್ಯಪ್‌ಗಳನ್ನು ಒಳಗೊಂಡಂತೆ ಒಟ್ಟು 89 ಆ್ಯಪ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.

ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚ್ಯಾಟ್, ಫೇಸ್‌ಬುಕ್ ರೀತಿಯ ಚೀನಾ ಮೂಲ ಹೊರತಾದ ಅಪ್ಲಿಕೇಷನ್‌ಗಳನ್ನೂ ರಕ್ಷಣಾ ಕಾರಣಗಳಿಂದಾಗಿ ತೆಗೆಯುವಂತೆ ಹೇಳಿದೆ. ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುವ ರೀತಿ ಚಟುವಟಿಕೆಗಳು ನಡೆಸುತ್ತಿರುವ ಕಾರಣಗಳನ್ನು ನೀಡಿ ಸರ್ಕಾರ ಚೀನಾ ಆ್ಯಪ್‌ಗಳನ್ನು ನಿಷೇಧಿಸಿ ಈ ಹಿಂದೆ ಆದೇಶಿಸಿದೆ.

ಇದನ್ನೂ ಓದಿ: TikTok, ShareIt, CamScanner: ನಿಷೇಧಿತ ಚೀನಾ ಆ್ಯಪ್ಗಳಿಗೆ ಪರ್ಯಾಯ ಇಲ್ಲಿದೆ

ಸೇನೆ ಸಿಬ್ಬಂದಿಯ ಸ್ಮಾರ್ಟ್‌ಫೋನ್‌ಗಳಿಂದ ತೆಗೆಯುವಂತೆ ಹೇಳಲಾಗಿರುವ ಆ್ಯಪ್‌ಗಳನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳಲ್ಲಿ ಕೆಲವು ಇಲ್ಲಿದೆ–

* ಮೆಸೇಜಿಂಗ್ ಆ್ಯಪ್: ವಿ ಚ್ಯಾಟ್, ಹೆಲೊ, ಶೇರ್ ಚ್ಯಾಟ್, ವೈಬರ್, ಐಎಂಒ, ಹೈಕ್ ಹಾಗೂ ಇತರೆ
* ಸಾಮಾಜಿಕ ಮಾಧ್ಯಮ: ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚ್ಯಾಟ್
* ವಿಡಿಯೊ ಆ್ಯಪ್: ಟಿಕ್‌ಟಾಕ್, ಲೈಕಿ, ಸಮೋಸ, ಕ್ವಾಲಿ,...
* ಫೈಲ್ ಹಂಚಿಕೆ: ಶೇರ್‌ಇಟ್, ಎಕ್ಸೆಂಡರ್, ಝಪ್ಯಾ,...
* ವೆಬ್ ಬ್ರೌಸರ್ಸ್: ಯುಸಿ ಬ್ರೌಸರ್, ಯುಸಿ ಬ್ರೌಸರ್ ಮಿನಿ,...
* ವಿಡಿಯೊ / ಲೈವ್ ಸ್ಟ್ರೀಮಿಂಗ್: ಜೂಮ್, ಲೈವ್‌ಮಿ, ವಿಮೇಟ್, ಅಪ್‌ಲೈವ್,...
* ಬಹುಬಳಕೆ: ಕ್ಯಾಮ್‌ಸ್ಕ್ಯಾನರ್, ಬ್ಯೂಟಿ ಪ್ಲಸ್, ಟ್ರೂ ಕಾಲರ್,...
* ಗೇಮಿಂಗ್ ಆ್ಯಪ್: ಪಬ್‌ಜಿ, ಕ್ಲ್ಯಾಷ್ ಆಫ್ ಕಿಂಗ್ಸ್,...
* ಎ–ಕಾಮರ್ಸ್ ಆ್ಯಪ್: ಕ್ಲಬ್ ಫ್ಯಾಕ್ಟರಿ, ಅಲಿಎಕ್ಸ್‌ಪ್ರೆಸ್, ಚೈನಾಬ್ರ್ಯಾಂಡ್ಸ್,...
* ಡೇಟಿಂಗ್ ಆ್ಯಪ್: ಟಿಂಡರ್, ಒಕೆಕ್ಯುಪಿಡ್, ಬಡೊ, ಬಂಬಲ್, ಹಪನ್, ಕೌಚ್ ಸರ್ಫಿಂಗ್,...
* ನ್ಯೂಸ್ ಆ್ಯಪ್: ನ್ಯೂಸ್ ಡಾಗ್, ಡೈಲಿ ಹಂಟ್,...
* ಲೈಫ್ ಸ್ಟೈಲ್ ಆ್ಯಪ್: ಪಾಪ್‌ಕ್ಸೊ
* ಮ್ಯೂಸಿಕ್ ಆ್ಯಪ್: ಹಂಗಾಮಾ, ಸಾಂಗ್ಸ್.ಪಿಕೆ
* ಬ್ಲಾಗಿಂಗ್/ಮೈಕ್ರೊ ಬ್ಲಾಗಿಂಗ್: ಟಂಬ್ಲರ್, ರೆಡಿಟ್
* ಆ್ಯಂಟಿ ವೈರಸ್: 360 ಸೆಕ್ಯುರಿಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.