ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರೆಡ್ಸ್‌ ನಂತರ ಚಾಟ್‌ಬಾಟ್‌ ಕ್ಷೇತ್ರಕ್ಕೆ ಮೆಟಾ ‍‍‍ಪದಾರ್ಪಣೆ: 'ಲಾಮಾ 2' ಲೋಕಾರ್ಪಣೆ

Published 19 ಜುಲೈ 2023, 6:56 IST
Last Updated 19 ಜುಲೈ 2023, 6:56 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಒಪನ್‌ಎಐನ ಚಾಟ್‌ಜಿಪಿಟಿ, ಗೂಗಲ್‌ ಬಾರ್ಡ್‌, ಮೈಕ್ರೊಸಾಫ್ಟ್‌ ಬಿಂಗ್‌ನಂತೆ ಚಾಟ್‌ಬಾಟ್‌ ಕ್ಷೇತ್ರಕ್ಕೆ ಫೇಸ್‌ಬುಕ್‌ ಮೆಟಾ ಪದಾರ್ಪಣೆ ಮಾಡಿದೆ. ಕೃತಕಬುದ್ಧಿಮತ್ತೆ ಬಳಸಿ ಬಳಕೆದಾರರ ಬೇಡಿಕೆಗಳಿಗೆ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡಬಲ್ಲ ‘ಲಾಮಾ 2’ ಅನ್ನು ಪರಿಚಯಿಸುತ್ತಿರುವುದಾಗಿ ಮೆಟಾ ಹೇಳಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ನೀಡುವ ಬದಲು, ಭಾಷಾ ಕಲಿಕೆಯ ಸಾಧನ (Llama 2) ವನ್ನು ಅಭಿವೃದ್ಧಿಪಡಿಸಿ ಅದನ್ನು ತನ್ನ ಸಂಶೋಧನೆಯ ಭಾಗವಾಗಿ ಪರಿಚಯಿಸಿದೆ. ಇದೊಂದು ಓಪನ್‌ಸೋರ್ಸ್‌ ಆಗಿದ್ದು, ಎಲ್ಲರಿಗೂ ಲಭ್ಯವಾಗುವಂತಿದೆ. ಜತೆಗೆ ಇದನ್ನು ಬದಲಿಸಲೂ ಅವಕಾಶವಿದೆ.

‘ಓಪನ್‌ ಸೋರ್ಸ್‌ ಬಳಸಿರುವುದರಿಂದ ನಾವೀನ್ಯತೆಗೆ ಹೆಚ್ಚು ಅವಕಾಶ ನೀಡಿದಂತಾಗಿದೆ. ಸಾಕಷ್ಟು ಪ್ರತಿಭಾವಂತ ಡೆವಲಪರ್‌ಗಳು ಹೊಸ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲು ಸಾಧ್ಯವಿದೆ. ಜತೆಗೆ ಹೆಚ್ಚು ಜನ ಬಳಸುವುದರಿಂದ ಸುರಕ್ಷತೆಯೂ ಉತ್ತಮವಾಗಿರಲಿದೆ. ಸರಿಯಾದ ಮಾಹಿತಿ ಸಿಗುವಂತೆ ಮಾಡುವಲ್ಲೂ ಈ ತಂತ್ರ ನೆರವಾಗಲಿದೆ’ ಎಂದು ಮೆಟಾದ ಸಿಇಒ ಮಾರ್ಕ್‌ ಝುಕೆರ್‌ಬರ್ಗ್‌ ತಿಳಿಸಿದ್ದಾರೆ.

ಮೆಟಾದ ಈ ಮಾದರಿಗೆ ‘ಲಾಮಾ 2‘ ಎಂದು ಕರೆಯಲಾಗಿದೆ. ವಿಂಡೋಸ್ ತಯಾರಿಕಾ ಸಂಸ್ಥೆ ಮೈಕ್ರೊಸಾಫ್ಟ್‌ ಜತೆಗಿನ ಒಡಂಬಡಿಕೆಯ ಭಾಗವಾಗಿ ಇದು ಮೈಕ್ರೊಸಾಫ್ಟ್‌ನ ಅಜೂರ್‌ ಮೂಲಕ ಡೌನ್‌ಲೋಡ್ ಮಾಡಬಹುದು. ಕೃತಕ ಬುದ್ಧಿಮತ್ತೆ ಉತ್ಪನ್ನಗಳ ಕ್ಷೇತ್ರದಲ್ಲಿ ಮೈಕ್ರೊಸಾಫ್ಟ್‌ ಕಂಪನಿಯು ಓಪನ್‌ಎಐ ಜತೆಗೂ ಪಾಲುದಾರಿಕೆ ಹೊಂದಿದೆ. 

ಮೈಕ್ರೊಸಾಫ್ಟ್‌ ತನ್ನ ಕೃತಕ ಬುದ್ಧಿಮತ್ತೆಯ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ‘ಮೈಕ್ರೊಸಾಫ್ಟ್‌ 365‘ ಅನ್ನು ಪ್ರತಿ ಬಳಕೆದಾರರಿಗೆ ಪ್ರತಿ ತಿಂಗಳಿಗೆ 30 ಅಮೆರಿಕನ್ ಡಾಲರ್‌ನಂತೆ ಬೆಲೆ ನಿಗದಿಪಡಿಸಿದೆ. ವ್ಯಾವಹಾರ ಕ್ಷೇತ್ರದಲ್ಲಿರುವ ಬಳಕೆದಾರರಿಗೆ ಇದು ಹೆಚ್ಚಿನ ಹೊರೆಯಾಗಿದೆ. ಆದರೆ ಕಂಪನಿಯ ಈ ಕ್ರಮದಿಂದ ಸಾಕಷ್ಟು ಆದಾಯ ಹರಿದುಬರುತ್ತಿದೆ. ಇದರ ಪರಿಣಾಮ ಮೈಕ್ರೊಸಾಫ್ಟ್‌ನ ಷೇರುಗಳ ಬೆಲೆ ಮಂಗಳವಾರ ಗಗನಮುಖಿಯಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT