ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರ್ತು ಡೇಟಾ ಸಾಲ ಪ್ಯಾಕ್ ಬಿಡುಗಡೆ ಮಾಡಿದ ರಿಲಯನ್ಸ್: ಬಳಕೆ ಹೇಗೆ?

ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್, ಜಿಯೋ ಬಳಕೆದಾರರಿಗೆ ತುರ್ತು ಬಳಕೆಗೆ ಅನುಕೂಲವಾಗುವಂತೆ 1GB ಡೇಟಾ ಸಾಲ ಪ್ಯಾಕ್ ಬಿಡುಗಡೆ ಮಾಡಿದೆ.

ಅಗತ್ಯ ಸಂದರ್ಭದಲ್ಲಿ ಡೇಟಾ ಕೊರತೆಯಾಗಿದ್ದರೆ, ಗ್ರಾಹಕರು ಈ ಪ್ರಯೋಜನ ಪಡೆಯಬಹುದಾಗಿದೆ.

ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ಈ ಸೌಲಭ್ಯವಿದ್ದು, ಐದು ಬಾರಿ ತಲಾ 1GB ಡೇಟಾ ಸಾಲ ಪ್ಯಾಕ್ ಪಡೆಯಬಹುದು. ಪ್ರತಿ 1GB ಡೇಟಾ ಪ್ಯಾಕ್ ದರ ₹11 ಆಗಿರುತ್ತದೆ.

ಜಿಯೋ ಡೇಟಾ ಸಾಲ ಪಡೆಯುವುದು ಹೇಗೆ?

ಬಳಕೆದಾರರು, ಮೊದಲು ಮೈಜಿಯೋ ಆ್ಯಪ್ ತೆರೆಯಬೇಕು. ನಂತರ ಮೆನು ಕ್ಲಿಕ್ ಮಾಡಿ.

ಅದರಲ್ಲಿ, ಮೊಬೈಲ್ ಸರ್ವಿಸಸ್ ಕೆಳಗಡೆ ‘ಎಮರ್ಜೆನ್ಸಿ ಡೇಟಾ ಲೋನ್’ ಆಯ್ಕೆ ತೆರೆದು, ಪ್ರೊಸೀಡ್ ಕೊಡಿ.

‘ಗೆಟ್ ಎಮರ್ಜೆನ್ಸಿ ಡೇಟಾ’ ಆಯ್ಕೆ ಮಾಡಿ.

ನಂತರ, ‘ಆಕ್ಟಿವೇಟ್ ನೌ’ ಕೊಡಿ.

ಈಗ ನಿಮ್ಮ ಖಾತೆಗೆ 1GB ಡೇಟಾ ಲೋನ್ ಪ್ಯಾಕ್ ಸೇರ್ಪಡೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT