ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಎಂಜಿನಿಯರ್‌ಗಳ ಸಬಲೀಕರಣಕ್ಕೆ ಟ್ಯಾಲೆಂಟ್ ಸ್ಪ್ರಿಂಟ್ ವಿಶೇಷ ಕಾರ್ಯಕ್ರಮ

Last Updated 3 ಮಾರ್ಚ್ 2021, 13:08 IST
ಅಕ್ಷರ ಗಾತ್ರ

ಎಜು ಟೆಕ್ ವೇದಿಕೆ ಟ್ಯಾಲೆಂಟ್ ಸ್ಪ್ರಿಂಟ್ ಎನ್‍ಎಸ್‍ಇ ಗ್ರೂಪ್ ಕಂಪನಿ, ಗೂಗಲ್‍ನ ಬೆಂಬಲದೊಂದಿಗೆ ಮುಂಚೂಣಿ ಮಹಿಳಾ ಎಂಜಿನಿಯರ್‌ಗಳ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ಘೋಷಿಸಿದೆ. ಟ್ಯಾಲೆಂಟ್ ಸ್ಪ್ರಿಂಟ್‍ನ ಡಬ್ಲ್ಯುಇ ಕಾರ್ಯಕ್ರವ ಟೆಕ್ ಉದ್ಯಮದಲ್ಲಿ ಕಂಡುಬರುವ ಲಿಂಗ ಅಸಮಾನತೆಯನ್ನು ಪರಿಹರಿಸಲು 2019ರಲ್ಲಿ ಆರಂಭವಾಗಿದೆ.

ಹಿಂದಿನ ಕಾರ್ಯಕ್ರಮಗಳಿಗೆ ಉದ್ಯಮ ಹೆಚ್ಚು ಬೆಂಬಲ ನೀಡಿರುವುದರಿಂದ ಈ ಬಾರಿ 500 ಸಹಭಾಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದಾದ್ಯಂತ ಪ್ರಥಮ ವರ್ಷದ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೇ 2021ರಿಂದ ಪ್ರಾರಂಭವಾಗಲಿದೆ.

ಮಹಿಳೆಯರು ಇಂದು ಜಾಗತಿಕ ತಂತ್ರಜ್ಞಾನದ ಉದ್ಯೋಗಿಗಳ ಪೈಕಿ ಕೇವಲ ಶೇ.26ರಷ್ಟನ್ನು ಮಾತ್ರ ಪ್ರತಿನಿಧಿಸುತ್ತಿದ್ದಾರೆ. ಟ್ಯಾಲೆಂಟ್‍ಸ್ಪ್ರಿಂಟ್‍ನ ಡಬ್ಲ್ಯುಇ ಕಾರ್ಯಕ್ರಮ ಈ ಲಿಂಗ ಅಸಮತೋಲನವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದು, ಭಾರತದಾದ್ಯಂತ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಪೂರೈಸಲು ವೈವಿಧ್ಯಮಯ ಶೈಕ್ಷಣಿಕ ನಿರ್ದಿಷ್ಟತೆ ಮತ್ತು ಸಾಮಾಜಿಕ-ಆರ್ಥಿಕ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಆಯ್ಕೆ, ತರಬೇತಿ ಮತ್ತು ಪೋಷಿಸುವ ಮೂಲಕ ಅಸಮಾನತೆ ನಿವಾರಣೆಗೆ ಶ್ರಮಿಸುತ್ತಿದೆ.

ಮೊದಲ ಎರಡು ಆವೃತ್ತಿಗೆ 27,000 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 220 ಸ್ಪರ್ಧಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ, ಗೂಗಲ್, ಅಮೆಜಾನ್, ಫ್ಲಿಪ್‍ಕಾರ್ಟ್, ಮೈಕ್ರೋಸಾಫ್ಟ್, ಗೋಲ್ಡ್ಮನ್ ಸ್ಯಾಚ್ಸ್, ಅಕ್ಸೆಂಚರ್, ಅಡೋಬ್, ಕ್ಯಾಪ್‍ಜೆಮಿನಿ, ಒರಾಕಲ್, ಗೊಜೆಕ್, ಮ್ಯಾಥ್‍ವರ್ಕ್ಸ್ ಮತ್ತು ಇತರ 50ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರತಿಷ್ಠಿತ ಇಂಟರ್ನ್‌ಶಿಪ್ ಅಥವಾ ಉದ್ಯೋಗ ಕೊಡುಗೆಗಳನ್ನು ಪ್ರವೇಶ ಮಟ್ಟದ ಎಂಜಿನಿಯರ್‌ಗಳಿಗೆ ಮಾರುಕಟ್ಟೆ ಸರಾಸರಿಗಿಂತ ಶೇ.150ರಷ್ಟನ್ನು ನೀಡಲು ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT