ಸೋಮವಾರ, ಆಗಸ್ಟ್ 8, 2022
23 °C

Yoga Day | ವಿಶ್ವ ಯೋಗ ದಿನ: ಇಲ್ಲಿವೆ ಟಾಪ್ ಫಿಟ್ನೆಸ್ ಆ್ಯಪ್‌ಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ಜಗತ್ತಿನಾದ್ಯಂತ ಜೂನ್ 21ರಂದು ‘ವಿಶ್ವ ಯೋಗ ದಿನ‘ವನ್ನು ಆಚರಿಸಲಾಗುತ್ತದೆ.

ಯೋಗದ ಮಹತ್ವ ಮತ್ತು ಅದರ ವಿಶೇಷತೆಯನ್ನು ಜಗತ್ತಿಗೆ ಸಾರುವ ಸಲುವಾಗಿ, ಪ್ರತಿ ವರ್ಷ ಯೋಗ ದಿನ ಆಚರಿಸಲಾಗುತ್ತದೆ.

ಈ ಬಾರಿ ಜೂನ್ 21, ಮಂಗಳವಾರ ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ.

ಯೋಗದ ಮಹತ್ವ ಸಾರುವ ವಿವಿಧ ಆ್ಯಪ್, ವಿಡಿಯೊ ಮತ್ತು ಕಾರ್ಯಕ್ರಮಗಳು ಇಂದು ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಮಾನವನ ದೈಹಿಕ ಮತ್ತು ಮಾನಸಿಕ ಕ್ಷಮತೆ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿಯಾಗಿದೆ.

ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿರುವ ಟಾಪ್ ಯೋಗ ಆ್ಯಪ್‌ಗಳ ವಿವರ ಇಲ್ಲಿದೆ. ಇವುಗಳನ್ನು ಐಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಪ್ರಯೋಗ
Prayoga ಹೆಸರಿನ ಯೋಗ ಆ್ಯಪ್ ಅನ್ನು ಬೆಂಗಳೂರಿನ ಪರ್ಜನ್ಯ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಡೈಲಿ ಯೋಗ
Daily Yoga: Fitness+Meditation ಅಪ್ಲಿಕೇಶನ್‌ನಲ್ಲಿ ವಿವಿಧ ರೀತಿಯ ಯೋಗ, ಅದರ ಪ್ರಯೋಜನ ಕುರಿತು ವಿವರಿಸಲಾಗಿದೆ.

ವೈಸಾ
Wysa ಎನ್ನುವುದು ವಿಶೇಷವಾಗಿ, ಮಾನಸಿಕ ಆರೋಗ್ಯ ವೃದ್ಧಿಸುವ ವಿವಿಧ ಯೋಗ ಥೆರಪಿಗಳನ್ನು ಹೊಂದಿದೆ.

ಆಸನ ರೆಬೆಲ್
Asana Rebel: Get in Shape ಎನ್ನುವ ಆ್ಯಪ್, ಯೋಗದ ಮೂಲಕ ತೂಕ ಇಳಿಸಿಕೊಳ್ಳುವುದು, ಉತ್ತಮ ದೇಹಾರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಕಾರಿ.

ಅರ್ಬನ್
Urban : Sleep & Meditation ಈ ಆ್ಯಪ್ ಮೂಲಕ, ಮಾನಸಿಕ, ದೈಹಿಕ ಆರೋಗ್ಯ ಕ್ಷಮತೆಗೆ ಪೂರಕವಾದ ವಿವಿಧ ಯೋಗ ಭಂಗಿ, ತಜ್ಞರ ಸಲಹೆ, ಉತ್ತಮ ನಿದ್ರೆಗೆ ಯೋಗ ಹೀಗೆ ವಿವಿಧ ವಿಶೇಷತೆಗಳನ್ನು ಅಳವಡಿಸಿಕೊಂಡಿದೆ.

ಕಾಮ್
Calm ಹೆಸರಿನ ಆ್ಯಪ್, ಮನಸ್ಸನ್ನು ಶಾಂತವಾಗಿರಿಸಿ, ಉತ್ತಮ ನಿದ್ರೆ ಪಡೆಯಲು ಮತ್ತು ಮೂಡ್ ಅನ್ನು ಚೆನ್ನಾಗಿರಿಸಲು ಸಹಾಯ ಮಾಡುತ್ತದೆ. ಇದರಿಂದ, ಮಾನಸಿಕ ಒತ್ತಡ, ಖಿನ್ನತೆ ನಿವಾರಣೆಯಾಗುತ್ತದೆ.

ಯೋಗ–ಗೊ
Yoga-Go ಆ್ಯಪ್‌ನಲ್ಲಿ ದೇಹದ ತೂಕ ಇಳಿಕೆ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವ ವಿವಿಧ ಆಯ್ಕೆಗಳನ್ನು ಒದಗಿಸಲಾಗಿದೆ. ಸಮತೋಲಿತ ಆಹಾರ, ಜೀವನಕ್ರಮದ ಕುರಿತು ಇದರಲ್ಲಿ ತಜ್ಞರ ಸಲಹೆ ಲಭ್ಯ.

ಔರಾ
Aura ಆ್ಯಪ್ ಮೂಲಕ ಬಳಕೆದಾರರು, ಮೂರು ನಿಮಿಷದ ಧ್ಯಾನ, ಮನಸ್ಸಿನ ಒತ್ತಡ ನಿರ್ವಹಣೆಗೆ ಸಂಬಂಧಿಸಿದ ಯೋಗ ಮಾಡುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು.

ಎಂಡೆಲ್
Endel ಆ್ಯಪ್ ಅನ್ನು, ಮನಸ್ಸು ಹಾಗೂ ದೇಹ ಎರಡನ್ನೂ ಸಮತೋಲಿತವಾಗಿ ಇರಿಸಿಕೊಳ್ಳಬಯಸುವವರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಯೋಗದ ಮೂಲಕ ಹೇಗೆ ಒತ್ತಡ ನಿವಾರಿಸುವುದು ಮತ್ತು ಸುಖ ಜೀವನ ನಡೆಸುವುದನ್ನು ಎನ್ನುವುದನ್ನು ಕಲಿಯಬಹುದು.

ಮೋಟಿವೇಟ್
Motivate ಆ್ಯಪ್, ಮನಸ್ಸನ್ನು ಕೇಂದ್ರೀಕರಿಸಿ, ಒಂದು ಸ್ಪೂರ್ತಿದಾಯಕ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ. ವಿಡಿಯೊ ಸರಣಿಯ ಪ್ರೇರಣೆ ಪಡೆದುಕೊಂಡು ಮಾನಸಿಕ ನೆಮ್ಮದಿ ಪಡೆಯಬಹುದು. ಒತ್ತಡ ರಹಿತ ಜೀವನಕ್ಕೆ ಸಹಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು