ಗುರುವಾರ , ಏಪ್ರಿಲ್ 15, 2021
21 °C

ಇಂಗ್ಲಿಷ್ ಗ್ರಾಮರ್ ಸರಿಪಡಿಸಿಕೊಳ್ಳಿ

ರಶ್ಮಿ. ಕೆ Updated:

ಅಕ್ಷರ ಗಾತ್ರ : | |

ಇಂಗ್ಲಿಷ್ ಗೊತ್ತು ಆದರೆ ಗ್ರಾಮರ್ ಸಮಸ್ಯೆ. ಎಲ್ಲಿ ಯಾವ ಪದವನ್ನು ಹೇಗೆ ಬಳಸಬೇಕೆಂಬ ಗೊಂದಲ ಬೇರೆ. ನಾವು ಬರೆದ ಇಂಗ್ಲಿಷ್ ಬರಹಗಳಲ್ಲಿ ಗ್ರಾಮರ್ ಸರಿ ಇದೆಯೇ? ಅದನ್ನು ಸರಿಪಡಿಸುವುದು ಹೇಗೆ? ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರ grammarly.

grammarly, Free Writing assistant ಆಗಿದ್ದು ನಿಮ್ಮ ಇಂಗ್ಲಿಷ್ ಬರಹಗಳಲ್ಲಿರುವ ತಪ್ಪಾದ ಗ್ರಾಮರ್/ಪದಗಳನ್ನು ಪತ್ತೆ ಮಾಡಿ ಅದನ್ನು ಸರಿಪಡಿಸುವ ಮೂಲಕ ಇಂಗ್ಲಿಷ್ ಬರವಣಿಗೆಗೆ ಸಹಾಯ ಮಾಡುತ್ತದೆ.

ಬಳಸುವುದು ಹೇಗೆ?

ಗೂಗಲ್‌ನಲ್ಲಿ grammarly ಎಂದು ಸರ್ಚ್ ಮಾಡಿ, ಇಲ್ಲವೇ https://www.grammarly.com/ ಕ್ಲಿಕ್ ಮಾಡಿ.
grammarly ವೆಬ್ ಪುಟ ತೆರೆದುಕೊಂಡಾದ ಅಲ್ಲಿ Add to Chrome ಎಂದಿರುತ್ತದೆ. ನೀವು ಬಳಸುವ ಕ್ರೋಮ್/ ಸಫಾರಿ/ಫೈರ್‌ಫಾಕ್ಸ್ ಬ್ರೌಸರ್‌ಗೆ extension ಆಗಿ ಇದನ್ನು ಸೇರಿಸಬಹುದು. 

ನಿಮ್ಮ ಇಮೇಲ್ ಐಡಿ ನಮೂದಿಸಿ. ಫೇಸ್‌ಬುಕ್ ಅಥವಾ ಗೂಗಲ್ ಐಡಿ ಮೂಲಕವೂ ಸೈನ್ ಅಪ್ ಆಗಬಹುದು.
ಸೈನ್ ಅಪ್ ಆದ ನಂತರ ಬ್ರೌಸರ್ extension ಸೇರಿಸಿಕೊಳ್ಳಿ

ಗ್ರಾಮರ್ ಚೆಕ್ ಮಾಡುವುದು ಹೇಗೆ?

https://app.grammarly.com/ ಲಾಗಿನ್ ಆದ ಕೂಡಲೇ ಅಲ್ಲಿ New ಕ್ಲಿಕ್ ಮಾಡಿ. ಅಲ್ಲಿ ನೀವು ಬರೆದ ಬರಹವನ್ನು ಪೇಸ್ಟ್ ಮಾಡಬಹುದು ಇಲ್ಲವೇ ನೇರವಾಗಿ ಟೈಪ್ ಮಾಡಬಹುದು. ನೀವು ಟೈಪ್ ಮಾಡುತ್ತಿದ್ದಂತೆ ನಿಮ್ಮ ಬರಹದಲ್ಲಿ ಎಷ್ಟು ತಪ್ಪುಗಳಿವೆ ಎಂಬುದನ್ನು ಪತ್ತೆ ಹಚ್ಚಿ ಸರಿಯಾದ ಪದವನ್ನು ಸೇರಿಸುವಂತೆ grammarly ಸಲಹೆ ನೀಡುತ್ತದೆ.

ನಿಮ್ಮ ಬರಹವನ್ನು ಕಾಪಿ ಪೇಸ್ಟ್ ಮಾಡುವ/ ಟೈಪಿಸುವ ಬದಲು ಡಾಕ್ಯುಮೆಂಟ್ ಫೈಲ್ ಅಪ್‌ಲೋಡ್ ಮಾಡುವ ಮೂಲಕ ಅದರ ಗ್ರಾಮರ್ ಚೆಕ್ ಮಾಡಿ ಸರಿ ಪಡಿಸಬಹುದು.

ಅದಕ್ಕಾಗಿ New ಕೆಳಗಡೆ upload ಕ್ಲಿಕ್ ಮಾಡಿ ನಿಮ್ಮ ಕಂಪ್ಯೂಟರ್‌ನಲ್ಲಿರುವ ಫೈಲ್ ಅಪ್‌ಲೋಡ್ ಮಾಡಿ ಅಥವಾ ಹೊಸ ಡಾಕ್ಯುಮೆಂಟ್ ಟೈಪಿಸುವ ವಿಂಡೊದ ಬಲಭಾಗದಲ್ಲಿರುವ ಅಪ್‌ಲೋಡ್ ಆಯ್ಕೆ ಬಳಸಿ.

ಗ್ರಾಮರ್ ಸರಿಪಡಿಸಿದ ನಂತರ ಬರಹವನ್ನು ಡೌನ್‌ಲೋಡ್ ಮಾಡಬಹುದು. ಅಗತ್ಯವಿದ್ದರೆ ಪ್ರಿಂಟ್ ಕೂಡಾ ತೆಗೆಯಬಹುದು.

ಮೊಬೈಲ್ ಆ್ಯಪ್

Grammarly ಮೊಬೈಲ್ ಆ್ಯಪ್ iOS ಮತ್ತು Android ನಲ್ಲಿ ಲಭ್ಯವಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ Grammarly ಡೌನ್‌ಲೋಡ್ ಮಾಡಿದ ನಂತರ ಆ್ಯಪ್ open ಮಾಡಿ.

Switch Input Methods ಕ್ಲಿಕ್ ಮಾಡಿದರೆ ಮೊಬೈಲ್‌ನಲ್ಲಿ ನೀವು ಬಳಸುತ್ತಿರುವ key board ಲಿಸ್ಟ್ ತೆರೆದುಕೊಳ್ಳುತ್ತದೆ. ಅದರಲ್ಲಿ Grammarly ಆಯ್ಕೆ ಮಾಡಿ

ನಿಮ್ಮ ಕೀಬೋರ್ಡ್ Grammarly ಆಗಿರುವುದರಿಂದ ನೀವು ಇಂಗ್ಲಿಷ್‌ನಲ್ಲಿ ಸಂದೇಶ ಅಥವಾ ಬರಹ ಬರೆದಾಗ ಅದರಲ್ಲಿರುವ ಗ್ರಾಮರ್, ವಿರಾಮ ಚಿಹ್ನೆ , ಸ್ಪೆಲ್ಲಿಂಗ್ ಎಲ್ಲವನ್ನೂ ಇದು ಸರಿ ಪಡಿಸುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.