ಬುಧವಾರ, ಫೆಬ್ರವರಿ 1, 2023
26 °C
ರಿಲಯನ್ಸ್ ಜಿಯೊ ನೆಟ್‌ವರ್ಕ್ ಸಮಸ್ಯೆಯಾಗಿದೆ ಎಂದು ಬಳಕೆದಾರರ ದೂರು

Reliance Jio: ದೇಶದ ಪ್ರಮುಖ ನಗರಗಳಲ್ಲಿ ಸೇವೆ ವ್ಯತ್ಯಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ರಿಲಯನ್ಸ್ ಜಿಯೊ ನೆಟ್‌ವರ್ಕ್ ಸಮಸ್ಯೆ ಉಂಟಾಗಿ, ಬಳಕೆದಾರರು ತೊಂದರೆ ಎದುರಿಸಿದ್ದಾರೆ.

ರಿಲಯನ್ಸ್ ಜಿಯೊ ಚಂದಾದಾರರು ಕರೆ ಮಾಡಲು ಮತ್ತು ಎಸ್‌ಎಂಎಸ್ ಕಳುಹಿಸಲು ಸಾಧ್ಯವಾಗಿಲ್ಲ ಎಂದು ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದಾರೆ.

ಈ ಕುರಿತು ಡೌನ್‌ಡಿಟೆಕ್ಟರ್ ಕೂಡ ವರದಿ ಮಾಡಿದ್ದು, ದೇಶದಲ್ಲಿ ಬೆಳಗ್ಗೆ 8ರಿಂದ 9ರವರೆಗೆ ರಿಲಯನ್ಸ್ ಜಿಯೊ ನೆಟ್‌ವರ್ಕ್ ಸಮಸ್ಯೆ ಎದುರಾಗಿತ್ತು. ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ತೊಂದರೆ ಉಂಟಾಗಿ, ಬಳಕೆದಾರರು ಪರದಾಡಿದರು ಎಂದು ಅದು ತಿಳಿಸಿದೆ.

ಸಮಸ್ಯೆ ಎದುರಾಗಿರುವುದನ್ನು ಬಳಕೆದಾರರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಕರೆ ಮಾಡಲು ಮತ್ತು ಎಸ್‌ಎಂಎಸ್ ಸೇವೆಯಲ್ಲಿ ಸಮಸ್ಯೆ ಎದುರಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು