ಗುರುವಾರ , ಏಪ್ರಿಲ್ 9, 2020
19 °C

ವಿಪ್ರೋ ಸಿಇಒ ಸ್ಥಾನದಿಂದ ನಿರ್ಗಮಿಸಲು ಅಬಿದ್‌ ಅಲಿ ನೀಮುಚ್‌ವಾಲಾ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಪ್ರೋ ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಬಿದ್‌ ಅಲಿ ನೀಮುಚ್‌ವಾಲಾ ಅವರು ಅಧಿಕಾರದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಶುಕ್ರವಾರ ಕಂಪನಿಯು ತಿಳಿಸಿದೆ. 

ವಿಪ್ರೋ ಸಂಸ್ಥೆಗೆ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರ ಆಯ್ಕೆ ಆಗುವವರೆಗೆ 52 ವರ್ಷದ ಅಬಿದ್‌ ಅಲಿ ಅವರು ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. 

‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಬಿದ್‌ ಅಲಿ ನೀಮುಚ್‌ವಾಲಾ ಅವರು ಕೌಟುಂಬಿಕ ಕಾರಣಕ್ಕಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ’ ಎಂದು ವಿಪ್ರೋ ಸ್ಪಷ್ಟಪಡಿಸಿದೆ. 

‘ನೀಮುಚ್‌ವಾಲಾ ಅವರ ನಾಯಕತ್ವ ಮತ್ತು ಅವರು ವಿಪ್ರೊ ಸಂಸ್ಥೆಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಅವರು ಜಾಗತಿಕವಾಗಿ ನಮ್ಮ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಿದರು’ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜೀ ಹೇಳಿದ್ದಾರೆ. 

ಬಜೆಟ್ ಮಾಹಿತಿಗೆ: www.prajavani.net/budget-2020

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು