ಗುರುವಾರ , ನವೆಂಬರ್ 26, 2020
20 °C

ಶೀಘ್ರದಲ್ಲಿಯೇ ವಾಟ್ಸ್‌ಆ್ಯಪ್‌ನಲ್ಲಿಯೂ ಶಾಪಿಂಗ್ ಮಾಡಬಹುದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿಯೂ ಶಾಪಿಂಗ್ ಮಾಡುವ ಫೀಚರ್ ಶೀಘ್ರದಲ್ಲೇ ಲಭ್ಯವಾಗಲಿದೆ. ವಾಟ್ಸ್‌ಆ್ಯಪ್ ಬ್ಯುಸಿನೆಸ್ ಅಕೌಂಟ್ ಹೊಂದಿದ್ದರೆ ಚಾಟ್ ಸ್ಕ್ರೀನ್‌ನಿಂದ ಕೆಟಲಾಗ್‌ಗಳನ್ನು ಗ್ರಾಹಕರಿಗೆ ನೀಡುವ ಮೂಲಕ ನೇರವಾಗಿ ಉತ್ಪನ್ನಗಳನ್ನು ಮಾರಬಹುದು. ಈ  ಮೂಲಕ ಲಭ್ಯವಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಭವಾಗಿ ನೋಡಲು ಮತ್ತು ಚಾಟ್ ಮೂಲಕ ನೇರವಾಗಿ ಖರೀದಿ ಮಾಡಲು ಸಾಧ್ಯವಾಗುವಂತೆ ಮಾಡಲಾಗುವುದು ಎಂದು ವಾಟ್ಸ್‌ಆ್ಯಪ್  ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ  ಹೇಳಿದೆ.

ಗ್ರಾಹಕರು ತಾವು ಖರೀದಿಸಲು ಬಯಸುವ ಉತ್ಪನ್ನಗಳನ್ನು ಶಾಪಿಂಗ್ ಕಾರ್ಟ್‌ಗೆ ಸೇರಿಸಿ ಉತ್ಪನ್ನಗಳನ್ನು ಖರೀದಿಸಬಹುದು. 
ಈ ಫೀಚರ್‌ಗಳನ್ನು ಈಗಾಗಲೇ ಇರುವ ವಾಣಿಜ್ಯ ಮತ್ತು ಗ್ರಾಹಕ ಪರಿಹಾರಗಳೊಂದಿಗೆ ಸಂಯೋಜಿಸುವ ಮೂಲಕ  ವ್ಯವಹಾರಗಳನ್ನು ಮತ್ತಷ್ಟು ಸುಲಭಗೊಳಿಸಲು ನಾವು ಬಯಸುತ್ತೇವೆ. ಪ್ರಸ್ತುತ ಕಾಲಘಟ್ಟದಲ್ಲಿ ನಷ್ಟ ಅನುಭವಿಸುತ್ತಿರುವ ಹಲವಾರು ಸಣ್ಣ ಉದ್ಯಮಗಳಿಗೆ ಇದು ಸಹಾಯವಾಗಲಿದೆ ಎಂದು ಕಂಪನಿ ಹೇಳಿದೆ.

ಮುಂಬರುವ ತಿಂಗಳಲ್ಲಿ ಈ ಶಾಪಿಂಗ್ ಫೀಚರ್ ಲಭ್ಯವಾಗಲಿದೆ.

ವಾಟ್ಸ್‌ಆ್ಯಪ್‌ನಲ್ಲಿ  ಈ ಹೆಚ್ಚುವರಿ ಅನುಭವವು ಪ್ರಪಂಚದಾದ್ಯಂತ ಮತ್ತು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಅನೇಕ ಜನರ ಮತ್ತು ವ್ಯಾಪಾರದ ನಿಜವಾದ ಅಗತ್ಯವನ್ನು ಪೂರೈಸುತ್ತವೆ ಎಂಬುದು ನಮ್ಮ ನಂಬಿಕೆ. ಮುಂಬರುವ ಕಾರ್ಯಗಳ ಬಗ್ಗೆ  ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಮುಂದಿನ ತಿಂಗಳುಗಳಲ್ಲಿ ನಾವು ಈ ಸೇವೆಗಳನ್ನು ಒದಗಿಸಲಿದ್ದೇವೆ ಎಂದು ವಾಟ್ಸ್‌ಆ್ಯಪ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು