ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

104 ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ಮಾಡಿದ್ದ ಚಿಕಾಗೊ ಅಜ್ಜಿ ನಿಧನ

ಅಮೆರಿಕದ ಚಿಕಾಗೊ ಮಹಿಳೆ‌ ಡೊರೊಥಿ ಹಾಫ್‌ನರ್‌
Published 11 ಅಕ್ಟೋಬರ್ 2023, 14:10 IST
Last Updated 11 ಅಕ್ಟೋಬರ್ 2023, 14:10 IST
ಅಕ್ಷರ ಗಾತ್ರ

ಚಿಕಾಗೊ: ಇತ್ತೀಚೆಗಷ್ಟೇ 104 ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ಗಿನ್ನೀಸ್ ವಿಶ್ವ ದಾಖಲೆ ಮಾಡಿ ಗಮನ ಸೆಳೆದಿದ್ದ ಅಮೆರಿಕದ ಚಿಕಾಗೊ ಮಹಿಳೆ‌ ಡೊರೊಥಿ ಹಾಫ್‌ನರ್‌ ನಿಧನರಾಗಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ರಾಯಿಟರ್ಸ್‌ X ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಚಿಕಾಗೊದಲ್ಲಿ ವಯೋಸಹಜವಾಗಿ ಮಲಗಿದ್ದಲ್ಲೇ ನಿಧನರಾಗಿದ್ದಾರೆ ಎಂದು ತಿಳಿಸಿದೆ.

ಡೊರೊಥಿ ಹಾಫ್‌ನರ್‌ ಎನ್ನುವ ವೃದ್ಧೆಯೊಬ್ಬರು 13,500 ಅಡಿ ಎತ್ತರದಿಂದ ವಿಮಾನದಿಂದ ಜಿಗಿದು ಸ್ಕೈಡೈವ್ ಮಾಡಿದ್ದರು. ಈ ಮೂಲಕ ಸ್ಕೈಡೈವ್ ಮಾಡಿದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಸ್ಕೈಡೈವ್ ಚಿಕಾಗೊ ಇನ್‌ಸ್ಟಾಗ್ರಾಮ್‌ ಪುಟ ಇದರ ವಿಡಿಯೊವನ್ನು ಹಂಚಿಕೊಂಡಿತ್ತು. ‘ಇದು ವಿನೋದಮಯವಾಗಿತ್ತು ಮತ್ತು ತುಂಬಾ ಸುಂದರವಾಗಿ ಕಾಣಿಸುತ್ತಿತ್ತು’ ಎಂದು ಡೊರೊಥಿ ಹಾಫ್‌ನರ್‌ ಸ್ಕೈಡೈವ್ ಬಳಿಕ ಖುಷಿ ಹಂಚಿಕೊಂಡಿದ್ದರು.

104 ವರ್ಷದ ಸ್ನೇಹಿತೆಗೆ ಸ್ಕೈಡೈವ್ ಮಾಡಲು ಸಹಾಯ ಮಾಡಿದ್ದು ಸಂತಸ ನೀಡಿದೆ. ಯಾವ ಕೆಲಸಕ್ಕೂ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಅದ್ಭುತ ಶಕ್ತಿ ಹೊಂದಿದ್ದರು’ ಎಂದು ಸ್ಕೈಡೈವ್ ಚಿಕಾಗೊ ಹೇಳಿದೆ.

ಡೊರೊಥಿ ಹಾಫ್‌ನರ್‌ ಅವರ ಸ್ಕೈಡೈವ್ ವಿಡಿಯೊ ಜಾಗತಿಕವಾಗಿ ಗಮನ ಸೆಳೆದಿತ್ತು. ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎನ್ನುವುದನ್ನು ಅವರು ತೋರಿಸಿದ್ದರು ಎಂದು ಅನೇಕರು ಕೊಂಡಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT