ಪ್ರತಿಯೊಬ್ಬರ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ವಿಶೇಷ ಕ್ಷಣಗಳಲ್ಲಿ ಮದುವೆ ಸಂಭ್ರಮವೂ ಒಂದು. ಅದೇ ರೀತಿ ಇಲ್ಲೊಬ್ಬರು ತಮ್ಮ ಮಗಳ ಮದುವೆಯು ಸ್ಮರಣೀಯವಾಗಿ ಉಳಿಯಬೇಕೆಂದು, ಸುಮಾರು 3 ಕೆ.ಜಿ. ಬೆಳ್ಳಿ ಬಳಸಿ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.

ಇತ್ತೀಚೀನ ದಿನಗಳಲ್ಲಿ ಮದುವೆ ತಯಾರಿಗಳು ಸಖತ್ ಟ್ರೆಂಡ್ ಸೃಷ್ಟಿಸಿವೆ. ಪ್ರಿ–ವೆಡ್ಡಿಂಗ್ ಫೋಟೊ ಶೂಟ್, ಐಷಾರಾಮಿ ಆಹ್ವಾನ ಪತ್ರಿಕೆ. ರಿಸೆಪ್ಷನ್ ಸೇರಿ ವಿವಾಹದ ಅನೇಕ ಕ್ಷಣಗಳು ಗಮನ ಸೆಳೆಯುತ್ತಿರುತ್ತವೆ.

ಇದೀಗ, ಸುಮಾರು ₹ 25 ಲಕ್ಷದ ಆಹ್ವಾನ ಪತ್ರಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿದೆ.
.ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!.ಪೌರತ್ವ ಪರೀಕ್ಷೆಗೆ ಯುಪಿ ಪೊಲೀಸರಿಂದ ಹೊಸ ತಂತ್ರ: ವಿಡಿಯೊ ವೈರಲ್.
ಹೌದು, ಜೈಪುರ ಮೂಲದ ಶಿವ್ ಜೌಹರಿ ಎಂಬುವವರು ಮಗಳ ಮದುವೆಗೆ ಆಹ್ವಾನಿಸಲು ಪ್ರತಿ ಪತ್ರಿಕೆಯನ್ನು ಸುಮಾರು 3 ಕೆ.ಜಿ. ಬೆಳ್ಳಿ ಬಳಸಿ ಮಾಡಿಸಿದ್ದಾರೆ. ಸುಮಾರು 8 ಇಂಚು ಉದ್ದ, 6.5 ಇಂಚು ಅಗಲ ಇರುವ ಬೆಳ್ಳಿ ಆಹ್ವಾನ ಪತ್ರಿಕೆಯು ಗಣಪತಿ, ಶಿವ–ಪಾರ್ವತಿ, ಲಕ್ಷ್ಮೀ, ಸರಸ್ವತಿ ಸೇರಿ ಅನೇಕ ದೇವರುಗಳ ಕೆತ್ತನೆಯ ಕಲಾಕೃತಿಯನ್ನು ಒಳಗೊಂಡಿದೆ. ಈ ಆಹ್ವಾನ ಪತ್ರಿಕೆ ಸುಮಾರು ₹ 25 ಲಕ್ಷ ವೆಚ್ಚದ್ದಾಗಿದೆ.

ದುಬಾರಿ ಆಹ್ವಾನ ಪತ್ರಿಕೆ ಬಗ್ಗೆ ಮಾತನಾಡಿದ ಶಿವ್ ಜೌಹರಿ ಅವರು, 'ಎಲ್ಲಾ ದೇವಾನು–ದೇವತೆಗಳ ಆಶೀರ್ವಾದ ಮಗಳ ಮೇಲೆ ಇರಲಿ ಎಂಬ ಉದ್ದೇಶದಿಂದ ಈ ಆಹ್ವಾನ ಪತ್ರಿಕೆಯನ್ನು ಮಾಡಿಸಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.