ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Independence Day 2023: ಭಾರತದ ಜವಳಿ ಪರಂಪರೆಯ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

Published 15 ಆಗಸ್ಟ್ 2023, 9:17 IST
Last Updated 15 ಆಗಸ್ಟ್ 2023, 9:17 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಜವಳಿ ಪರಂಪರೆಯನ್ನು ಸೂಚಿಸುವ ಡೂಡಲ್‌ ಮೂಲಕ ದೇಶದ 77ನೇ ಸ್ವಾತಂತ್ರ್ಯ ದಿನಕ್ಕೆ ಗೂಗಲ್‌ ಶುಭಾಶಯ ಕೋರಿದೆ. ಡಿಜಿಟಲ್ ರೂಪದಲ್ಲಿ ಹೆಣೆದುಕೊಂಡಿರುವ ವಸ್ತ್ರವನ್ನು ಚಿತ್ರಿಸುವ ವಿಶೇಷ ಡೂಡಲ್‌ ಅನ್ನು ಗೂಗಲ್‌ ಪ್ರದರ್ಶಿಸಿದೆ.

ದೆಹಲಿ ಮೂಲದ ಕಲಾವಿದೆ ನಮ್ರತಾ ಕುಮಾರ್ ಅವರು ಈ ಕಲಾಕೃತಿಯನ್ನು ಚಿತ್ರಿಸಿದ್ದಾರೆ. ಭಾರತವು ವಿವಿಧ ರೀತಿಯ ಜವಳಿ ಶ್ರೇಣಿಯಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ ಎನ್ನುವ ಅವರು, ವೈವಿಧ್ಯಮಯ ಬಟ್ಟೆಯ ಚಿತ್ರಗಳು ಭಾರತ ಕಥೆಯನ್ನು ಹೆಣೆದಂತಿದೆ. 

ಗುಜರಾತ್‌ನ ಕಚ್‌ನ ಕಸೂತಿ, ಒಡಿಶಾದ ಪಾಶ್ಮಿನಾ ಕನಿ ನೇಯ್ದ ಜವಳಿ, ಜಮ್ಮು ಮತ್ತು ಕಾಶ್ಮೀರದ ಕಾಸಾವು, ಕೇರಳದ ನೇಯ್ಗೆ ಸೇರಿದಂತೆ ಭಾರತದ ವಿವಿಧ ಪ್ರದೇಶಗಳ ವಸ್ತ್ರವಿನ್ಯಾಸವನ್ನು ಹೆಣೆದು ಅದರ ಮೇಲೆ GOOGLE ಎಂದು ಬರೆಯಲಾಗಿದೆ.

ಪ್ರಸ್ತುತ ಭಾರತದಲ್ಲಿ ಇರುವ ವೈವಿಧ್ಯಮಯ ಜವಳಿ ಕರಕುಶಲ ರೂಪಗಳನ್ನು ಸಂಶೋಧಿಸಿ ವಿಶೇಷ ಡೂಡಲ್‌ ರಚಿಸಲಾಗಿದೆ ಎಂದು ಗೂಗಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT