ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೋತಿ ಮರಿಯೊಂದು ಸಂಚಲನ ಸೃಷ್ಟಿಸಿತ್ತು. ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಪಂಚ್ ಎಂಬ ಹೆಸರಿನ ಕೋತಿಮರಿ ತಾಯಿ ಇಲ್ಲದೆ ಅನಾಥವಾಗಿತ್ತು. ಈ ವೇಳೆ ಬೇರೆ ಕೋತಿಗಳು ಅದನ್ನು ದೂರವಿಟ್ಟಾಗ, ಅದು ಗೊಂಬೆಯೊಂದನ್ನು ತಾಯಿ ಎಂದು ಸದಾ ಜೊತೆಗಿಟ್ಟುಕೊಂಡಿತ್ತು. ಸದ್ಯ, ಈ ಕೋತಿಮರಿ ಇಟ್ಟುಕೊಂಡಿದ್ದ ಗೊಂಬೆಯ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಾಗಿದೆ.

ನ್ಯೂಯಾರ್ಕ್ ಪೋಸ್ಟ್ನ ವರದಿ ಮಾಡಿರುವಂತೆ, ಆ ಕೋತಿಮರಿ ತನ್ನೊಂದಿಗೆ ಇಟ್ಟುಕೊಂಡಿದ ಗೊಂಬೆಯು ಐಕಿಯಾ ಸಂಸ್ಥೆಗೆ ಸೇರಿದ ‘ಜುಂಗೆಲ್ಸ್ಕಾಗ್ ಒರಾಂಗುಟನ್ ಸ್ಟಫ್ಡ್ ಟಾಯ್‘ ಆಗಿದೆ. ಈ ಗೊಂಬೆಯು ಕೋತಿಮರಿಯ ಜೊತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಟಾಯ್ನ ಬೇಡಿಕೆ ದುಪ್ಪಟ್ಟಾಗಿದೆ ಹಾಗೂ ಬೆಲೆ ಕೂಡ ಹೆಚ್ಚಾಗಿದೆ. ಸದ್ಯ ಇದರ ಬೆಲೆ ₹1817 ಆಗಿದೆ.

ತಾಯಿಯಿಂದ ದೂರವಾದ ಪಂಚ್ಗೆ ಸಾಂತ್ವನ ಮಾಡಲು ಮೃಗಾಲಯದ ಸಿಬ್ಬಂದಿ ಜುಂಗೆಲ್ಸ್ಕಾಗ್ ಒರಾಂಗುಟನ ಗೊಂಬೆ ಕೊಟ್ಟರು. ಪಂಚ್ ಅದರೊಂದಿಗೆ ಆಟವಾಡಿಕೊಂಡು ಬೆಳೆಯತೊಡಗಿತು. ಮೃದುವಾದ ಗೊಂಬೆಯನ್ನು ಅಪ್ಪಿಕೊಳ್ಳುವುದು, ಪಕ್ಕದಲ್ಲಿ ಮಲಗುವುದು ಮತ್ತು ಅದರೊಂದಿಗೆ ಆಟವಾಡುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು.

ಒಂದು ರೀತಿಯಲ್ಲಿ ಅನಾಥವಾಗಿದ್ದ ಕೋತಿ ಮರಿಯು ಗೊಂಬೆಯನ್ನೇ ತನ್ನ ತಾಯಿ ಎಂದುಕೊಂಡಿತ್ತು ಎಂದರೂ ತಪ್ಪಾಗಲಾರದು.

ಈ ಘಟನೆಯ ಬಳಿಕ ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರೆ ದೇಶಗಳ ಐಕಿಯಾ ಅಂಗಡಿಗಳು ಜುಂಗೆಲ್ಸ್ಕಾಗ್ ಒರಾಂಗುಟನ್ ಗೊಂಬೆಗಳ ಮಾರಾಟ ಹೆಚ್ಚಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಐಕಿಯಾ ಸಂಸ್ಥೆಯ ಜಪಾನ್ ಅಧ್ಯಕ್ಷರಾದ ಪೆಟ್ರಾ ಫೇರ್ ಅವರು ಪಂಚ್ಗೆ ಗೊಂಬೆ ಸಂಗಾತಿಯಾಗಿರುವುದನ್ನು ಕಂಡು ಮೃಗಾಲಯದ ಇತರೆ ಪ್ರಾಣಿಗಳಿಗೂ ಅದೇ ರೀತಿಯ ಗೊಂಬೆಯನ್ನು ನೀಡಿದ್ದಾರೆ. ಆನ್ಲೈನ್ ವೇದಿಕೆಗಳಲ್ಲೂ ಗೊಂಬೆಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.