ಮಂಗಳವಾರ, ಜನವರಿ 18, 2022
23 °C

ಸಂಗೀತಕ್ಕೆ ಗಡಿಯಿಲ್ಲ: ತಾಂಜಾನಿಯಾದ ಯುವಕನ ಹಾಡಿನ ವಿಡಿಯೊ ವೈರಲ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Kili Paul Instagram Post

ಬೆಂಗಳೂರು: ಟಿಕ್‌ಟಾಕ್ ಬಂದ ಬಳಿಕ ಹಲವು ಮಂದಿಯ ಪ್ರತಿಭೆಗಳು ಬೆಳಕಿಗೆ ಬಂದವು. ಕೆಲವರು ಟಿಕ್‌ಟಾಕ್ ದುರುಪಯೋಗಪಡಿಸಿಕೊಂಡರೆ ಮತ್ತೆ ಹಲವರು ಅದನ್ನು ಸದುಪಯೋಗಮಾಡಿಕೊಂಡಿದ್ದಾರೆ.

ತಾಂಜಾನಿಯಾ ಮೂಲದ ಯುವಕ ಕಿಲಿ ಪಾಲ್, ತನ್ನ ಸಹೋದರಿಯ ಜತೆಗೂಡಿ ಇಂತಹ ಹಲವು ಮ್ಯೂಸಿಕ್ ಮತ್ತು ಡ್ಯಾನ್ಸ್ ವಿಡಿಯೊಗಳನ್ನು ಟಿಕ್‌ಟಾಕ್ ಮೂಲಕ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಕಿಲಿ ಪಾಲ್, ತನ್ನ ಸಹೋದರಿಯ ಜತೆಗೆ 'ಶೇರ್‌ಶಾ' ಚಿತ್ರದ ಜನಪ್ರಿಯ ರಾತನ್ ಲಂಬಿಯಾನ್ ಹಾಡು ಹಾಡಿ ಅದಕ್ಕೆ ನೃತ್ಯ ಮಾಡಿದ್ದಾರೆ.

ಬಾಲಿವುಡ್ ಹಾಡಿನ ಮೇಲಿನ ಪ್ರೀತಿ ಮತ್ತು ಭಾಷೆ ತಿಳಿಯದಿದ್ದರೂ ಅಭಿಮಾನದಿಂದ ನೃತ್ಯ ಮಾಡಿದ ಕಿಲಿ ಪಾಲ್ ವಿಡಿಯೊ ಈಗ ವೈರಲ್ ಆಗಿದೆ.

ಜತೆಗೆ ಸಾಮಾಜಿಕ ತಾಣಗಳಲ್ಲೂ ಹಲವರು ಕಿಲಿ ಪಾಲ್ ವಿಡಿಯೊ ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು