ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಕ್ಕಿರಿದ ಬೀದಿಯಲ್ಲಿ ಜನರು ಮಾಸ್ಕ್ ಧರಿಸಲು ಪುಟ್ಟ ಬಾಲಕನ ಕರೆ; ವೈರಲ್ ವಿಡಿಯೊ

ಅಕ್ಷರ ಗಾತ್ರ

ಧರ್ಮಶಾಲಾದ ಪುಟ್ಟ ಹುಡುಗನೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹುಡುಗನ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಮಾಸ್ಕ್ ಇಲ್ಲದೆಯೇ ಬೀದಿಯಲ್ಲಿ ಓಡಾಡುತ್ತಿದ್ದ ಜನರನ್ನು ತಡೆದು ಮಾಸ್ಕ್ ಧರಿಸುವಂತೆ ಕೇಳಿಕೊಳ್ಳುತ್ತಿರುವ ದೃಶ್ಯವು ಸೆರೆಯಾಗಿದೆ.

ಕೆಲವು ದಿನಗಳ ಹಿಂದೆಷ್ಟೇ ಮನಾಲಿಯಲ್ಲಿ ಕಿಕ್ಕಿರಿದ ಬೀದಿಯಲ್ಲಿನ ಜನಜಂಗುಳಿಯ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದವು. ಕೋವಿಡ್-19 ಪ್ರಕರಣಗಳು ಕಮ್ಮಿಯಾಗುತ್ತಿರುವುದರಿಂದ ದೇಶದ ಹಲವಾರು ಭಾಗಗಳಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಮನಾಲಿ, ಶಿಮ್ಲಾ, ಕುಫ್ರಿ ಮತ್ತು ಮುಸ್ಸೂರಿಯಂತಹ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಕೋವಿಡ್-19 ನಿಯಮಗಳನ್ನು ನಿರ್ಲಕ್ಷ್ಯಿಸುತ್ತಿರುವುದು ಕೋವಿಡ್ 3ನೇ ಅಲೆ ಸುತ್ತ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈರಲ್ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ಧರ್ಮಶಾಲಾದ ಕಿಕ್ಕಿರಿದ ಬೀದಿಯಲ್ಲಿ ನಿಂತು ಜನರಿಗೆ ಮಾಸ್ಕ್ ಧರಿಸುವಂತೆ ಹೇಳುತ್ತಿದ್ದಾನೆ. ಮಾಸ್ಕ್ ಧರಿಸಿದ್ದ ಆತ ಕೈಯಲ್ಲೊಂದು ಪ್ಲಾಸ್ಟಿಕ್ ಲಾಠಿಯನ್ನಿಡಿದಿದ್ದಾನೆ. ಮಾಸ್ಕ್ ಧರಿಸದವರಿಗೆಲ್ಲ ಮಾಸ್ಕ್ ಧರಿಸುವಂತೆ ಬಾಲಕ ಹೇಳುತ್ತಿದ್ದರೂ ಜನ ಮಾತ್ರ ತಮಗೇನು ಸಂಬಂಧವೇ ಇಲ್ಲದಂತೆ ಹುಡುಗನ ಮನವಿಯನ್ನು ಗಮನಕ್ಕೆ ತೆಗೆದುಕೊಳ್ಳದೆ ತೆರಳುತ್ತಿರುವ ದೃಶ್ಯವಿದೆ. ಈ ವಿಡಿಯೊವನ್ನು ಹಲವಾರು ಟ್ವಿಟರ್ ಬಳಕೆದಾರರು ಮತ್ತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ವಿಡಿಯೊಗೆ ಮಾಡಿರುವ ಕಮೆಂಟ್‌ಗಳು
ವಿಡಿಯೊಗೆ ಮಾಡಿರುವ ಕಮೆಂಟ್‌ಗಳು

ಕೋವಿಡ್-19 ನಿಯಮಗಳನ್ನು ಪಾಲಿಸುವಂತೆ ಜನರನ್ನು ಕೇಳುವ 'ಪುಟ್ಟ ಕೊರೊನಾ ಯೋಧ' ಎಂದು ಕೆಲವರು ಪ್ರಶಂಸಿಸುತ್ತಿದ್ದರೆ, ಇನ್ನು ಕೆಲವರು ಪ್ರವಾಸಿಗರ ವರ್ತನೆಯ ಬಗ್ಗೆ ಕೋಪಗೊಂಡಿದ್ದಾರೆ. 'ಅವರ ಜೀವದ ಬಗ್ಗೆ ಕಾಳಜಿ ವಹಿಸದ ಜನರಿಗೆ ನಾಚಿಕೆಯಾಗಬೇಕು' ಮತ್ತು ತನ್ನ ಕೆಲಸವನ್ನು ಉತ್ತಮವಾಗಿ ಮಾಡಿದ ಹುಡುಗನನ್ನು ನಾನು ಪ್ರಶಂಸಿಸುತ್ತೇನೆ' ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. 'ನೀವು ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತೀರಿ ಮತ್ತು ಮಾಸ್ಕ್‌ಗಳನ್ನು ಧರಿಸದೆ, ಸ್ಥಳೀಯರ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವಿರಿ. ಸುಸಂಸ್ಕೃತ ಜನರಿಗೆ ಹ್ಯಾಟ್ಸ್ ಆಫ್' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT