ಬಾಡಿಗಾರ್ಡ್ ಇಲ್ಲದೆಯೇ ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್‌ಗೆ ಬಂದ ರತನ್ ಟಾಟಾ

ಬೆಂಗಳೂರು: ಟಾಟಾ ಸಮೂಹದ ಉದ್ಯಮಿ ರತನ್ ಟಾಟಾ ಅವರ ಸರಳತೆಗೆ ಮತ್ತೊಮ್ಮೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬಹುಕೋಟಿ ಉದ್ಯಮಗಳ ಒಡೆಯರಾಗಿದ್ದರೂ ರತನ್ ಟಾಟಾ ಅವರು ಅತ್ಯಂತ ಸರಳ ಬದುಕಿನ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಜೀವನ ನಡೆಸುತ್ತಿದ್ದಾರೆ.
ಅವರ ಸರಳತೆಯನ್ನು ಮತ್ತೊಮ್ಮೆ ಜನರು ಕಂಡು, ಕೊಂಡಾಡಿದ್ದಾರೆ.
ಮುಂಬೈನ ತಾಜ್ ಹೋಟೆಲ್‌ಗೆ ಯಾವುದೇ ಭದ್ರತಾ ಸಿಬ್ಬಂದಿ, ಆಪ್ತ ಸಹಾಯಕರ ನೆರವಿಲ್ಲದೆ ಟಾಟಾ ನ್ಯಾನೋ ಕಾರಿನಲ್ಲಿ ಬಂದ ರತನ್ ಟಾಟಾ, ನಂತರ ಅಲ್ಲಿನ ಸಿಬ್ಬಂದಿ ಜತೆಗೆ ವಾಪಸ್ ತೆರಳುತ್ತಿರುವ ವಿಡಿಯೊ ಒಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ವೈರಲ್ ಭಯಾನಿ ಅವರು ಈ ವಿಡಿಯೊವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ರತನ್ ಟಾಟಾ ಅವರ ಸರಳತೆಗೆ ಇದೊಂದು ನಿದರ್ಶನ ಎಂದಿದ್ದಾರೆ.
‘ಅಸನಿ’ ಚಂಡಮಾರುತ: ಆಂಧ್ರದ ಸಮುದ್ರದಲ್ಲಿ ತೇಲಿ ಬಂತೇ ಚಿನ್ನದ ರಥ? ವಿಡಿಯೊ ವೈರಲ್
ಟಾಟಾ ಸಮೂಹ ತಾಜ್ ಹೋಟೆಲ್‌ಗಳ ಒಡೆತನ ಹೊಂದಿದೆ. ಅಲ್ಲದೆ, ಟಾಟಾ ಮೋಟಾರ್ಸ್ ತಯಾರಿಸಿರುವ ಕಡಿಮೆ ಬೆಲೆಯ, ಸರಳ ಕಾರು ಎಂದೇ ಹೆಸರು ಗಳಿಸಿದ ಟಾಟಾ ನ್ಯಾನೋ ಕಾರನ್ನೇ ರತನ್ ಟಾಟಾ ಬಳಸುತ್ತಿದ್ದಾರೆ. ಹೀಗಾಗಿ ಅವರ ಸರಳತೆ ಕಂಡು ನೆಟ್ಟಿಗರು, ಫಿದಾ ಆಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.