ಶುಕ್ರವಾರ, ಮೇ 20, 2022
19 °C

ವಿಡಿಯೊ ವೈರಲ್: ಇಲ್ಲಿ ಮಸಾಲೆ ದೋಸೆಯ ಐಸ್‌ಕ್ರೀಂ ರೋಲ್ ಮಾಡ್ತಾರೆ ನೋಡಿ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಟರ್ನೆಟ್‌ನಲ್ಲಿ ವಿವಿಧ ಬಗೆಯ ಫ್ಯೂಶನ್‌ ಫುಡ್‌ಗಳ ವಿಡಿಯೊಗಳನ್ನು ನೋಡಿರಬಹುದು. ಆದರೆ, ಇದೀಗ ಮಸಾಲೆ ದೋಸೆಯನ್ನು ಐಸ್‌ಕ್ರೀಂನೊಂದಿಗೆ ಬೆರೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ದಿ ಗ್ರೇಟ್‌ ಇಂಡಿಯನ್ ಫೂಡಿ’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ.

ಅನೇಕರು ಊಟ ಮಾಡಿದ ಬಳಿಕ ರುಚಿಕರವಾದ ಐಸ್‌ಕ್ರೀಂ ಅನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಐಸ್‌ಕ್ರೀಂ ಅನ್ನು ಮಸಾಲೆ ದೋಸೆಯೊಂದಿಗೆ ಸೇರಿಸಿ ಮಿಶ್ರಣ ಮಾಡಿ ರೋಲ್ ಮಾಡಿದ್ದಾರೆ.  ಸದ್ಯ ವೈರಲ್‌ ಆಗಿರುವ ಈ ವಿಡಿಯೊವನ್ನು 18 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮೊದಲಿಗೆ ಮಸಾಲೆ ದೋಸೆಯನ್ನು ಟೇಬಲ್‌ ಮೇಲೆ ಚೂರು ಚೂರಾಗಿ ಬೇರ್ಪಡಿಸಲಾಗುತ್ತದೆ. ಬಳಿಕ ಐಸ್‌ಕ್ರೀಂ ಅನ್ನು ಅದರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ. ಆ ಮಿಶ್ರಣ ಹದಕ್ಕೆ ಬಂದ ಬಳಿಕ ರೋಲ್‌ಗಳನ್ನಾಗಿ ಮಾಡಿ ಆಲೂಗಡ್ಡೆ ಪಲ್ಯ ಮತ್ತು ಚಟ್ನಿಯೊಂದಿಗೆ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊ ವೀಕ್ಷಿಸಿರುವ ದೋಸೆ ಪ್ರಿಯರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

‘ದೆಹಲಿಯ ಈ ತಿಕ್ಕಲು ವ್ಯಕ್ತಿ  ದಕ್ಷಿಣ ಭಾರತದ ಒಳ್ಳೆಯ ಆಹಾರವನ್ನು ನೋಡಲು ಸಹ ಕೆಟ್ಟದಾಗಿರುವಂತೆ ಮಾಡಿದ್ದಾನೆ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

‘ರೋಟಿ, ಸಬ್ಜಿ, ರಾಜ್ಮಾ ಚಾವಲ್, ಚೋಲೆ ಭಟೂರೆ ಜೊತೆ ಐಸ್‌ಕ್ರೀಂ ತಿನ್ನಲು ಕಾಯುತ್ತಿದ್ದೇನೆ’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಓದಿ... ಸಲ್ಮಾನ್‌ ರಾತ್ರಿ 12 ಗಂಟೆಯ ನಂತರ ಫೋನ್ ಮಾಡುತ್ತಾರೆ: ಲಾರಾ ದತ್ತಾ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು