ಬೆಂಗಳೂರು: ಟೆನ್ನಿಸ್ ಲೋಕದ ಸರ್ವಶ್ರೇಷ್ಠ ವಿಂಬಲ್ಡನ್ ಟೂರ್ನಿಯಲ್ಲಿ ಅನೇಕ ರೋಚಕ ಸಂಗತಿಗಳು ನಡೆಯುವುದುಂಟು. ಈಗಾಗಲೇ ಇಂತಹ ಅನೇಕ ಸಂಗತಿಗಳು ಅಲ್ಲಿ ದಾಖಲಾಗಿವೆ.

ಇದೇ ವಿಂಬಲ್ಡನ್‌ನಲ್ಲಿ ಏಳು ಬಾರಿ ಚಾಂಪಿಯನ್ ಆಗಿರುವ ಜರ್ಮನಿಯ ಮಾಜಿ ಟೆನ್ನಿಸ್ ತಾರೆ ಸ್ಟೇಪಿ ಗ್ರಾಫ್ ಅವರಿಗೆ ಸಂಬಂಧಿಸಿದ ವಿಡಿಯೊ ಒಂದು ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಜೂನ್ 14 ಕ್ಕೆ ತಮ್ಮ 52 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸ್ಟೇಪಿ, ಲಕ್ಷಾಂತರ ಅಭಿಮಾನಿಗಳಿಂದ ಶುಭಾಶಯಗಳನ್ನು ಸ್ವೀಕರಿಸಿದರು. ಇದೇ ವೇಳೆ ಅವರ ಅಭಿಮಾನಿಗಳು ಶುಭಾಶಯ ಕೋರುವ ನೆಪದಲ್ಲಿ ಅವರ ಹಳೆಯ ವಿಡಿಯೊ ಒಂದನ್ನು ಹಂಚಿಕೊಂಡು ‘ವುಮನ್ ವಿಲ್ ಬಿ ವುಮನ್‘ ಎಂದು ಟ್ರೋಲ್ ಮಾಡಿದ್ದಾರೆ.

1996 ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ವಿಂಬಲ್ಡನ್‌ಟೂರ್ನಿಯ ಪಂದ್ಯವೊಂದರಲ್ಲಿ ಸ್ಟೇಪಿ ಅವರ ಅಭಿಮಾನಿಯೊಬ್ಬ ಆಟ ನಡೆಯುವ ವೇಳೆ, ‘ಸ್ಟೇಪಿ ನೀನು ನನ್ನನ್ನು ಮದುವೆ ಆಗುತ್ತಿಯಾ?‘ ಎಂದು ಮದುವೆ ಪ್ರಸ್ತಾವನೆ ಮಾಡುತ್ತಾನೆ. ಈ ವೇಳೆ ಸ್ಟೇಪಿ ಖ್ಯಾತಿಯ ಉತ್ತುಂಗದಲ್ಲಿದ್ದರು. ಅಭಿಮಾನಿಯ ಅನಿರೀಕ್ಷಿತ ಪ್ರಸ್ತಾವನೆಗೆ ಸ್ವಲ್ಪವೂ ಕೋಪ ಮಾಡಿಕೊಳ್ಳದೇ ‘ನೀನು ಎಷ್ಟು ಹಣವನ್ನು ಸಂಪಾದಿಸಿದ್ದೀಯಾ?‘ ಎಂದುಸ್ಟೇಪಿ ಕೇಳುತ್ತಾರೆ.

ಸ್ಟೇಪಿ ಅವರ ಉತ್ತರಕ್ಕೆ ಟೆನ್ನಿಸ್ ಕೋರ್ಟ್‌ನಲ್ಲಿದ್ದ ಪ್ರೇಕ್ಷಕರು ಗೊಳ್ಳೆಂದು ನಗುತ್ತಾರೆ. ನಂತರ ಸ್ಟೇಪಿ ಆಟ ಮುಂದುವರೆಸುತ್ತಾರೆ. ಅವರ ಜನ್ಮದಿನದ ಪ್ರಯುಕ್ತ ಅನೇಕರು ಈ ವಿಡಿಯೊ ಹಂಚಿಕೊಂಡು, ವುಮನ್ ವಿಲ್ ಬಿ ವುಮನ್ (ಮಹಿಳೆ ಯಾವತ್ತಿದ್ದರೂ ಮಹಿಳೆಯೇ) ಎಂದು ಮಹಿಳೆಯರನ್ನು ಟ್ರೋಲ್ ಮಾಡಲು ಬಳಸಿಕೊಂಡಿದ್ದಾರೆ.ಅಲ್ಲದೇ ಈ ವಿಡಿಯೊ ವಿಂಬಲ್ಡನ್‌ಟೂರ್ನಿಯಲ್ಲೇ ಒಂದು ಪ್ರಮುಖ ಸಂಗತಿಯಾಗಿ ಉಳಿದಿದೆ. ವಿಡಿಯೊ 25 ವರ್ಷ ಹಳೆಯದಾದರೂ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಕೂಡ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

1969 ರಲ್ಲಿ ಜರ್ಮನಿಯಲ್ಲಿ ಜನಿಸಿದ್ದ ಸ್ಟೇಪಿ ಅವರು ಏಳು ಬಾರಿವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದರು. ಅಲ್ಲದೇ 22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದರು. ಸದ್ಯ ಅವರು ಅಮೆರಿಕದ ನವೆಡಾನಲ್ಲಿ ನೆಲಸಿದ್ದಾರೆ.

ಇದನ್ನೂ ಓದಿ:ತಿಮಿಂಗಿಲ ನುಂಗಿದರೂ ಬದುಕಿ ಬಂದೆ: ಸೀ ಡೈವರ್ ಹೇಳಿದ ರೋಚಕ ಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.