ಭಾನುವಾರ, ಅಕ್ಟೋಬರ್ 24, 2021
27 °C

ಬ್ರ್ಯಾಂಡ್ ಬೆಂಗಳೂರು ವಿಡಿಯೊ: ದಾಸನಪುರ ಎಪಿಎಂಸಿಗೆ ಮತ್ತೆ ಗ್ರಹಣ

ಯಶವಂತಪುರ ಎಪಿಎಂಸಿಯ ದಟ್ಟಣೆ ಕಡಿಮೆ ಮಾಡಲು ತುಮಕೂರು ರಸ್ತೆಯ ಮಾಕಳಿಯಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿನ ದಾಸನಪುರದ ಬಳಿ 67 ಎಕರೆ ವಿಶಾಲ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಲಾಗಿದೆ. ಕೃಷಿ ಮಾರುಕಟ್ಟೆ ಇಲಾಖೆಯ ಗೊಂದಲದ ತೀರ್ಮಾನಗಳಿಂದಾಗಿ 12 ವರ್ಷ ಕಳದರೂ ಈ ಮಾರುಕಟ್ಟೆ ಪರಿಪೂರ್ಣವಾಗಿ ಕಾರ್ಯಾರಂಭ ಮಾಡಲು ಸಾಧ್ಯವೇ ಆಗಿಲ್ಲ. ಕೋವಿಡ್‌ ಸಂದರ್ಭದಲ್ಲಿ ಯಶವಂತಪುರದಿಂದ ದಾಸನಪುರಕ್ಕೆ ಈರುಳ್ಳಿ ಮತ್ತು ಆಲೂಗಡ್ಡೆ ವಹಿವಾಟನ್ನು ಸ್ಥಳಾಂತರ ಮಾಡಲಾಗಿತ್ತು. ಆದರೆ, ಅದರಲ್ಲಿ 309 ವರ್ತಕರು ಮತ್ತೆ ಯಶವಂತಪುರಕ್ಕೆ ವಾಪಸ್ ಹೋಗಿದ್ದಾರೆ. ಒಂದಷ್ಟು ದಿನ ಕಳೆಗಟ್ಟಿದ್ದ ದಾಸನಪುರ ಮಾರುಟಕ್ಟೆ ಈಗ ಮತ್ತೆ ಕಳೆಗುಂದಿದೆ. ಇಲ್ಲೇ ಉಳಿದಿರುವ ಶೇ 35 ವರ್ತಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...