ಶುಕ್ರವಾರ, ಆಗಸ್ಟ್ 12, 2022
23 °C

ಬೆಂಗಳೂರು ಫ್ಲವರ್‌ ಷೋ: ಲಾಲ್‌ಬಾಗ್‌ನಲ್ಲಿ ಅಪ್ಪು– ರಾಜ್‌ ‘ಹೂವಿನ ಲೋಕ

ವಾಯುವಿಹಾರಿಗಳ ನೆಚ್ಚಿನ ತಾಣ ಲಾಲ್‌ಬಾಗ್ ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬಣ್ಣ ಬಣ್ಣದ ತರಹೇವಾರಿ ಹೂವುಗಳು ಜನರನ್ನು ಸೆಳೆಯುತ್ತಿವೆ. ಮತ್ತೊಂದೆಡೆ, ಸ್ವಾತಂತ್ರ್ಯೋತ್ಸವದ ಅಂಗವಾಗಿ ಡಾ.ರಾಜ್, ಪುನೀತ್ ಪರಿಕಲ್ಪನೆ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.